'ಕಲ್ಕಿ' ₹1000 ಕೋಟಿ ಕಲೆಕ್ಷನ್ ಫೇಕ್? ಪ್ರಭಾಸ್ ಈ ನಡೆಗೆ ಕಾರಣವೇನು?

ತೆಲುಗಿನ 'ಕಲ್ಕಿ 2898 AD' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ನಾಗ್‌ ಅಶ್ವಿನ್ ವಿಷನ್, ಪ್ರಭಾಸ್, ಅಮಿತಾಬ್ ಬಚ್ಚನ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ವೈಜಯಂತಿ ಮೂವೀಸ್ ಸಂಸ್ಥೆ ಸಿನಿಮಾ ನಿರ್ಮಿಸಿ ಗೆದ್ದಿದೆ.

ಎರಡು ಭಾಗಗಳಾಗಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಮುಂದಿನ ವರ್ಷ ಸೀಕ್ವೆಲ್ ತೆರೆಗೆ ಬರುವ ಸಾಧ್ಯತೆಯಿದೆ. 'ಕಲ್ಕಿ 2898 AD' ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ರೆಸ್ಪಾನ್ಸ್ ಸಿಗ್ತಿಲ್ಲ. ಕೆಲವರಿಗೆ ಸಿನಿಮಾ ಇಷ್ಟವಾಗಲೇ ಇಲ್ಲ. ಆದರೂ ಯಾವುದೇ ದೊಡ್ಡ ಸಿನಿಮಾ ಇಲ್ಲ ಎನ್ನುವ ಕಾರಣಕ್ಕೆ 'ಕಲ್ಕಿ 2898 AD' ನೋಡುವಂತಾಗಿದೆ. ಎರಡು ವಾರಗಳಲ್ಲಿ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.

Prabhas kalki 2898 ad box office collection is fake it did not collect 1000 cr

ಜೂನ್ 27ಕ್ಕೆ 'ಕಲ್ಕಿ 2898 AD' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದ ಟೀಸರ್, ಟ್ರೈಲರ್ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೂ ಒಂದು ರೇಂಜ್‌ಗೆ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿತ್ತು. ಆದರೆ ತೆರೆಮೇಲೆ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಕೊನೆ ಅರ್ಧ ಗಂಟೆ ಬಿಟ್ಟರೆ ಸಿನಿಮಾದಲ್ಲಿ ಏನೂ ಇಲ್ಲ ಎಂದು ಸಾಕಷ್ಟು ಜನ ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಸಂಪೂರ್ಣ ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳುವುದು ಬಿಟ್ಟು ಎಳೆದಾಡುವ ಅವಶ್ಯಕತೆ ಏನಿತ್ತು? ಎಂದು ಕೇಳುತ್ತಿದ್ದಾರೆ. ಕೊನೆ ಅರ್ಧ ಗಂಟೆ ಸಿನಿಮಾ ನೋಡೋಕೆ ಇನ್ನುಳಿದ ಎರಡೂವರೆ ಗಂಟೆ ಸಹಿಸಿಕೊಳ್ಳುವುದು ಕಷ್ಟ ಎನ್ನುವ ಕಾಮೆಂಟ್ಸ್ ಸಹ ಬಂದಿದೆ. ಆದರೆ ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಅಭಿನಯಕ್ಕೆ ಬಹುಪರಾಕ್ ಎನ್ನಲಾಗ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಿಗ್‌ಬಿಗೆ ಇಂತಹ ಪಾತ್ರ ಸಿಕ್ಕಿರಲಿಲ್ಲ.

'ಬಾಹುಬಲಿ-2' ಬಳಿಕ ಪ್ರಭಾಸ್ ನಟನೆಯ 'ಕಲ್ಕಿ 2898 AD' ಕೂಡ 1000 ರೂ. ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ. ಈ ಮೂಲಕ 'ಬಾಹುಬಲಿ-2', 'ದಂಗಲ್', 'ಕೆಜಿಎಫ್‌-2', 'ಜವಾನ್', 'ಪಠಾಣ್' ಹಾಗೂ 'ಆರ್‌ಆರ್‌ಆರ್' ಬಳಿಕ 'ಕಲ್ಕಿ' ಈ ಸಾಧನೆ ಮಾಡಿದಂತಾಗಿದೆ. 'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ನಟಿಸಿದ 3 ಸಿನಿಮಾಗಳು ಸೋತಿದ್ದವು. 'ಸಲಾರ್' ಒಂದು ಹಂತಕ್ಕೆ ಗೆಲುವಿನ ನಗೆ ಬೀರಿತ್ತು. ಇದೀಗ 'ಕಲ್ಕಿ' ಸಿನಿಮಾ ಮೂಲಕ ಆ ಗೆಲುವಿನ ಓಟ ಮುಂದುವರೆಸಿದ್ದಾರೆ.

Prabhas kalki 2898 ad box office collection is fake it did not collect 1000 cr

'ಕಲ್ಕಿ 2898 AD' ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಸಿಗದೇ ಇದ್ದರೂ ಮೊದಲ 4 ದಿನಕ್ಕೆ 500 ಕೋಟಿ ರೂ. 16 ದಿನಕ್ಕೆ 1000 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುವುದನ್ನು ಕೆಲವರು ನಂಬುತ್ತಿಲ್ಲ. ಬಝ್ ಕ್ರಿಯೇಟ್ ಮಾಡಲು ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಫೇಕ್ ಕಲೆಕ್ಷನ್ ಲೆಕ್ಕ ಕೊಡುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹೆಚ್ಚಾಗಿದೆ. ಪ್ರಭಾಸ್ ಆ ನಡೆ ಈ ಚರ್ಚೆಗೆ ಮತ್ತಷ್ಟು ಇಂಬು ಕೊಟ್ಟಂತಾಗಿದೆ.

ಇತ್ತೀಚೆಗೆ ಚಿತ್ರತಂಡ 1000 ಕೋಟಿ ರೂ. ಕಲೆಕ್ಷನ್ ವಿಚಾರವನ್ನು ಪೋಸ್ಟರ್‌ ಸಮೇತ ಘೋಷಿಸಿತ್ತು. ಪೋಸ್ಟರ್‌ನಲ್ಲಿ ಕರ್ಣನ ಗೆಟಪ್‌ನಲ್ಲಿ ಪ್ರಭಾಸ್ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಅಭಿಮಾನಿಗಳ ಫೇಸ್‌ಬುಕ್‌, ಇನ್‌ಸ್ಟಾ ಪೇಜ್‌ಗಳಲ್ಲಿ ರಾರಾಜಿಸುತ್ತಿದೆ. ಆದರೆ 'ಕಲ್ಕಿ 2898 AD' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಪೋಸ್ಟರ್‌ ಅನ್ನು ಖುದ್ದು ಪ್ರಭಾಸ್ ಹಂಚಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಂಗ್ ರೆಬಲ್ ಸ್ಟಾರ್ ಅಷ್ಟೇನು ಆಕ್ಟೀವ್ ಆಗಿ ಇರಲ್ಲ. ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡುತ್ತಿರುತ್ತಾರೆ.

ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಕರ್ಣನ ಗೆಟಪ್‌ನಲ್ಲಿರುವ ಪೋಸ್ಟರ್‌ ಅನ್ನುವ ಪ್ರಭಾಸ್ ಹಂಚಿಕೊಂಡಿದ್ದಾರೆ. ಆದರೆ ಅದರಲ್ಲಿ 1000 ಕೋಟಿ ರೂ. ಕಲೆಕ್ಷನ್ ಎಂದು ನಮೂದಿಸಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಅಷ್ಟು ಕಲೆಕ್ಷನ್ ಮಾಡಿಲ್ಲ, ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಸರಿಯಾದ ಲೆಕ್ಕ ಪ್ರಭಾಸ್‌ಗೆ ಗೊತ್ತು. ಅದೇ ಕಾರಣಕ್ಕೆ 1000 ಕೋಟಿ ರೂ. ಕಲೆಕ್ಷನ್ ಪೋಸ್ಟರ್ ಹಂಚಿಕೊಂಡಿಲ್ಲ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.

ಪ್ರಭಾಸ್ ಇಂತಹ ಸಾಕಷ್ಟು ಬಾಕ್ಸಾಫೀಸ್ ಕಲೆಕ್ಷನ್, ದಾಖಲೆಗಳನ್ನು ನೋಡಿದ್ದಾರೆ, ಅವರಿಗೆ ಈ ನಂಬರ್‌ ಗೇಮ್ ಬಗ್ಗೆ ಇಷ್ಟ ಇಲ್ಲ. ಅದೇ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಪ್ರಭಾಸ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕಲೆಕ್ಷನ್ ಏನಿದ್ದರೂ ನಿರ್ಮಾಪಕರಿಗೆ ಸಂಬಂಧಿಸಿದ್ದು. ಹಾಗಾಗಿ ಅವರು ಹಾಕಿಕೊಂಡಿದ್ದಾರೆ. ಪ್ರಭಾಸ್‌ಗೆ ಸಿನಿಮಾ, ಪಾತ್ರ ಮುಖ್ಯ. ಅದಕ್ಕೆ ಹೀಗೆ ಮಾಡಿದ್ದಾರೆ ಎಂದು ಪರ ವಹಿಸಿ ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Telugu actor prabhas latest post sparks debate on kalki 2898 ad collection;
Read more about: prabhas boxofffice tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X