"ಕೊನೆಗೂ ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿಯೊಬ್ಬರು ಬರ್ತಿದ್ದಾರೆ"; ಪ್ರಭಾಸ್ ಪೋಸ್ಟ್ ವೈರಲ್

ತೆಲುಗು ನಟ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸುತ್ತಿದ್ದಾರೆ. ವಯಸ್ಸು 40 ದಾಟಿದರೂ ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಿನಿಮಾ ಸಿನಿಮಾ ಎನ್ನುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಪ್ರೀತಿಯ ಆರೋಪ. ಸದ್ಯ ಪ್ರಭಾಸ್ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆಯಿದೆ. ಈ ಹಿಂದೆ ಹಲವು ಬಾರಿ ಡಾರ್ಲಿಂಗ್ ಮದುವೆ ಬಗ್ಗೆ ಗುಸು ಗುಸು ಕೇಳಿಬಂದಿತ್ತು. ನಟಿ ಅನುಷ್ಕಾ ಶೆಟ್ಟಿ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬರುತ್ತಿದ್ದಾರೆ. ಇದೀಗ ಇಂಟ್ರೆಸ್ಟಿಂಗ್ ಪೋಸ್ಟ್ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

Prabhas recent Instagram story sparks speculation among curious netizens

ಅಂದಹಾಗೆ ಪ್ರಭಾಸ್ ಈಗ 'ಕಲ್ಕಿ' ಹಾಗೂ 'ರಾಜಾಸಾಬ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ 'ಸಲಾರ್-2' ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಶೀಘ್ರದಲ್ಲೇ 'ಸಲಾರ್-2' ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಅಷ್ಟಕ್ಕೂ ಪ್ರಭಾಸ್ ಇನ್‌ಸ್ಟಾ ಸ್ಟೋರಿ ಏನಿದೆ? ಎನ್ನುವುದನ್ನು ನೋಡುವುದಾದರೆ "ಡಾರ್ಲಿಂಗ್ಸ್(ಫ್ಯಾನ್ಸ್).. "ಕೊನೆಗೂ ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ.. ಕಾಯ್ತಾ ಇರಿ" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಕೆಲವರು ಪ್ರಭಾಸ್ ಆದಷ್ಟು ಬೇಗ ಮದುವೆ ಸುದ್ದಿ ನೀಡುತ್ತಿದ್ದಾರೆ. ಭಾವಿ ಪತ್ನಿಯನ್ನು ಪರಿಚಯಿಸುತ್ತಾರೆ ಎಂತೆಲ್ಲಾ ಚರ್ಚೆ ಆಗುತ್ತಿದೆ.

ಇತ್ತೀಚೆಗೆ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಕೂಡ ಈ ವರ್ಷವೇ ಪ್ರಭಾಸ್ ಮದುವೆ ನಡೆಯುತ್ತದೆ ಎಂದಿದ್ದರು. ಇದನ್ನೆಲ್ಲಾ ನೋಡಿ ಮದುವೆ ಸುದ್ದಿನೇ ಇರಬಹುದು ಎಂದು ಕೆಲವರು ಭಾವಿಸುತ್ತಾರೆ. ಆದರೆ ಬಹುತೇಕರು ಇದನ್ನು ನಂಬಲು ಸಿದ್ಧವಿಲ್ಲ. ಸ್ಟಾರ್ ನಟ, ನಟಿಯರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಇಂತಹ ಪೋಸ್ಟ್‌ಗಳನ್ನು ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ. ಕೊನೆಗೆ ಬೇರೆಯದ್ದೇ ಕಥೆ ಹೇಳಿ ಸುಮ್ಮನಾಗುತ್ತಾರೆ. ಪ್ರಭಾಸ್ ಪೋಸ್ಟ್ ಕೂಡ ಅದೇ ಅನುಮಾನ ಮೂಡಿಸಿದೆ.

ನಾಗ್ ಅಶ್ವಿನ್ ನಿರ್ದೇಶನದಲ್ಲಿ 'ಕಲ್ಕಿ 2898 AD' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವಾರವೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಮುಂದೂಡಲಾಯಿತು. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಸಹ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಜೂನ್ 27ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

'ರಾಜಾ ಸಾಬ್' ಚಿತ್ರದಲ್ಲಿ ಪ್ರಭಾಸ್ ಜೊತೆ ಮೂವರು ನಾಯಕಿಯರು ನಟಿಸುತ್ತಿದ್ದಾರೆ. ಮಾಳವಿಕಾ ಮೋಹನನ್ ಹಾಗೂ ನಿಧಿ ಅಗರ್‌ವಾಲ್ ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಇದೆ. ಈ ಎರಡೂ ಸಿನಿಮಾಗಳ ಬಗ್ಗೆಯೇ ಯಾವುದೋ ಅಪ್‌ಡೇಟ್ ಕೊಡಲು ಪ್ರಭಾಸ್ ಮುಂದಾಗಿದ್ದಾರೆ. ಅದನ್ನು ಈ ರೀತಿ ಗೂಡಾರ್ಥದ ಪೋಸ್ಟ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ.

Prabhas recent Instagram story sparks speculation among curious netizens

ಪ್ರಶಾಂತ್ ನೀಲ್ ಕೂಡ 'ಸಲಾರ್-2' ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಎಲ್ಲವೂ ಸಿದ್ಧವಿದೆ. ಶೀಘ್ರದಲ್ಲೇ ಸಿನಿಮಾ ಶುರುವಾಗುತ್ತದೆ. ಆದರೆ ಸದ್ಯಕ್ಕೆ ಕೊಂಚ ನಾನು ಬಿಡುವು ಪಡೆಯುತ್ತಿದ್ದೇನೆ ಎಂದಿದ್ದಾರೆ. ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ 'ಸಲಾರ್' ಕಥೆ ಹೇಳುವ ಪ್ರಯತ್ನ ನಡೀತಿದೆ. 'ಸೀತಾರಾಮಂ' ಖ್ಯಾತಿಯ ಹನು ರಾಘವಪುಡಿ ನಿರ್ದೇಶನದ ಚಿತ್ರಕ್ಕೂ ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Just wait, Prabhas cryptic post goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X