ಮತ್ತಷ್ಟು ತಡವಾಗುತ್ತಿದೆ 'ಕಲ್ಕಿ' ಎಂಟ್ರಿ: ಅಧಿಕೃತವಾಗಿ ಹೊಸ ರಿಲೀಸ್ ಡೇಟ್ ಘೋಷಣೆ

ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಮೇ 9ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಪ್ರಭಾಸ್ ಜೊತೆಗೆ ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.

ಎಲೆಕ್ಷನ್, ಐಪಿಎಲ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡುತ್ತಾರೆ ಎನ್ನಲಾಗಿತ್ತು. ಅಧಿಕೃತವಾಗಿ ಇದೀಗ ಹೊಸ ಡೇಟ್ ಚಿತ್ರತಂಡ ಘೋಷಿಸಿದೆ. ಸೈನ್ಸ್ ಫಿಕ್ಷನ್ ಚಿತ್ರವನ್ನು ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಕಟ್ಟಿಕೊಡಲಾಗುತ್ತಿದೆ. 'ಮಹಾನಟಿ' ಬಳಿಕ ನಾಗ್‌ ಅಶ್ವಿನ್ 'ಕಲ್ಕಿ 2898 AD' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Prabhas Kalki 2898AD New Release Date announced

ಇಂಗ್ಲೀಷ್ ಸೇರಿ 6 ಭಾಷೆಗಳಲ್ಲಿ 'ಕಲ್ಕಿ 2898 AD' ಸಿನಿಮಾ ತೆರೆಗಪ್ಪಳಿಸಲಿದೆ. ಹಾಲಿವುಡ್‌ನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಈಗಾಗಲೇ ಪ್ರಚಾರ ಕೂಡ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಬಹಳ ದುಬಾರಿ ಸಿನಿಮಾ ಇದು ಎನ್ನಲಾಗುತ್ತಿದೆ. ಪ್ರಭಾಸ್, ಕಮಲ್, ಅಮಿತಾಬ್‌ರಂತಹ ಸ್ಟಾರ್ ನಟರೆಲ್ಲಾ ಒಂದೇ ಚಿತ್ರದಲ್ಲಿ ನಟಿಸಿರುವುದು ಇದೇ ಮೊದಲು.

ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ, ಸಂತೋಷ್ ನಾರಾಯಣನ್ ಸಂಗೀತ 'ಕಲ್ಕಿ 2898 AD' ಚಿತ್ರಕ್ಕಿದೆ. ಮಹಾಭಾರತ ಕಾಲದಿಂದ ಶುರುವಾಗುವ ಈ ಸಿನಿಮಾ ಕಥೆ 2898 ಇಸವಿವರೆಗೂ ಮುಂದುವರೆಯಲಿದೆ. ಭೂತ, ವರ್ತಮಾನ, ಭವಿಷತ್ ಕಾಲದ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಪ್ರಭಾಸ್ 2 ಶೇಡ್‌ಗಳಿರುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪೌರಾಣಿಕ ಅಂಶಗಳ ಜೊತೆಗೆ ಸೈನ್ಸ್ ಫಿಕ್ಷನ್ ವಿಚಾರಗಳು ಸಿನಿಮಾದಲ್ಲಿದೆ.

ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ 'ಕಲ್ಕಿ 2898 AD' ರಿಲೀಸ್ ಡೇಟ್ ಮುಂದೂಡುತ್ತಾರೆ ಎನ್ನುವ ಚರ್ಚೆ ಶುರುವಾಗಿತ್ತು. ಆದರೆ ಸರಿಯಾದ ದಿನಾಂಕ ನಿಗದಿ ಪಡಿಸಲು ಚಿತ್ರತಂಡ ಸಮಯ ತೆಗೆದುಕೊಂಡಿತ್ತು. ಹೇಳಿ ಕೇಳಿ ಬಹುಕೋಟಿ ವೆಚ್ಚದ ಸಿನಿಮಾ. ಹಾಗಾಗಿ ಒಳ್ಳೆ ವೀಕೆಂಡ್‌ ಹುಡುಕಾಟ ನಡೆದಿತ್ತು. ಇದೀಗ ಜೂನ್ 27ರಂದು ಗುರುವಾರವೇ ಸಿನಿಮಾ ತೆರೆಗೆ ಬರಲಿದೆ.

ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ಬಿಗ್‌ ಬಿ ನಟಿಸಿದ್ದಾರೆ. ಇತ್ತೀಚೆಗೆ ಅವರ ಪಾತ್ರ ಪರಿಚಯದ ಟೀಸರ್ ಬಿಡುಗಡೆ ಆಗಿತ್ತು. ಇನ್ನು ಪದ್ಮ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಜೋಡಿಯಾಗಿ ದಿಶಾ ಪಟಾನಿ ಮಿಂಚಿದ್ದಾರೆ. ಕಲಿ ಆಗಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯನ್ನು ಮುಂದುವರೆಸುವ ಬಗ್ಗೆಯೂ ಊಹಾಪೋಹವಿದ್ದು ಸೀಕ್ವೆಲ್ ಬರುವ ಸಾಧ್ಯತೆಯಿದೆ.

'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ನಟಿಸಿದ 3 ಸಿನಿಮಾಗಳು ಸೋತಿದ್ದವು. ಆದರೆ 'ಸಲಾರ್' ಆಗಿ ಕಂಬ್ಯಾಕ್ ಮಾಡಿದ್ದರು. ಇದೀಗ 'ಕಲ್ಕಿ'ಯಾಗಿ ಆ ಗೆಲುವಿನ ಯಾತ್ರೆ ಮುಂದುವರೆಸಲು ಮುಂದಾಗಿದ್ದಾರೆ. ಆದರೆ ಚಿತ್ರದ ಸ್ಯಾಂಪಲ್‌ಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಅದೇ ಕಾರಣಕ್ಕೆ ಸಿನಿಮಾ ಫಲಿತಾಂಶ ಏನಾಗುತ್ತದೋ ಎನ್ನುವ ಆತಂಕ ಪ್ರಭಾಸ್ ಅಭಿಮಾನಿಗಳಲ್ಲಿದೆ.

Prabhas Kalki 2898AD New Release Date announced

ಬಹಳ ಹಿಂದೆಯೇ 'ಕಲ್ಕಿ' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ. ಜೂನ್ 27ಕ್ಕೆ ಸಿನಿಮಾ ತೆರೆಗೆ ಬರುತ್ತಾ? ಎನ್ನುವ ಅನುಮಾನ ಕೂಡ ಕೆಲವರನ್ನು ಕಾಡುತ್ತಿದೆ. ಲೋಕಸಭೆ ಚುನಾವಣೆ ಮಾತ್ರವಲ್ಲದೇ ಆಂಧ್ರ ವಿಧಾನಸಭೆ ಚುನಾವಣೆ ಕೂಡ ನಡೀತಿದೆ. ಹಾಗಾಗಿ ಅನಿವಾರ್ಯವಾಗಿ 'ಕಲ್ಕಿ 2898 AD' ಸಿನಿಮಾ ರಿಲೀಸ್ ಡೇಟ್ ಮುಂದೂಡುವಂತಾಯಿತು.

More from Filmibeat

English summary
Its official; Kalki 2898 AD release postponed due to LokSabha elections
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X