Salaar -2: ಎಲ್ಲಾ ಊಹಾಪೋಹಕ್ಕೆ ಫುಲ್‌ಸ್ಟಾಪ್; 'ಶೌರ್ಯಾಂಗ ಪರ್ವ'ಕ್ಕೆ ಮುಹೂರ್ತ ಫಿಕ್ಸ್!

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಚಿತ್ರದ ಮುಂದುವೆರೆದ ಭಾಗ 'ಶೌರ್ಯಾಂಗ ಪರ್ವ' ನೋಡಲು ಸಿನಿರಸಿಕರು ಕಾತರರಾಗಿದ್ದಾರೆ. ಮೊದಲ ಭಾಗಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ಭಾಗ ಏನಾಗುತ್ತೋ ಎನ್ನುವ ಗೊಂದಲ ಕೆಲವರಲ್ಲಿದೆ.

ಕನ್ನಡದ 'ಉಗ್ರಂ' ಕಥೆಯನ್ನು ಬಹಳ ದೊಡ್ಡಮಟ್ಟದಲ್ಲಿ ಹೇಳುತ್ತಿರುವ ಸಿನಿಮಾ 'ಸಲಾರ್'. ಡಿಸೆಂಬರ್ 22ಕ್ಕೆ ತೆರೆಗಪ್ಪಳಿಸಿದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ರಭಾಸ್ ಸ್ನೇಹಿತನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದರು. ಕನ್ನಡದಲ್ಲಿ ಶ್ರೀಮುರಳಿ- ತಿಲಕ್ ಮಾಡಿದ ಪಾತ್ರಗಳನ್ನು ಇವರಿಬ್ಬರು ನಿರ್ವಹಿಸಿದ್ದರು. ಆದರೆ ಕಥೆಯನ್ನು ಎಳೆದು 2 ಭಾಗಗಳಾಗಿ ಮಾಡಲು ನೀಲ್ ಮುಂದಾಗಿದ್ದಾರೆ.

Prabhas Prashanth Neel s Salaar-2 Shooting to start from may end

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಸಲಾರ್' ಸಿನಿಮಾ ನಿರ್ಮಾಣ ಮಾಡಿತ್ತು. ಬೆಂಗಳೂರಿನಲ್ಲೇ ಚಿತ್ರದ ಸಕ್ಸಸ್ ಪಾರ್ಟಿ ಕೂಡ ನಡೆದಿತ್ತು. ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ 'ಶೌರ್ಯಾಂಗ ಪರ್ವ' ಶುರುವಾಗುವುದು ಯಾವಾಗ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಶುರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಸದ್ಯ ಪ್ರಭಾಸ್ 'ಕಲ್ಕಿ' ಹಾಗೂ 'ದಿ ರಾಜಾ ಸಾಬ್' ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜೂನ್ 27ಕ್ಕೆ 'ಕಲ್ಕಿ' ಸಿನಿಮಾ ತೆರೆಗೆ ಬರಲಿದೆ. ವರ್ಷಾಂತ್ಯಕ್ಕೆ 'ರಾಜಾ ಸಾಬ್' ದರ್ಬಾರ್ ನಡೆಯಲಿದೆ. ಬಳಿಕ 'ಸಲಾರ್' ಸೀಕ್ವೆಲ್ 'ಶೌರ್ಯಾಂಗ ಪರ್ವ' ತೆರೆಗೆ ಬರಲಿದೆ. ಸದ್ಯ ಪ್ರಶಾಂತ್ ನೀಲ್ ಯಾವುದೇ ಬೇರೆ ಚಿತ್ರಕ್ಕೆ ಕೈಗೆತ್ತಿಕೊಂಡಿಲ್ಲ. ಜ್ಯೂ. ಎನ್‌ಟಿಆರ್ ಜೊತೆ ಸಿನಿಮಾ ಘೋಷಿಸಿದ್ದರೂ ಸದ್ಯಕ್ಕೆ ಶುರುವಾಗುವಂತೆ ಕಾಣುತ್ತಿಲ್ಲ.

ತಾರಕ್ 'ದೇವರ' ಹಾಗೂ 'ವಾರ್‌-2' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಎರಡೂ ಸಿನಿಮಾಗಳ್ನು ಮುಗಿಸಲು ಬಹಳ ಸಮಯ ಬೇಕಾಗಬಹುದು. ಅಷ್ಟರಲ್ಲಿ 'ಸಲಾರ್- 2' ಕಟ್ಟಿಕೊಡಲು ನೀಲ್ ಮನಸ್ಸು ಮಾಡಿದಂತೆ ಕಾಣುತ್ತಿದೆ. ಮೇ ಕೊನೆಯಲ್ಲೇ 'ಶೌರ್ಯಾಂಗ ಪರ್ವ' ಚಿತ್ರೀಕರಣ ಆರಂಭವಾಗುತ್ತದೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ.

Prabhas Prashanth Neel s Salaar-2 Shooting to start from may end

ಈಗಾಗಲೇ 'ಕಲ್ಕಿ' ಚಿತ್ರೀಕರಣ ಮುಗಿದಿದೆ. 'ರಾಜಾ ಸಾಬ್' ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಹಾಗಾಗಿ ಈ ಸಿನಿಮಾ ಜೊತೆ 'ಸಲಾರ್' ಸೀಕ್ವೆಲ್ ಮಾಡಿ ಮುಗಿಸಲು ಯಂಗ್ ರೆಬಲ್ ಸ್ಟಾರ್ ತೀರ್ಮಾನಿಸಿದಂತೆ ಇದೆ. ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ನಟಿಸಬೇಕಿದೆ. ಹನು ರಾಘವಪುಡಿ ನಿರ್ದೇಶನದಲ್ಲೂ ಒಂದು ಸಿನಿಮಾ ಕನ್ಫರ್ಮ್ ಆಗಿದೆ.

'ಸಲಾರ್' ಚಿತ್ರದ ಸಹನಟ ಶಫಿ ಸಹ ಶೀಘ್ರದಲ್ಲೇ ಸೀಕ್ವೆಲ್ ಶೂಟಿಂಗ್ ಶುರು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಈಗಾಗಲೇ 2ನೇ ಭಾಗದ ಒಂದಷ್ಟು ಸನ್ನಿವೇಶಗಳನ್ನು 'ಸಲಾರ್' ಟೀಂ ಶೂಟ್ ಮಾಡಿದೆ. ಟೀಸರ್‌ನಲ್ಲಿದ್ದ ಡೈನೋಸಾರ್ ಡೈಲಾಗ್ ಸನ್ನಿವೇಶ ಮೊದಲ ಭಾಗದಲ್ಲಿ ಇರಲಿಲ್ಲ. ಇಂತಹ ಮತ್ತಷ್ಟು ಸನ್ನಿವೇಶಗಳನ್ನು ನೀಲ್ ಸೆರೆ ಹಿಡಿದಿದ್ದಾರೆ. ಹಾಗಾಗಿ ಸೀಕ್ವೆಲ್ ಚಿತ್ರೀಕರಣ ಮತ್ತಷ್ಟು ಸುಲಭವಾಗಲಿದೆ. 20% ಚಿತ್ರೀಕರಣವಾಗಿದ್ದರೆ 80%ರಷ್ಟು ಮಾತ್ರ ಸೆರೆ ಹಿಡಿಯಬೇಕಿದೆ.

ಆಕ್ಷನ್ ಎಂಟರ್‌ಟೈನರ್ 'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಈಶ್ವರಿ ರಾವ್, ಟಿನ್ನು ಆನಂದ್, ಪ್ರಮೋದ್ ಪಂಜು, ದೇವರಾಜ್ ಸೇರಿದಂತೆ ದೊಡ್ಡ ತಾರಾಗಣವಿದೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತವಿದೆ. ಮೊದಲ ಭಾಗಕ್ಕೆ ಕೆಲಸ ಮಾಡಿದ ಬಹುತೇಕ ಕಲಾವಿದರು, ತಂತ್ರಜ್ಞರು ಸೀಕ್ವೆಲ್ ತಂಡದಲ್ಲಿ ಇರುತ್ತಾರೆ.

More from Filmibeat

English summary
Prabhas starrer Salaar Shouryanga Parvam Pre-production work completed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X