ಪ್ರೇಮಲೋಕದಲ್ಲಿ ಕಳೆದು ಹೋದ ಪ್ರಭಾಸ್-ಪೂಜಾ: 'ರಾಧೆ-ಶ್ಯಾಮ್' ಪೋಸ್ಟರ್ ಬಿಡುಗಡೆ
ಪ್ರೇಮಿಗಳ ದಿನದಂದು ಟೀಸರ್ ಬಿಡುಗಡೆ ಮಾಡಿದ್ದ 'ರಾಧೆ-ಶ್ಯಾಮ್' ಸಿನಿಮಾ ತಂಡ ಶಿವರಾತ್ರಿ ಹಬ್ಬದಂದು ಮತ್ತೊಂದು ಸುಂದರವಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಪ್ರಭಾಸ್-ಪೂಜಾ ಹೆಗ್ಡೆ ನಟಿಸಿರುವ ಅಪ್ಪಟ ಪ್ರೇಮಕಥೆಯುಳ್ಳ ಸಿನಿಮಾ 'ರಾಧೆ-ಶ್ಯಾಮ್' ಜುಲೈ 30 ರಂದು ಬಿಡುಗಡೆ ಆಗಲಿದೆ. ಶಿವರಾತ್ರಿ ಹಬ್ಬಕ್ಕೆ ಬಿಡುಗಡೆ ಮಾಡಲಾಗಿರುವ ಹೊಸ ಪೋಸ್ಟರ್‌ನಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಮಂಜಿನ ಮೇಲೆ ಮಲಗಿ ಪ್ರೇಮಲೋಕದಲ್ಲಿ ಕಳೆದು ಹೋದಂತೆ ಭಾಸವಾಗುತ್ತಿರುವ ಚಿತ್ರವಿದೆ.
'ಮಹಾಶಿವರಾತ್ರಿಯ ಭಕ್ತಿಮಯ ಸಮಯದಲ್ಲಿ 'ರಾಧೆ-ಶ್ಯಾಮ್' ಸಿನಿಮಾದ ಈ ಸುಂದರ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ಸಂತೋಶವಾಗುತ್ತಿದೆ' ಎಂಬ ಕ್ಯಾಪ್ಷನ್ ಜೊತೆಗೆ ನಟ ಪ್ರಭಾಸ್ 'ರಾಧೆ-ಶ್ಯಾಮ್' ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಐದು ಭಾಷೆಗಳಲ್ಲಿ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆ ಆಗುತ್ತಿದ್ದು. ಐದೂ ಭಾಷೆಯಲ್ಲಿ ಸಿನಿಮಾದ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.
ಪ್ಯಾರಿಸ್‌ನಲ್ಲಿ 1960 ರ ದಶಕದಲ್ಲಿ ನಡೆವ ಪ್ರೇಮಕತೆಯನ್ನು ಆಧರಿಸಿದ ಸಿನಿಮಾ 'ರಾಧೆ-ಶ್ಯಾಮ್'. ಸಿನಿಮಾವನ್ನು ರಾಧಾ ಕೃಷ್ಣಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಟಿ-ಸೀರೀಸ್‌ನ ಭೂಷಣ್ ಕುಮಾರ್ ಸೇರಿದಂತೆ ವಂಶಿ, ಪ್ರಮೋದ್, ಪ್ರಸೀದಾ ಅವರುಗಳು ಬಂಡವಾಳ ಹೂಡಿದ್ದಾರೆ.
ಸಿನಿಮಾದ ಬಹುತೇಕ ಚಿತ್ರೀಕರಣ ಯೂರೋಪ್‌ನ ವಿವಿಧ ಭಾಗಗಳಲ್ಲಿ ನಡೆದಿದೆ. ಪ್ರಭಾಸ್-ಪೂಜಾ ಹೆಗ್ಡೆ ಹೊರತಾಗಿ ಸಿನಿಮಾದಲ್ಲಿ ಕೃಷ್ಣಂ ರಾಜು, ಸಚಿನ್ ಕೇಡೆಕರ್, ಪ್ರಿಯದರ್ಶಿನಿ, ಭಾಗ್ಯಶ್ರಿ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಜಸ್ಟಿನ್ ಪ್ರಭಾಕರನ್ ಮತ್ತು ಮಿಥುನ್-ಮನೋಜ್ ಭಾರಧ್ವಜ್.
'ರಾಧೆ-ಶ್ಯಾಮ್' ಸಿನಿಮಾವು ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಜುಲೈ 30 ರಂದು ಬಿಡುಗಡೆ ಆಗಲಿದೆ. ಪ್ರಭಾಸ್ ಪ್ರಸ್ತುತ 'ಸಲಾರ್' ಹಾಗೂ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











