ಭೈರವ- ಬುಜ್ಜಿ ಜುಗಲ್‌ಬಂದಿ; 'ಕಲ್ಕಿ 2898 AD' ಹೊಸ ಟೀಸರ್ ಚಿಂದಿ ಗುರೂ
ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಿದೆ. ಈ ಹಿಂದೆ ಬಂದಿದ್ದ ಟೀಸರ್‌ಗಳು ಕೊಂಚಮಟ್ಟಿಗೆ ನಿರಾಸೆ ಮೂಡಿಸಿದ್ದವು. ಸದ್ಯ ಬುಜ್ಜಿ ಪಾತ್ರ ಪರಿಚಯಿಸಿ ಬಿಡುಗಡೆ ಮಾಡಿರುವ ಟೀಸರ್ ಗಮನ ಸೆಳೆದಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಹೈವೋಲ್ಟೇಜ್ ಸ್ಯಾಂಪಲ್ ರಿವೀಲ್ ಆಗಿದೆ.
ನಾಗ್ ಅಶ್ವಿನ್ ನಿರ್ದೇಶನದ ಚಿತ್ರವನ್ನು ಸುಮಾರು 600 ಕೋಟಿ ಬಜೆಟ್‌ನಲ್ಲಿ ವೈಜಯಂತಿ ಮೂವೀಸ್ ನಿರ್ಮಿಸಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಹಾಗೂ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದಾರೆ. ಜೂನ್ 27ಕ್ಕೆ ವಿಶ್ವದಾದ್ಯಂತ 'ಕಲ್ಕಿ 2898 AD' ಸಿನಿಮಾ ತೆರೆಗೆ ಬರಲಿದೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

'ಕಲ್ಕಿ 2898 AD' ಚಿತ್ರದಲ್ಲಿ ಸೈನ್ಸ್ ಫಿಕ್ಷನ್ ಕಥೆ ಹೇಳಲಾಗುತ್ತಿದೆ. ಭೈರವ ಎನ್ನುವ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಆತನ ಜೊತೆ ಬುಜ್ಜಿ ಎನ್ನುವ ಪುಟ್ಟ ರೋಬೊ ಪಾತ್ರವೂ ಇರಲಿದೆ. ಅದಕ್ಕೆ ಕೀರ್ತಿ ಸುರೇಶ್ ವಾಯ್ಸ್ ಕೊಟ್ಟಿದ್ದಾರೆ. ರಾಮೋಜಿ ಫಿಲ್ಮ್ ಸಿಟಿ ಸುಮಾರು 4 ಕೋಟಿ ವೆಚ್ಚದಲ್ಲಿ ಬುಜ್ಜಿಯನ್ನು ಪರಿಚಯಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಷ್ಟೇ ಅಲ್ಲ, ಬುಜ್ಜಿಯ ಪಾತ್ರ ಪರಿಚಯದ ಸಣ್ಣ ಟೀಸರ್ ಸಹ ಬಂದಿದೆ.
ಇನ್ನು ಬುಜ್ಜಿ ಪುಟ್ಟ ರೋಬೊ ಆಗಿದ್ದರು. ಭೈರವ ಜೊತೆ ಇಬ್ಬರೂ ಓಡಾಡಲು ಒಂದು ವಿಶೇಷ ವಾಹನವೂ ಚಿತ್ರದಲ್ಲಿದೆ. ಒಂದರ್ಥದಲ್ಲಿ ಬುಜ್ಜಿಗೆ ಅದೇ ದೇಹ. ಆ ವಾಹನವನ್ನು ಚಲಾಯಿಸುವ ಮೂಲಕ ಪ್ರಭಾಸ್ ಈವೆಂಟ್‌ಗೆ ಎಂಟ್ರಿ ಕೊಟ್ಟರು. ಪ್ರಭಾಸ್ ಸ್ಟೈಲ್, ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಟೀಸರ್ ಮಾತ್ರ ಮೊದಲ ನೋಟದಲ್ಲೇ ವಾಹ್ ಎನಿಸುವಂತಿದೆ. ಭೈರವ ಹಾಗೂ ಬುಜ್ಜಿ ಜೋಡಿಯ ಆರ್ಭಟ ಸಖತ್ ಕಿಕ್ ಕೊಡುತ್ತದೆ.
ಇಂಗ್ಲೀಷ್ ಸೇರಿ 6 ಭಾಷೆಗಳಲ್ಲಿ ಪ್ಲಾನ್ ವರ್ಲ್ಡ್ ಮಟ್ಟದದಲ್ಲಿ 'ಕಲ್ಕಿ 2898 AD' ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ 6 ಭಾಷೆಯ ಪದಗಳನ್ನು ಬಳಸಿ ಟೀಸರ್ ಎಡಿಟ್ ಮಾಡಿದ್ದಾರೆ. ಭೈರವ- ಬುಜ್ಜಿ ಕ್ಯೂಟ್ ಕ್ಯೂಟ್ ಸಂಭಾಷಣೆ ಅಭಿಮಾನಿಗಳಿಗೆ ಮಜಾ ಕೊಡುತ್ತಿದೆ. ಇನ್ನು ಇತ್ತೀಚೆಗೆ ಪ್ರಭಾಸ್ ಪೋಸ್ಟ್ ಮಾಡಿ ನಮ್ಮ ಜೀವನಕ್ಕೆ ವಿಶೇಷ ವ್ಯಕ್ತಿ ಬರುತ್ತಾರೆ ಎಂದಿದ್ದರು. ಅದೇ ಈ ಬುಜ್ಜಿ ಎನ್ನುವುದು ಬಳಿಕ ಗೊತ್ತಾಗಿತ್ತು.

ಪ್ರಭಾಸ್ ವಿಶೇಷ ವ್ಯಕ್ತಿ ಅಂದಾಕ್ಷಣ ಸಾಕಷ್ಟು ಜನ ಮದುವೆ ವಿಚಾರ ಎಂದುಕೊಂಡಿದ್ದರು. ಈವೆಂಟ್‌ನಲ್ಲಿ ನಿರೂಪಕಿ ಸುಮಾ ಇದೇ ಪ್ರಶ್ನೆ ಪ್ರಭಾಸ್ ಮುಂದಿಟ್ಟರು. ಸರ್, ನಿಮ್ಮ ಪೋಸ್ಟ್ ನೋಡಿ ಸಾಕಷ್ಟು ಹುಡುಗಿಯರ ಹೃದಯ ಒಡೆದು ಹೋಗಿತ್ತು ಎಂದರು. ಇದೇ ಕಾರಣಕ್ಕೆ ನಾನು ಇನ್ನು ಮದುವೆ ಆಗಿಲ್ಲ ಎಂದ ಹೇಳಿ ಪ್ರಭಾಸ್ ನಕ್ಕಿದ್ದಾರೆ.
6000 ಸಾವಿರ ವರ್ಷಗಳ ಕಥೆ 'ಕಲ್ಕಿ 2898 AD' ಚಿತ್ರದಲ್ಲಿದೆ. ಅಂದರೆ ದ್ವಾಪರಯುಗದಲ್ಲಿ ಶುರುವಾಗುವ ಕಥೆ ಕಲಿಯುಗದಲ್ಲಿ ಮತ್ತಷ್ಟು ವರ್ಷ ಮುಂದಕ್ಕೆ ಹೋಗುತ್ತದೆ. 'ಕಲ್ಕಿ' ಅವತಾರದ ಕಾನ್ಸೆಪ್ಟ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ. ಭೂತ ವರ್ತಮಾನ ಭವಿಷ್ಯ ಕಥೆ ಚಿತ್ರದಲ್ಲಿ ಇರಲಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಅಭಿಮಾನಿಗಳಂತೂ ಬಹಳ ಕಾತರದಿಂದ ಸಿನಿಮಾ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











