For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್' ನಿರ್ದೇಶಕರ ಸಿನಿಮಾದಲ್ಲಿ ನಟ ಪ್ರಭಾಸ್?

  |

  ಪ್ಯಾನ್ ಇಂಡಿಯ ಸ್ಟಾರ್ ಪ್ರಭಾಸ್ ಸದ್ಯ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಏಕಕಾಲಕ್ಕೆ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

  ಈ ನಡುವೆ ಪ್ರಭಾಸ್ ಮತ್ತೊಂದು ಸಿನಿಮಾ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ಹಾಲಿವುಡ್ ಸಿನಿಮಾದ ಹಿಂದಿ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ದೀರಿ. ಇದರ ಬೆನ್ನಲ್ಲೇ ಈಗ ಮತ್ತೊಂದು ಸಿನಿಮಾ ಸದ್ದು ಮಾಡುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  ಹಾಲಿವುಡ್ ಸಿನಿಮಾದ ರಿಮೇಕ್‌ನಲ್ಲಿ ನಟ ಪ್ರಭಾಸ್?

  ದಳಪತಿ ವಿಜಯ್ ಜೊತೆ ಮಾಸ್ಟರ್ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್ ಕನಗರಾಜ್ ಬಳಿಕ ಕಮಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ವಿಕ್ರಮ್ ಹೆಸರಿನಲ್ಲಿ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ ಈ ಸಿನಿಮಾ ಬಳಿಕ ಪ್ರಭಾಸ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರಂತೆ. ಮೂಲಗಳ ಪ್ರಕಾರ ಲೋಕೇಶ್ ಮಾಸ್ಟರ್ ಸಿನಿಮಾದ ಪ್ರಚಾರದ ವೇಳೆಯೇ ಪ್ರಭಾಸ್ ಜೊತೆ ಮಾತುಕತೆ ನಡೆಸಿದ್ದರಂತೆ.

  ಸದ್ಯ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಲೋಕೇಶ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ನಿರ್ದೇಶಕ ಲೋಕೇಶ್ ಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

  ಕಾಲು ಲಕ್ಷದ ಮಾಸ್ಕ್ ಹಾಕಿರೋ ಸೆಲ್ಫೀ ಫೋಟೋ ಶೇರ್ ಮಾಡಿದ ನಟಿ ಕರೀನಾ ಕಪೂರ್ | Filmibeat Kannada

  ಕಮಲ್ ಹಾಸನ್ ಜೊತೆಗಿನ ಸಿನಿಮಾ ಮುಗಿದ ಬಳಿಕ ಪ್ರಭಾಸ್ ಗೆ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಇತ್ತ ಪ್ರಭಾಸ್ ಕೂಡ ಸಖತ್ ಬ್ಯುಸಿ ಇದ್ದಾರೆ. ಆದಿಪುರುಷ್, ಸಲಾರ್ ಮತ್ತು ಇನ್ನು ಹೆಸರಿಡದ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿಸಿ ಲೋಕೇಶ್ ಜೊತೆ ಸಿನಿಮಾ ಮಡುವ ಸಾಧ್ಯತೆ ಇದೆ. ಇದು ಆದಷ್ಟು ಬೇಗ ನೆರವೇರಲಿ ಎಂದು ಹಾರೈಸುತ್ತಿದ್ದಾರೆ ಅಭಿಮಾನಿಗಳು.

  English summary
  Actor Prabhas next movie will be directed by Kollywood filmmaker Lokesh Kanagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X