For Quick Alerts
  ALLOW NOTIFICATIONS  
  For Daily Alerts

  ಅಬ್ಬಾ..!150 ಕೋಟಿ ರೂ. ಮೌಲ್ಯದ ಜಾಹೀರಾತು ಆಫರ್ ತಿರಸ್ಕರಿಸಿದ್ರಾ ಪ್ರಭಾಸ್?

  |

  ಟಾಲಿವುಡ್ ಸ್ಟಾರ್ ನಟ, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಸದ್ಯ ದೇಶದ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಪ್ರಭಾಸ್ ಖ್ಯಾತಿ ಟಾಲಿವುಡ್ ಮಾತ್ರವಲ್ಲ ದೇಶ-ವಿದೇಶಗಳಿಗೂ ಹಬ್ಬಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

  ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಬಾಹುಬಲಿ ಸ್ಟಾರ್ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 150 ಕೋಟಿ ರೂ. ಮೌಲ್ಯದ ಜಾಹೀರಾತು ಆಫರ್ ಗಳನ್ನು ತಿರಸ್ಕಾರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜಾಹೀರಾತು ಕಂಪನಿಗಳು ಪ್ರಭಾಸ್ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದಾರೆ. ಕೋಟಿ ಕೋಟಿ ಸುರಿಯಲು ತಯಾರಾಗಿದ್ದಾರೆ. ಆದರೆ ಪ್ರಭಾಸ್ ಎಲ್ಲಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ತಯಾರಿಲ್ಲ. ಮುಂದೆ ಓದಿ..

  ಜಾಹೀರಾತು ವಿಚಾರದಲ್ಲೂ ಪ್ರಭಾಸ್ ಸಖತ್ ಚೂಸಿ

  ಜಾಹೀರಾತು ವಿಚಾರದಲ್ಲೂ ಪ್ರಭಾಸ್ ಸಖತ್ ಚೂಸಿ

  ಕಳೆದ ಒಂದು ವರ್ಷದಲ್ಲಿ ಪ್ರಭಾಸ್ 150 ಕೋಟಿ ರೂ. ಮೌಲ್ಯದ ಜಾಹೀರಾತು ಆಫರ್ ಗಳನ್ನು ಪ್ರಭಾಸ್ ನಿರಾಕರಿಸಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕೋಟಿ ಕೋಟಿ ಸಿಗುತ್ತೆ ಅಂದರೆ ಅಷ್ಟು ಸುಲಭವಾಗಿ ಯಾರು ಕೈಚೆಲ್ಲುವುದಿಲ್ಲ. ಆದರೆ ಪ್ರಭಾಸ್ ಹಾಗಲ್ಲ, ಸಿನಿಮಾಗಳ ಹಾಗೆ ಜಾಹೀರಾತುಗಳ ವಿಚಾರದಲ್ಲೂ ಸಖತ್ ಚೂಸಿ.

  ತನ್ನ ಮೌಲ್ಯ ಅರಿತಿರುವ ಪ್ರಭಾಸ್

  ತನ್ನ ಮೌಲ್ಯ ಅರಿತಿರುವ ಪ್ರಭಾಸ್

  ಅಭಿಮಾನಿ ಬಳಗ, ಮಾರುಕಟ್ಟೆ ಮೌಲ್ಯ, ತನ್ನ ಪ್ರಭಾವದ ಬಗ್ಗೆ ಚೆನ್ನಾಗಿ ತಿಳಿದಿರುವ ಪ್ರಭಾಸ್ ಜಾಹೀರಾತುಗಳನ್ನು ಅಳೆದು ತೂಗಿ ಆಯ್ಕೆ ಮಾಡುತ್ತಾರೆ. ಹಾಗಾಗಿ ಕಳೆದ ಒಂದು ವರ್ಷದಲ್ಲಿ ಅನೇಕ ಜಾಹೀರಾತುಗಳನ್ನು ರಿಜೆಕ್ಟ್ ಮಾಡಿದ್ದಾರೆ. ಉಡುಪು, ಎಲೆಕ್ಟ್ರಾನಿಕ್ ವಸ್ತು ಸೇರಿದಂತೆ ಅನೇಕ ಬ್ರ್ಯಾಂಡ್ ಗಳನ್ನು ತಿರಸ್ಕರಿಸಿದ್ದಾರೆ.

  ವಿದೇಶಗಳಲ್ಲೂ ಪ್ರಭಾಸ್ ಜನಪ್ರಿಯ

  ವಿದೇಶಗಳಲ್ಲೂ ಪ್ರಭಾಸ್ ಜನಪ್ರಿಯ

  ಪ್ರಭಾಸ್ ಗೆ ಹತ್ತಿರವಿರುವ ಮೂಲಗಳು ಹೇಳುವ ಪ್ರಕಾರ, "ಪ್ರಭಾಸ್ ಎಂಬುದು ಒಂದು ಬ್ರ್ಯಾಂಡ್. ಅವರ ಜನಪ್ರಿಯತೆ ದೇಶದಲ್ಲಿ ಮಾತ್ರವಲ್ಲ ವಿದೇಶಗಳ ಉದ್ದ-ಅಗಲಕ್ಕೂ ಹಬ್ಬಿದೆ. ಅವರ ಮೌಲ್ಯ ಅಗಾಧವಾಗಿದೆ. ಕಳೆದ ಒಂದು ವರ್ಷದಲ್ಲಿ 150 ಕೋಟಿ ರೂ. ಮೌಲ್ಯದ ಬ್ರ್ಯಾಂಡ್ ಅನುಮೋದನೆಯನ್ನು ನಿರಾಕರಿಸಿದ್ದಾರೆ" ಎಂದಿದ್ದಾರೆ.

  ಬುದ್ಧಿವಂತಿಕೆಯಿಂದ ಆಯ್ಕೆ ಮಾಡುತ್ತಾರೆ

  ಬುದ್ಧಿವಂತಿಕೆಯಿಂದ ಆಯ್ಕೆ ಮಾಡುತ್ತಾರೆ

  "ಪ್ರಭಾಸ್ ಈ ಹಿಂದೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಲೂ ಮುಂದುವರೆಸಿದ್ದಾರೆ. ಆದರೆ ಯಾವ ಜಾಹೀರಾತು ಕಂಪನಿ ಮತ್ತು ವಸ್ತುಗಳ ಬಗ್ಗೆ ತುಂಬಾ ಸೆಲೆಕ್ಟೀವ್ ಆಗಿದ್ದಾರೆ. ಅವರು ತನ್ನ ಸ್ಥಾನವನ್ನು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ತುಂಬಾ ಬುದ್ಧಿವಂತಿಕೆಯಿಂದ ಆಯ್ಕೆ ಮಾಡುತ್ತಾರೆ" ಎಂದು ಹೇಳಿದ್ದಾರೆ.

  ಹಣಕ್ಕಾಗಿ ಬ್ರ್ಯಾಂಡ್ ಹಿಂದೆ ಓಡಿಲ್ಲ ಪ್ರಭಾಸ್

  ಹಣಕ್ಕಾಗಿ ಬ್ರ್ಯಾಂಡ್ ಹಿಂದೆ ಓಡಿಲ್ಲ ಪ್ರಭಾಸ್

  ಪ್ರಭಾಸ್ ಜಾಹೀರಾತುಗಳನ್ನು ತಿರಸ್ಕಾರ ಮಾಡಿರುವುದು ಇದೇ ಮೊದಲಲ್ಲ, ಬಾಹುಬಲಿ ಸಿನಿಮಾ ಮಾಡುವ ಸಮಯದಲ್ಲೂ ಅನೇಕ ಜಾಹೀರಾತು ಆಫರ್ ಗಳನ್ನು ತಿರಸ್ಕರಿಸಿದ್ದರು ಎನ್ನುವ ಸುದ್ದಿ ಇದೆ. ಪ್ರಭಾಸ್ ಯಾವತ್ತು ಹಣಕ್ಕಾಗಿ ಬ್ರ್ಯಾಂಡ್ ಗಳ ಹಿಂದೆ ಓಡಿಲ್ಲ ಎನ್ನುತ್ತಾರೆ ಪ್ರಭಾಸ್ ಅಪ್ತರು.

  Dhanush ಅವರ ಸಂಭಾವನೆ ಈಗ ಎಷ್ಟು ಗೋತ್ತಾ | Filmibeat Kannada
  ಪ್ರಭಾಸ್ ಸಿನಿಮಾಗಳು

  ಪ್ರಭಾಸ್ ಸಿನಿಮಾಗಳು

  ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಪ್ರಭಾಸ್ ಸದ್ಯ ಬಹುನಿರೀಕ್ಷೆಯ 'ರಾಧೆ ಶ್ಯಾಮ್' ಬಿಡುಗಡೆಗೆ ಕಾಯುತ್ತಿದ್ದಾರೆ. ಜೊತೆಗೆ 'ಸಲಾರ್' ಮತ್ತು 'ಆದಿಪುರುಷ್' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಏಕಕಾಲಕ್ಕೆ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಿನಿಮಾಗಳ ಜೊತೆಗೆ ನಿರ್ದೇಶಕ ನಾಗ್ ಅಶ್ವಿನ್ ಅವರ ಸಿನಿಮಾ ಕೂಡ ಕೈಯಲ್ಲಿದೆ.

  English summary
  Telugu Actor Prabhas rejects Rs.150 crore advertisement offer due to Choosy nature.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X