ಮತ್ತೆ ಹೆಚ್ಚಿತು ಪ್ರಭಾಸ್ ಸಂಭಾವನೆ: 2ನೇ ಸ್ಥಾನದಲ್ಲಿ ಟಾಲಿವುಡ್ ಡಾರ್ಲಿಂಗ್!
ಸದ್ಯ ಸಿನಿಮಾರಂಗದ ಪರಿಸ್ಥಿತಿ ಬದಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿದ್ದ ಹಾಗೆ, ಸಿನಿಮಾ ಮೇಕಿಂಗ್, ಕಲಾವಿದರ ಸಂಭಾವನೆಯ ಸ್ಥಿತಿ ಗತಿ ಕೂಡ ಬದಲಾಗಿದೆ. ಸದ್ಯ ಸ್ಟಾರ್ ನಟರ ಸಂಭಾವನೆ ಬಗ್ಗೆ ಮಾತನಾಡುವ ಹಾಗೆ ಇಲ್ಲ. ಎಲ್ಲರೂ ಈಗ 100 ಕೋಟಿಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.
ಅದರಲ್ಲೂ ಈ ಮುಂಚೆ 100 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾ ಇದ್ದ ನಟರ ಪೈಕಿ ಬಾಲಿವುಡ್ ನಟರೆ ಹೆಚ್ಚಿದ್ದರು. ಈಗ ಸೌತ್ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರ ಲಿಸ್ಟ್ ಹೆಚ್ಚಾಗಿದೆ. ಸೌತ್‌ನ ಅನೇಕ ನಟರು ತಮ್ಮ ಸಂಭಾವನೆಯನ್ನು 100 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ.
ನಟ ರಜನಿಕಾಂತ್ ಬಳಿಕ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಎನಿಸಿಕೊಂಡಿದ್ದಾರೆ ನಟ ಪ್ರಭಾಸ್. ಅದು ಹೇಗೆ ಅಂದುಕೊಂಡಿರಾ. ನಟ ಪ್ರಭಾಸ್ ಮತ್ತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ 2ನೇ ಸ್ಥಾನದಲ್ಲಿದ್ದಾರೆ.

100 ಕೋಟಿ ಸರದಾರನಾಗಿದ್ದ ಪ್ರಭಾಸ್!
ಪ್ರಭಾಸ್ 10 ವರ್ಷಗಳಲ್ಲಿ 100 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಮೂರನೇ ದೊಡ್ಡ ನಟ. ಈ ಹಿಂದೆ 'ಸುಲ್ತಾನ್' ಮತ್ತು 'ಟೈಗರ್ ಜಿಂದಾ ಹೈ' ಚಿತ್ರಗಳಿಗೆ ಸಲ್ಮಾನ್ ಖಾನ್ 100 ಕೋಟಿ ಪಡೆದಿದ್ದರು. ಇನ್ನು ಅಕ್ಷಯ್ ಕುಮಾರ್ 'ಬೆಲ್ ಬಾಟಮ್' ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದೀಗ ಪ್ರಭಾಸ್ 100 ಕೋಟಿಯ ಗಡಿ ದಾಟಿದ್ದಾರೆ. ಸದ್ಯ ತಮ್ಮ ಮುಂದಿನ ಚಿತ್ರಗಳಿಗೆ 120 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

100 ರಿಂದ 120 ಕೋಟಿ!
ನಟ ಪ್ರಭಾಸ್ 'ಆದಿ ಪುರುಷ್' ಸಿನಿಮಾಗಾಗಿ 100 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು. ಇದ ಜೊತೆಗೆ ಅವರು 150 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಆದರೆ ಈಗ ಪ್ರಭಾಸ್ ಮತ್ತೆ 25% ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಹಾಗಾಗಿ ಈಗ 100 ಕೋಟಿ ಇಂದ 120 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರದಲ್ಲಿ ಪ್ರಭಾಸ್ 2ನೇ ಸ್ಥಾನದಲ್ಲಿ ಇದ್ದಾರೆ.

150 ಕೋಟಿ ಪಡೆಯುವ ರಜನಿಕಾಂತ್!
ಇನ್ನು ನಟ ರಜನಿಕಾಂತ್ ಸಿನಿಮಾ 150 ಕೋಟಿ ರೂ. ಸಂಭಾವನೆ ಪಡೆದು ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ನಟ ಎನಿಸಿಕೊಂಡಿದ್ದಾರೆ. ನಟ ರಜನಿಕಾಂತ್ ತಮ್ಮ 169ನೇ ಸಿನಿಮಾಗೆ 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎನಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಕೆಲಸಗಳು ಆರಂಭವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.

ಮತ್ತಷ್ಟು ಹೆಚ್ಚಲಿದೆ ಪ್ರಭಾಸ್ ಸಂಭಾವನೆ!
ಇನ್ನು ನಟ ಪ್ರಭಾಸ್ ಸಂಭಾವನೆ 100 ಕೋಟಿಗೆ ಸೀಮಿತ ಆಗೋದಿಲ್ಲ. ಯಾಕೆಂದರೆ ಪ್ರಭಾಸ್ ಮುಂದಿನ ಸಿನಿಮಾಗಳು ಹಿಟ್ ಲಿಸ್ಟ್ ಸೇರಿದರೆ. ಪ್ರಭಾಸ್ ಸಂಭಾವನೆ ಮತ್ತಷ್ಟು ಹೆಚ್ಚಾಗಲಿದೆ. 'ಸಲಾರ್', 'ಆದಿಪುರುಷ್, 'ಪ್ರಾಜೆಕ್ಟ್ ಕೆ' ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಬಳಿಕ 'ಸ್ಪಿರಿಟ್' ಮತ್ತು ನಿರ್ದೇಶಕ ಮಾರುತಿ ಸಿನಿಮಾಗಳನ್ನು ಪ್ರಾರಂಭಿಸಲಿದ್ದಾರೆ. ಹಾಗಾಗಿ ಪ್ರಭಾಸ್ ಸಂಭಾವನೆ ಮತ್ತಷ್ಟು ಹೆಚ್ಚಾಗಲಿದೆ.


Click it and Unblock the Notifications











