ಪ್ರಭಾಸ್ ಬಹಳ ತುಂಟ ಎಂದ ನಟಿ ಪೂಜಾ ಹೆಗ್ಡೆ
ಸಿನಿಮಾಗಳಲ್ಲಿ ಖಡಕ್ ಡೈಲಾಗ್‌ಗಳನ್ನು ಹೇಳುವ, ನಾಯಕಿಯೊರೊಂದಿಗೆ ರೊಮಾನ್ಸ್ ಮಾಡುವ ನಟ ಪ್ರಭಾಸ್ ಸಂಕೋಚದ ವ್ಯಕ್ತಿತ್ವದವರು. ನಾಚಿಕೆ ಸ್ವಭಾವದವರು.
ಹೆಚ್ಚು ಸಂದರ್ಶನಗಳಲ್ಲಿ ಭಾಗವಹಿಸದ, ಖಾಸಗಿ ಪ್ರಶ್ನೆಗಳನ್ನು ಕೇಳಿದಾಗ ಸಂಕೋಚ ಪಡುವ, ಹೆಚ್ಚು ಮಾತನಾಡಲು ಇಷ್ಟ ಪಡದ ವ್ಯಕ್ತಿ ಪ್ರಭಾಸ್. ಆದರೆ ಅವರ ರಾಧೆ-ಶ್ಯಾಮ್ ಸಿನಿಮಾದ ನಾಯಕ ನಟಿ ಪೂಜಾ ಹೆಗ್ಡೆ, ಪ್ರಭಾಸ್ ಬಗ್ಗೆ ಬೇರೆಯದ್ದೇ ವಿಷಯ ಹೇಳಿದ್ದಾರೆ.
ಇತ್ತೀಚೆಗಷ್ಟೆ ಇಟಲಿಯಿಂದ ಶೂಟಿಂಗ್ ಮುಗಿಸಿ ವಾಪಸ್ಸಾಗಿರುವ ನಟಿ ಪೂಜಾ ಹೆಗ್ಡೆ, ಸಂದರ್ಶನವೊಂದನ್ನು ನೀಡಿದ್ದು, ಪ್ರಭಾಸ್ ಬಗ್ಗೆ ಆಸಕ್ತಿಕರ ಮಾಹಿತಿ ಹೊರಹಾಕಿದ್ದಾರೆ.

ಪ್ರಭಾಸ್ ಸಂಕೋಚದ ಸ್ವಭಾದವರೇನಲ್ಲ: ಪೂಜಾ
'ಪ್ರಭಾಸ್ ಸಂಕೋಚದ ಸ್ವಭಾವದವರೇನಲ್ಲ, ಆತ ದಡ್ಡ ಅಥವಾ ಅಮಾಯಕ ಹಾಗೂ ಅಷ್ಟೇ ತುಂಟತನ ಮಾಡುವ ವ್ಯಕ್ತಿ' ಎಂದಿದ್ದಾರೆ ನಟಿ ಪೂಜಾ ಹೆಗ್ಡೆ. ಇದಕ್ಕೆ ಕೆಲವು ಉದಾಹರಣೆಗಳನ್ನೂ ಸಹ ನೀಡಿದ್ದಾರೆ ಪೂಜಾ.

ಪೂಜಾ ಬಗ್ಗೆ ಪ್ರಭಾಸ್ ಹಾಸ್ಯ
ಶೂಟಿಂಗ್ ಸ್ಥಳದಲ್ಲಿ ಪೂಜಾ ಬಗ್ಗೆ ಸಾಕಷ್ಟು ತಮಾಷೆ ಮಾಡುತ್ತಿದ್ದರಂತೆ ಪ್ರಭಾಸ್. ಅದರಲ್ಲಿಯೂ ಅವರು ತೆಲುಗು-ಹಿಂದಿ ಎರಡೂ ಕಡೆ ಸಿನಿಮಾ ಮಾಡುತ್ತಿರುವ ಬಗ್ಗೆ ಬಹಳ ಹಾಸ್ಯ ಮಾಡುವುದು ರೇಗಿಸುವುದು ಮಾಡಿದರಂತೆ. ಇದಕ್ಕೆ ಪ್ರತಿಯಾಗಿ ಪೂಜಾ ಸಹ ಚೆನ್ನಾಗಿಯೇ ಪ್ರಭಾಸ್ ಕಾಲೆಳೆದರಂತೆ

ಇಟಲಿಯಲ್ಲಿ ಚಿತ್ರೀಕರಣದ ಅನುಭವದ ಬಗ್ಗೆ ಮಾತು
ಇಟಲಿಯಲ್ಲಿ ಚಿತ್ರೀಕರಣದ ಅನುಭವದ ಬಗ್ಗೆಯೂ ಮಾತನಾಡಿರುವ ಪೂಜಾ, ಸೆಟ್‌ನಲ್ಲಿ 'ನೋ ಹಗ್' ನಿಯಮ ಮಾಡಲಾಗಿತ್ತಂತೆ. ಯಾರನ್ನು ಯಾರೂ ಸಹ ತಬ್ಬಿಕೊಳ್ಳುವಂತಿರಲಿಲ್ಲವಂತೆ. ಅಲ್ಲದೆ, ಪ್ರತಿ ಐದು ದಿನಕ್ಕೊಮ್ಮೆ ಎಲ್ಲರಿಗೂ ಕೋವಿಡ್ ಪರೀಕ್ಷೆ ಸಹ ಮಾಡಲಾಗುತ್ತಿತ್ತಂತೆ.

ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಬಿಡುಗಡೆಗೆ ತಯಾರು
ನಟಿ ಪೂಜಾ ಹೆಗ್ಡೆ ಪ್ರಸ್ತುತ ತೆಲುಗಿನ ಬ್ಯುಸಿ ನಟಿಯಲ್ಲೊಬ್ಬರು. ಇತ್ತೀಚೆಗಷ್ಟೆ ತನ್ನ ಸಂಭಾವನೆ ಏರಿಸಿಕೊಂಡಿರುವ ಪೂಜಾ ಹೆಗ್ಡೆ, ತಾವು ನಟಿಸಿರುವ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಇದರ ನಂತರ ರಾಧೆ-ಶ್ಯಾಂ ಬಿಡುಗಡೆ ಆಗಲಿದೆ. ಹಿಂದಿಯಲ್ಲಿ ಸಲ್ಮಾನ್ ಜೊತೆಗೆ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಪೂಜಾ.


Click it and Unblock the Notifications











