For Quick Alerts
  ALLOW NOTIFICATIONS  
  For Daily Alerts

  ವಿದೇಶಿ ನಟರನ್ನು ಹಿಂದಿಕ್ಕಿದ ಪ್ರಭಾಸ್‌ ಮುಡಿಗೆ ಹೊಸ ದಾಖಲೆ

  |

  ನಟ ಪ್ರಭಾಸ್ ಹೆಸರಲ್ಲಿ ಈಗಾಗಲೇ ಹಲವಾರು ದಾಖಲೆಗಳಿವೆ. ತೆಲುಗು ಸಿನಿಮಾಕ್ಕೆ ವಿಶ್ವ ಮಟ್ಟದ ಗುರುತು ತಂದುಕೊಟ್ಟ ಪ್ರಮುಖ ಪಟ್ಟಿಯಲ್ಲಿ ಪ್ರಭಾಸ್ ಸಹ ಇದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆವ ನಟರೊಲ್ಲಬ್ಬರು, ಅತಿ ಹೆಚ್ಚು ಅಭಿಮಾನಿಗಳುಳ್ಳ ನಟ ಹೀಗೆ ಹಲವು ದಾಖಲೆಗಳು ಪ್ರಭಾಸ್ ಹೆಸರಿಗೆ ಸೇರಿಕೊಂಡಿವೆ.

  ಇದಕ್ಕೆ ಜೊತೆಯಾಗಿ ಈಗ ಹೊಸದೊಂದು ದಾಖಲೆ ಪ್ರಭಾಸ್ ಹೆಸರಿಗೆ ಸೇರಿದೆ. ಹಲವು ವಿದೇಶಿ ನಟರನ್ನು ಹಿಂದಿಕ್ಕಿ ಪ್ರಭಾಸ್ ಹೊಸದೊಂದು ಗೌರವಕ್ಕೆ ಪಾತ್ರರಾಗಿದ್ದಾರೆ.

  ಪ್ರತಿಷ್ಠಿತ ಆನ್‌ಲೈನ್ ಪೋರ್ಟಲ್ ಒಂದು ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಪ್ರಭಾಸ್ ಏಷ್ಯಾದ ಮೋಸ್ಟ್ ಹ್ಯಾಂಡ್ಸಮ್ ಹೀರೊ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ನಟ ಪ್ರಭಾಸ್ ಬಿಟ್ಟು ಇನ್ನೊಬ್ಬ ಭಾರತೀಯ ನಟನಷ್ಟೆ ಪಟ್ಟಿಯಲ್ಲಿದ್ದಾರೆ!

  ಮೊದಲ ಸ್ಥಾನದಲ್ಲಿ ಪ್ರಭಾಸ್

  ಮೊದಲ ಸ್ಥಾನದಲ್ಲಿ ಪ್ರಭಾಸ್

  ಪಟ್ಟಿಯಲ್ಲಿ ಪ್ರಭಾಸ್ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ನಟ ಇಮ್ರಾನ್ ಅಬ್ಬಾಸ್ ನಖ್ವಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಜಪಾನ್‌ನ ನಟ ಜಿನ್ ಅಕಾನಿಶಿ ಇದ್ದಾರೆ. ನಾಲ್ಕನೇ ಸ್ಥಾನ ದಕ್ಷಿಣ ಕೊರಿಯಾದ ನಟ ಕಿಮ್ ಹ್ಯೂನ್ ಜುಂಗ್ ಪಾಲಾಗಿದೆ. ಭಾರತದಲ್ಲಿಯೂ ಇವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

  ಏಳನೇ ಸ್ಥಾನದಲ್ಲಿ ನಟ ವಿವಿಯಾನ್ ಡಿಸೇನಾ

  ಏಳನೇ ಸ್ಥಾನದಲ್ಲಿ ನಟ ವಿವಿಯಾನ್ ಡಿಸೇನಾ

  ಭಾರತದ ಮತ್ತೊಬ್ಬ ನಟ ವಿವಿಯಾನ್ ಸೇನಾ ಏಳನೇ ಸ್ಥಾನದಲ್ಲಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿರುವ ಪಾಕಿಸ್ತಾನಿ ನಟ ಫಹಾದ್ ಖಾನ್ ಎಂಟನೇ ಸ್ಥಾನದಲ್ಲಿದ್ದಾರೆ. ವಿವಿಯಾನ್ ಡಿಸೇನಾ ಈ ವರೆಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ ಬದಲಿಗೆ ಕೇವಲ ಟಿವಿ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಮಾತ್ರವೇ ನಟಿಸಿದ್ದಾರೆ.

  ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ರಭಾಸ್

  ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ರಭಾಸ್

  'ಬಾಹುಬಲಿ' ಸಿನಿಮಾ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಪ್ರಭಾಸ್ ಗಳಿಸಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಪ್ರಭಾಸ್‌ಗೆ ಭಾರತ ಹೊರಗಡೆಯಿಂದಲೂ ಸಾಕಷ್ಟು ಮತಗಳು ದೊರೆತಿವೆ. 'ಬಾಹುಬಲಿ' ಸಿನಿಮಾ ಚೀನಾ, ಜಪಾನ್‌ಗಳಲ್ಲಿಯೂ ದೊಡ್ಡ ಹಿಟ್ ಆಗಿದ್ದನ್ನು ಮರೆಯುವಂತಿಲ್ಲ.

  ಹುಡುಗರನ್ನ ಹೊಗಳಿರೋ ಸಾಂಗ್ ನ ಇದುವರೆಗೂ ಯಾರು ಮಾಡಿಲ್ಲ
  'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆ ಆಗಲಿದೆ

  'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆ ಆಗಲಿದೆ

  ಪ್ರಭಾಸ್ ಪ್ರಸ್ತುತ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಾಮಾಯಣ ಆಧರಿಸಿದ 'ಆದಿಪುರುಷ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದ 10 ದಿನಗಳ ಚಿತ್ರೀಕರಣವಷ್ಟೆ ಬಾಕಿ ಇದ್ದು ಆ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಜೊತೆ ಹೆಸರಿಡದ ಸಿನಿಮಾದಲ್ಲಿಯೂ ಪ್ರಭಾಸ್ ನಟಿಸಲಿದ್ದಾರೆ.

  English summary
  Actor Prabhas voted as Asia's most handsome man. Actor Vivian Dsena is in seventh place in the list. Pakistani actor Imran Abbas Naqvi is in second place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X