For Quick Alerts
  ALLOW NOTIFICATIONS  
  For Daily Alerts

  ಪ್ರೇಮಲೋಕದಲ್ಲಿ ಕಳೆದು ಹೋದ ಪ್ರಭಾಸ್-ಪೂಜಾ: 'ರಾಧೆ-ಶ್ಯಾಮ್' ಪೋಸ್ಟರ್ ಬಿಡುಗಡೆ

  |

  ಪ್ರೇಮಿಗಳ ದಿನದಂದು ಟೀಸರ್ ಬಿಡುಗಡೆ ಮಾಡಿದ್ದ 'ರಾಧೆ-ಶ್ಯಾಮ್' ಸಿನಿಮಾ ತಂಡ ಶಿವರಾತ್ರಿ ಹಬ್ಬದಂದು ಮತ್ತೊಂದು ಸುಂದರವಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

  ಪ್ರಭಾಸ್-ಪೂಜಾ ಹೆಗ್ಡೆ ನಟಿಸಿರುವ ಅಪ್ಪಟ ಪ್ರೇಮಕಥೆಯುಳ್ಳ ಸಿನಿಮಾ 'ರಾಧೆ-ಶ್ಯಾಮ್' ಜುಲೈ 30 ರಂದು ಬಿಡುಗಡೆ ಆಗಲಿದೆ. ಶಿವರಾತ್ರಿ ಹಬ್ಬಕ್ಕೆ ಬಿಡುಗಡೆ ಮಾಡಲಾಗಿರುವ ಹೊಸ ಪೋಸ್ಟರ್‌ನಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಮಂಜಿನ ಮೇಲೆ ಮಲಗಿ ಪ್ರೇಮಲೋಕದಲ್ಲಿ ಕಳೆದು ಹೋದಂತೆ ಭಾಸವಾಗುತ್ತಿರುವ ಚಿತ್ರವಿದೆ.

  ಪ್ರಭಾಸ್ ಜೊತೆ ನಟಿಸಲು ದೀಪಿಕಾ ಇಷ್ಟು ದಿನಗಳು ಮೀಸಲಿಟ್ಟಿದ್ದಾರಾ! ಇಲ್ಲಿದೆ ಕಾಲ್ ಶೀಟ್ ವಿವರಪ್ರಭಾಸ್ ಜೊತೆ ನಟಿಸಲು ದೀಪಿಕಾ ಇಷ್ಟು ದಿನಗಳು ಮೀಸಲಿಟ್ಟಿದ್ದಾರಾ! ಇಲ್ಲಿದೆ ಕಾಲ್ ಶೀಟ್ ವಿವರ

  'ಮಹಾಶಿವರಾತ್ರಿಯ ಭಕ್ತಿಮಯ ಸಮಯದಲ್ಲಿ 'ರಾಧೆ-ಶ್ಯಾಮ್' ಸಿನಿಮಾದ ಈ ಸುಂದರ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ಸಂತೋಶವಾಗುತ್ತಿದೆ' ಎಂಬ ಕ್ಯಾಪ್ಷನ್ ಜೊತೆಗೆ ನಟ ಪ್ರಭಾಸ್ 'ರಾಧೆ-ಶ್ಯಾಮ್' ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಐದು ಭಾಷೆಗಳಲ್ಲಿ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆ ಆಗುತ್ತಿದ್ದು. ಐದೂ ಭಾಷೆಯಲ್ಲಿ ಸಿನಿಮಾದ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.

  ಪ್ಯಾರಿಸ್‌ನಲ್ಲಿ 1960 ರ ದಶಕದಲ್ಲಿ ನಡೆವ ಪ್ರೇಮಕತೆಯನ್ನು ಆಧರಿಸಿದ ಸಿನಿಮಾ 'ರಾಧೆ-ಶ್ಯಾಮ್'. ಸಿನಿಮಾವನ್ನು ರಾಧಾ ಕೃಷ್ಣಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಟಿ-ಸೀರೀಸ್‌ನ ಭೂಷಣ್ ಕುಮಾರ್ ಸೇರಿದಂತೆ ವಂಶಿ, ಪ್ರಮೋದ್, ಪ್ರಸೀದಾ ಅವರುಗಳು ಬಂಡವಾಳ ಹೂಡಿದ್ದಾರೆ.

  ಸಿನಿಮಾದ ಬಹುತೇಕ ಚಿತ್ರೀಕರಣ ಯೂರೋಪ್‌ನ ವಿವಿಧ ಭಾಗಗಳಲ್ಲಿ ನಡೆದಿದೆ. ಪ್ರಭಾಸ್-ಪೂಜಾ ಹೆಗ್ಡೆ ಹೊರತಾಗಿ ಸಿನಿಮಾದಲ್ಲಿ ಕೃಷ್ಣಂ ರಾಜು, ಸಚಿನ್ ಕೇಡೆಕರ್, ಪ್ರಿಯದರ್ಶಿನಿ, ಭಾಗ್ಯಶ್ರಿ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಜಸ್ಟಿನ್ ಪ್ರಭಾಕರನ್ ಮತ್ತು ಮಿಥುನ್-ಮನೋಜ್ ಭಾರಧ್ವಜ್.

  Roberrt Box Office Collection : ಅಭಿಮಾನಿಗಳ ಆರ್ಭಟಕ್ಕೆ ಬಾಕ್ಸ್ ಆಫೀಸ್ ಲೂಟಿ | Filmibeat Kannada

  'ರಾಧೆ-ಶ್ಯಾಮ್' ಸಿನಿಮಾವು ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಜುಲೈ 30 ರಂದು ಬಿಡುಗಡೆ ಆಗಲಿದೆ. ಪ್ರಭಾಸ್ ಪ್ರಸ್ತುತ 'ಸಲಾರ್' ಹಾಗೂ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Prabhas-Pooja Hegde starer 'Radhe-Shyam' movie's new poster released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X