ಈ ಹಿರಿಯ ನಟಿ ಮೇಲೆ ಪ್ರಭಾಸ್ ಗೆ ಆಗಿತ್ತು ಕ್ರಶ್; ಸತ್ಯ ಬಿಚ್ಚಿಟ್ಟ ನಟಿ

ತೆಲುಗು ಸಿನಿಮಾರಂಗದ ಖ್ಯಾತ ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಹೀರೋ. ಬಾಹುಬಲಿ ಸಿನಿಮಾ ಬಳಿಕ ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ ಪ್ರಭಾಸ್. ಅದರಲ್ಲೂ ಮಹಿಳಾ ಅಭಿಮಾನಿಗಳ ಸಂಖ್ಯೆಯೇ ಜಾಸ್ತಿ ಎಂದರು ಅಚ್ಚರಿ ಇಲ್ಲ.

ಪ್ರಭಾಸ್ ಮೇಲೆ ಅದೆಷ್ಟು ಹೆಣ್ಣು ಮಕ್ಕಳಿಗೆ ಕ್ರಶ್ ಆಗಿದೆಯೋ ಗೊತ್ತಿಲ್ಲ. ಆದರೆ ಪ್ರಭಾಸ್ ಗೆ ಕ್ರಶ್ ಆದ ವಿಚಾರ ಬಹಿರಂಗವಾಗಿದೆ. ಹೌದು, ಹಿರಿಯ ನಟಿಯ ಮೇಲೆ ಪ್ರಭಾಸ್ ಗೆ ಕ್ರಶ್ ಆಗಿತ್ತಂತೆ. ಈ ವಿಚಾರವನ್ನು ಪ್ರಭಾಸ್ ನಟಿಯ ಜೊತೆ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಪ್ರಭಾಸ್ ಗೆ ಕ್ರಶ್ ಆಗಿದ್ದು ಮತ್ಯಾರ ಮೇಲು ಅಲ್ಲ ನಟಿ ಭಾಗ್ಯಶ್ರೀ.

ಹೌದು, ಹಿರಿಯ ನಟಿ ಭಾಗ್ಯಶ್ರೀ ಮೇಲೆ ಪ್ರಭಾಸ್ ಗೆ ಕ್ರಶ್ ಆಗಿದ್ದಂತೆ. ಈ ವಿಚಾರವನ್ನು ನಟಿ ಭಾಗ್ಯಶ್ರೀ ಇತ್ತೀಚಿಗೆ ಬಹಿರಂಗ ಪಡಿಸಿದ್ದಾರೆ. ನಟಿ ಭಾಗ್ಯಶ್ರೀ ಸದ್ಯ ಪ್ರಭಾಸ್ ಅಭಿನಯದ ರಾಧೆ ಶ್ಯಾಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ಈ ವಿಚಾರವನ್ನು ಪ್ರಭಾಸ್, ಭಾಗ್ಯಶ್ರೀ ಬಳಿ ಹೇಳಿಕೊಂಡಿದ್ದಾರಂತೆ.

Prabhas Had Crush On Me Says Former Bollywood Actress Bhagyashree

ನಟಿ ಭಾಗ್ಯಶ್ರೀ ದಕ್ಷಿಣ ಭಾರತೀಯ ಸಿನಿಮಾಗಳ ಜೊತೆಗೆ ಹಿಂದಿಯಲ್ಲೂ ಖ್ಯಾತಿಗಳಿಸಿದ್ದಾರೆ. ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಮ್ಮಾವ್ರ ಗಂಡ, ಗಂಡುಗಲಿ ಕುಮಾರ ರಾಮ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಇತ್ತೀಚಿಗೆ ರಿಲೀಸ್ ಆದ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದಲ್ಲೂ ಭಾಗ್ಯಶ್ರೀ ನಟಿಸಿದ್ದಾರೆ.

ಇನ್ನೂ ಪ್ರಭಾಸ್ ಅಭಿನಯದ ರಾಧೆ ಶ್ಯಾಮ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಚಿತ್ರತಂಡ ವಿದೇಶದಲ್ಲಿ ನೆಲೆಸಿದ್ದು ಚಿತ್ರೀಕರಣದಲ್ಲಿ ನಿರತವಾಗಿದೆ. ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Tollywood Actor Prabhas Had Crush On Me Says Former Bollywood Actress Bhagyashree
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X