Salaar Teaser: ಅಪ್‌ಡೇಟ್ ಆಯ್ತು 'ಸಲಾರ್' ಟೀಸರ್: ಏನೆಲ್ಲಾ ಬದಲಾವಣೆ ಆಗಿದೆ ಗೊತ್ತಾ? ಆ ಆರ್ಮಿ ಯಾವ್ದು?

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ತಡವಾದಷ್ಟು ಕುತೂಹಲ ಹೆಚ್ಚಿಸುತ್ತಿದೆ. ಡಿಸೆಂಬರ್ 22ಕ್ಕೆ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗಪ್ಪಳಿಸುತ್ತಿದೆ. ಅದೇ ದಿನ ಶಾರುಖ್ ಖಾನ್ ನಟನೆಯ 'ಡಂಕಿ' ಕೂಡ ರಿಲೀಸ್ ಆಗ್ತಿದ್ದು ಬಾಕ್ಸಾಫೀಸ್ ಕ್ಲ್ಯಾಶ್ ಕನ್ಫರ್ಮ್‌ ಆಗಿದೆ. ಇದೆಲ್ಲದರ ನಡುವೆ 'ಸಲಾರ್' ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ.

'KGF' ಸರಣಿ ಬಳಿಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ 'ಸಲಾರ್' ಸರಣಿಗೆ ಕೈಹಾಕಿದೆ. 'KGF' ಸರಣಿಗೆ ಕೆಲಸ ಮಾಡಿದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. 'ಸಲಾರ್' ಕನ್ನಡದ 'ಉಗ್ರಂ' ರೀಮೆಕ್ ಎನ್ನುವ ಚರ್ಚೆ ಜೋರಾಗಿದೆ. ಇದರ ನಡುವೆ ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ತಂದೆ- ಮಗನಾಗಿ ಎರಡು ಪಾತ್ರಗಳಲ್ಲಿ ಪ್ರಭಾಸ್ ಪ್ರೇಕ್ಷಕರಿಗೆ ಡಬಲ್ ಕಿಕ್ ಕೊಡ್ತಾರೆ ಎನ್ನಲಾಗ್ತಿದೆ.

Prabhas-salaar-updated

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 28ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಈಗ 3 ತಿಂಗಳು ತಡವಾಗುತ್ತಿದೆ. 2 ತಿಂಗಳ ಹಿಂದೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಬೆಳ್ಳಂ ಬೆಳಗ್ಗೆ ಬಂದಿದ್ದ ಟೀಸರ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಯೂಟ್ಯೂಬ್‌ನಲ್ಲಿ ವೀವ್ಸ್, ಲೈಕ್ಸ್ ಮೂಲಕ ಸಂಚಲನ ಸೃಷ್ಟಿಸಿತ್ತು. ಇದೀಗ ಹಳೇ ಟೀಸರ್‌ನ ಬದಲಾಯಿಸಿ ಹೊಸ ಟೀಸರ್ ರಿಲೀಸ್ ಮಾಡಿದೆ ಹೊಂಬಾಳೆ ಸಂಸ್ಥೆ. ಎರಡಕ್ಕೂ ಏನು ವ್ಯತ್ಯಾಸ ಎಂದು ಅಭಿಮಾನಿಗಳು ಭೂತಕನ್ನಡಿ ಹಾಕಿ ಹುಡುಕುತ್ತಿದ್ದಾರೆ.

ಅಂದಹಾಗೆ 'ಸಲಾರ್' ಹೊಸ ಟೀಸರ್‌ನಲ್ಲಿ ರಿಲೀಸ್ ಡೇಟ್ ಬದಲಿಸಿದ್ದಾರೆ. ಅದು ಸುಲಭವಾಗಿ ಗೊತ್ತಾಗುತ್ತದೆ. ಇನ್ನುಳಿದಂತೆ ಏನೆಲ್ಲಾ ಬದಲಾವಣೆ ಆಗಿದೆ ಅಂತ ಅಭಿಮಾನಿಗಳು ತಲಾಶೆ ನಡೆಸುತ್ತಿದ್ದಾರೆ. ಏನೆಲ್ಲಾ ಹೊಸ ಶಾಟ್ಸ್ ಹಾಕಿದ್ದಾರೆ ಎಂದು ನೋಡುತ್ತಿದ್ದಾರೆ. 2 ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಮೊದಲನೆಯದ್ದು ಕುದುರೆ ಇದ್ದ ಫ್ರೇಮ್ ಬದಲಾಗಿ ಆರ್ಮಿ ಇರುವ ಫ್ರೇಮ್ ಬಂದಿದೆ.

ಅಪ್‌ಡೇಟೆಡ್ ಟೀಸರ್‌ನಲ್ಲಿ ಕಾಣಿಸುವ ಮತ್ತೊಂದು ಬದಲಾವಣೆ ಟೀಸರ್ ಕಲರ್ ಪ್ಯಾಲೆಟ್ ಬದಲಿಸಲಾಗಿದೆ. ಇನ್ನು ಹೊಸ ಟೀಸರ್‌ನಲ್ಲಿರುವ ಆರ್ಮಿ ಫ್ರೇಮ್‌ ಸ್ಕ್ರೀನ್‌ ಶಾಟ್‌ ತೆಗೆದು ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿದೆ. ಇನ್ನು ಆರ್ಮಿ ಫ್ರೇಮ್ ನೋಡಿದವರಿಗೆ ಹೊಸ ಅನುಮಾನ ಶುರುವಾಗಿದೆ. ಚಿತ್ರದಲ್ಲಿ ಪ್ರಭಾಸ್ ಡಬಲ್ ರೋಲ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಅದರಲ್ಲಿ ಒಂದು ಆರ್ಮಿ ಆಫಿಸರ್ ಪಾತ್ರ ಅನ್ನೋದು ಕೆಲವರ ವಾದ.

Prabhas-salaar-updated

ಟೀಸರ್‌ನಲ್ಲಿ 'ಸಲಾರ್' ಪ್ರಭಾಸ್ ಲುಕ್ ಸರಿಯಾಗಿ ರಿವೀಲ್ ಮಾಡಿಲ್ಲ. ಆದರೆ ಈಗಾಗಲೇ ಮೂರ್ನಾಲ್ಕು ಪೋಸ್ಟರ್‌ಗಳು ಬಂದಿದೆ. ಅದರಲ್ಲಿ ಬೇರೆ ಬೇರೆ ಶೇಡ್‌ಗಳಲ್ಲಿ ಪ್ರಭಾಸ್‌ನ ನೋಡಬಹುದು. ಚಿತ್ರದಲ್ಲಿ ಬೇರೆ ಬೇರೆ ಶೇಡ್‌ಗಳಿರೋ ಪಾತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸಿದ್ದಾರಾ? ಅಥವಾ ತಂದೆ ಮಗನಾಗಿ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ ಎನ್ನುವ ಲೆಕ್ಕಾಚಾರ ಅಭಿಮಾನಿಗಳದ್ದು.

ಮೊದಲ ಪೋಸ್ಟರ್‌ನಲ್ಲಿ ಗಿರಿಜಾ ಮೀಸೆ ಬಿಟ್ಟು ಗನ್ ಹಿಡ್ದು ಪ್ರಭಾಸ್ ಕಾಣಿಸಿಕೊಂಡಿದ್ದರು. ಆದರೆ ಆ ನಂತರ ಬಂದ ಪೋಸ್ಟರ್‌ಗಳಲ್ಲಿ ಲುಕ್ ಕೊಂಚ ಬದಲಾಗಿದೆ. ಹೊಸ ರಿಲೀಸ್ ಡೇಟ್ ಜೊತೆಗೆ ಬಂದ ಪೋಸ್ಟರ್‌ನಲ್ಲೂ ಅದನ್ನು ಗಮನಿಸಬಹುದು. ಅದೇ ಕಾರಣಕ್ಕೆ ಚಿತ್ರದಲ್ಲಿ ಪ್ರಭಾಸ್ ತಂದೆ ಮಗನಾಗಿ ನಟಿಸುತ್ತಿದ್ದಾರಾ? ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. 'ಉಗ್ರಂ' ರೀಮೆಕ್ ಆಗಿದ್ದರೆ ಪ್ರಭಾಸ್ ಡಬಲ್ ರೋಲ್ ಹೇಗೆ ಸಾಧ್ಯ? ಎರಡು ಭಾಗಗಳಾಗಿ ಸಿನಿಮಾ ಹೇಗೆ ಬರುತ್ತೆ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಎಲ್ಲದ್ದಕ್ಕೂ ಡಿಸೆಂಬರ್ 22ಕ್ಕೆ ಉತ್ತರ ಸಿಗಲಿದೆ.

More from Filmibeat

English summary
Salaar teaser updated, fans searching the difference
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X