For Quick Alerts
  ALLOW NOTIFICATIONS  
  For Daily Alerts

  ಇಕ್ಕಟ್ಟಿಗೆ ಸಿಲುಕಿದ 'ರಾಧೆ-ಶ್ಯಾಮ್' ಸಿನಿಮಾ: ಸಂಕಷ್ಟದಲ್ಲಿ ನಿರ್ಮಾಪಕ

  |

  ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಿ ಆಗಿದೆ. ಆದರೆ ಸಿನಿಮಾ ಇನ್ನೂ ಪೂರ್ಣವೇ ಆಗಿಲ್ಲ.

  ಜುಲೈ 30ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಆದರೆ ಸಿನಿಮಾದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಕೆಲವು ದಿನಗಳ ಚಿತ್ರೀಕರಣ ಬಾಕಿ ಇದ್ದು, ಹೈದರಾಬಾದ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.

  ಪ್ರಭಾಸ್‌ರ ಹತ್ತು ದಿನಗಳು 'ರಾಧೆ-ಶ್ಯಾಮ್' ಸಿನಿಮಾದ ಚಿತ್ರೀಕರಣಕ್ಕೆ ಬೇಕಿದೆ. ಆದರೆ ಪ್ರಭಾಸ್‌ ಸತತವಾಗಿ ಹತ್ತು ದಿನಗಳನ್ನು 'ರಾಧೆ-ಶ್ಯಾಮ್' ಸಿನಿಮಾಕ್ಕಾಗಿ ನೀಡಲಾಗದ ಸ್ಥಿತಿಯಲ್ಲಿದ್ದಾರೆ. ಅವರು ಈಗಾಗಲೇ 'ಆದಿಪುರುಷ್' ಮತ್ತು 'ಸಲಾರ್' ಸಿನಿಮಾಗಳ ಚಿತ್ರೀಕರಣದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

  ಇನ್ನು ಪೂಜಾ ಹೆಗ್ಡೆ ಸಹ ಬಹಳ ಬ್ಯುಸಿ ಶೆಡ್ಯೂಲ್ ಹೊಂದಿದ್ದು, ಅವರು ಈಗಾಗಲೇ ಹೈದರಾಬಾದ್‌ನಲ್ಲಿ ಕೆಲವು ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರ ಹಾಗೂ ಪ್ರಭಾಸ್‌ರ ಡೇಟ್ಸ್‌ಗಳು ಹೊಂದಾಣಿಕೆ ಆಗುತ್ತಿಲ್ಲವಾದ್ದರಿಂದ ಪ್ರಾರಂಭವಾಗಿದ್ದ ಚಿತ್ರೀಕರಣವನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ ಎನ್ನಲಾಗುತ್ತಿದೆ.

  ಇನ್ನು ಸಿನಿಮಾದ ವಿಎಫ್ಎಕ್ಸ್ ಕೇವಲ ಅರ್ಧದಷ್ಟು ಮುಗಿದಿದೆ. ಚಿತ್ರೀಕರಣ ಪೂರ್ಣಗೊಂಡಬಳಿಕವಷ್ಟೆ ಉಳಿದ ವಿಎಫ್‌ಎಕ್ಸ್ ಪೂರ್ಣ ಮಾಡಬಹುದಾಗಿದೆ. ಆದರೆ ಚಿತ್ರೀಕರಣವೇ ಪೂರ್ಣಗೊಳ್ಳುತ್ತಿಲ್ಲ. ವಿದೇಶಿ ನಟ-ನಟಿಯರು ಈಗಾಗಲೇ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಸೆಟ್ ಸಹ ತಯಾರಾಗಿದೆ. ಆದರೆ ಪ್ರಭಾಸ್ ಸೆಟ್‌ಗೆ ಬರಲಾಗುತ್ತಿಲ್ಲ. ಇದರಿಂದಾಗಿ ನಿರ್ಮಾಪಕರು ಭಾರಿ ದೊಡ್ಡ ನಷ್ಟವನ್ನು ಅನುಭವಿಸುತ್ತಿದ್ದಾರೆ.

  'ರಾಧೆ-ಶ್ಯಾಮ್' ಸಿನಿಮಾದ ಪೂರ್ಣ ಚಿತ್ರೀಕರಣವು ಯೂರೋಪ್ ದೇಶಗಳಲ್ಲಿ ಆಗಲಿಕ್ಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಬೇಗನೇ ವಿದೇಶದಿಂದ ಮರಳಿ ಬಂದಿದ್ದು, ಇಲ್ಲಿಯೇ ಹೈದರಾಬಾದ್‌ನಲ್ಲಿ ಸೆಟ್ ಹಾಕಿ ಉಳಿದ ಭಾಗದ ಚಿತ್ರೀಕರಣ ಮುಗಿಸಲಾಗುತ್ತಿದೆ.

  ನಮ್ಮ ನಿರ್ಮಾಪಕರ ಕೈವಾಡ ಇಲ್ಲ ಎಂದು ಆರೋಪ-ಪ್ರತ್ಯಾರೋಪಕ್ಕೆ ಬ್ರೇಕ್ ಹಾಕಿದ Darshan | Filmibeat Kannada

  'ರಾಧೆ-ಶ್ಯಾಮ್' ಸಿನಿಮಾ ಅಪ್ಪಟ ಪ್ರೇಮ ಕತೆಯಾಗಿದ್ದು, 1970-80ರ ಸಾಲಿನಲ್ಲಿ ಯೂರೋಪ್ ದೇಶಗಳಲ್ಲಿ ನಡೆಯುವ ಕತೆಯಾಗಿದೆ. ಸಿನಿಮಾದಲ್ಲಿ ಪ್ರಭಾಸ್, ಪೂಜಾ ಹೆಗ್ಡೆ, ಕೃಷ್ಣಂ ರಾಜು, ಸಚಿನ್ ಕೇಡ್ಕರ್, ಪ್ರಿಯದರ್ಶಿ, ಭಾಗ್ಯಶ್ರಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ.

  English summary
  Prabhas not able to join Radhe-Shyam movie shooting due his tight schedule. Radhe-Shyam movie's 10 days of shoot left. and some VFX effects needs to be done.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X