10 ಕೋಟಿ ರೂ. ಜಾಹೀರಾತು ಆಫರ್ ತಿರಸ್ಕರಿಸಿದ್ದ ನಟ ಪ್ರಭಾಸ್: ಕಾರಣವೇನು?
ಟಾಲಿವುಡ್ ಸ್ಟಾರ್ ನಟ, ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಅನೇಕ ಜಾಹೀರಾತು ಕಂಪೆನಿಗಳು ಕ್ಯೂ ನಿಂತಿದ್ದಾರೆ. ಪ್ರಭಾಸ್ ಸ್ಟಾರ್ ಮೌಲ್ಯ ಹಾಗಿದೆ. ದಕ್ಷಿಣದಿಂದ ಉತ್ತರದವರೆಗೂ ಪ್ರಭಾಸ್ ಹವಾ ಇದೆ.
ಬಾಹುಬಲಿ ಸಿನಿಮಾ ಬಳಿಕ ಫ್ಯಾನ್ಸ್ ಮತ್ತು ಸಂಭಾವನೆ ಏರಿಕೆಯ ಜೊತೆಗೆ ಪ್ರಭಾಸ್ ಸ್ಟಾರ್ ಮೌಲ್ಯವೂ ಉತ್ತುಂಗಕ್ಕೆ ಏರಿದೆ. ಇದಕ್ಕೆಲ್ಲ ಕಾರಣ ಬಾಹುಬಲಿ ಎನ್ನುವ ಒಂದು ಸಿನಿಮಾ. ಈ ಸಿನಿಮಾಗೆ ಪ್ರಭಾಸ್ ಹಾಕಿರುವ ಶ್ರಮ ಮತ್ತು ಡೆಡಿಕೇಶನ್. ಹೌದು, ಬಾಹುಬಲಿ ಸಿನಿಮಾಗಾಗಿ ಪ್ರಭಾಸ್ ನಾಲ್ಕೈದು ವರ್ಷಗಳನ್ನು ಮೀಸಲಿಟ್ಟಿದ್ದಾರೆ. ಸ್ಟಾರ್ ನಟನೊಬ್ಬ ಒಂದು ಸಿನಿಮಾಗೆ ಇಷ್ಟು ಸುದೀರ್ಘ ಅವಧಿ ನೀಡುವುದು ತೀರ ವಿರಳ. ಆದರೆ ಪ್ರಭಾಸ್, ರಾಜಮೌಳಿ ಸಿನಿಮಾಗಾಗಿ ದೀರ್ಘ ಕಾಲ್ ಶೀಟ್ ನೀಡಿದ್ದರು. ಇದೇ ಸಮಯದಲ್ಲಿ ಪ್ರಭಾಸ್ 10 ಕೋಟಿ ರೂ. ಜಾಹೀರಾತನ್ನು ತಿರಸ್ಕರಿಸಿದ್ದರು. ಮುಂದೆ ಓದಿ..

ಬಾಹುಬಲಿಗಾಗಿ 10 ಕೋಟಿ ರೂ ಜಾಹೀರಾತು ಕೈಚೆಲ್ಲಿದ್ದ ಪ್ರಭಾಸ್
ಬಾಹುಬಲಿ ಸಮಯದಲ್ಲಿ ಪ್ರಭಾಸ್ ಬೇರೆ ಯಾವುದೇ ಸಿನಿಮಾಗಳ ಬಗ್ಗೆ ಯೋಚಿಸಿರಲಿಲ್ಲ. ಆಗ ಅನೇಕ ನಿರ್ಮಾಪಕರು ಮತ್ತು ಜನರು ಪ್ರಭಾಸ್ ಗೆ ಕಾರಣವಿಲ್ಲದೆ ಹಣ ನೀಡುತ್ತಿದ್ದರಂತೆ. ಆದರೆ ಪ್ರಭಾಸ್ ಯಾರ ಬಳಿಯೂ ಹಣ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಇದೇ ಸಮಯದಲ್ಲಿ ಪ್ರಭಾಸ್ ಗೆ 10 ಕೋಟಿ ರೂ. ಜಾಹೀರಾತಿನ ಆಫರ್ ಸಹ ಬಂದಿತ್ತು. ಆದರೆ ಬಾಹುಬಲಿಗಾಗಿ ಪ್ರಭಾಸ್ ಈ ಜಾಹೀರಾತನ್ನು ಕೈ ಚೆಲ್ಲಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ರಾಜಮೌಳಿ ಬಹಿರಂಗ ಪಡಿಸಿದ್ದಾರೆ.

ಪ್ರಭಾಸ್ ಗಮನ ಬಾಹುಬಲಿ ಕಡೆ ಮಾತ್ರವಿತ್ತು
ಈ ಹಿಂದೆ ತೆಲುಗು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಬಹಿರಂಗ ಪಡಿಸಿದ್ದಾರೆ. 'ಪ್ರಭಾಸ್ ಬಾಹುಬಲಿ ಸಿನಿಮಾಗೂ ಮೊದಲು 3 ಸತತ ಹಿಟ್ ಸಿನಿಮಾಗಳನ್ನು ನೀಡಿದ್ದರು. ನಿರ್ಮಾಪಕರು ಅವರ ಹಿಂದೆ ಓಡುತ್ತಿದ್ದರು. ಆದರೆ ಪ್ರಭಾಸ್ ಬಾಹುಬಲಿ ಕಡೆ ಮಾತ್ರ ಗಮನ ಹರಿಸಿದ್ದರು. ಆಗ ಪ್ರಭಾಸ್ ತನ್ನ ವ್ಯವಸ್ಥಾಪಕರಿಗೆ ಯಾರ ಬಳಿಯೂ ಹಣ ತೆಗೆದುಕೊಳ್ಳಬೇಡಿ ಎಂದು ಸೂಚಿಸಿದ್ದರು' ಎಂದು ಹೇಳಿದ್ದಾರೆ.

10 ಕೋಟಿ ಜಾಹೀರಾತಿನ ಬಗ್ಗೆ ರಾಜಮೌಳಿ ಹೇಳಿದ್ದೇನು?
'ನಿರ್ಮಾಪಕರು ಹಣ ಮತ್ತು ಚೆಕ್ ಜೊತೆ ಪ್ರಭಾಸ್ ಮನೆ ಬಳಿ ಬರುತ್ತಿದ್ದರು. ಇದರಿಂದ ಗಾಬರಿಯಾಗಿ ಪ್ರಭಾಸ್ ನನಗೆ ಕರೆ ಮಾಡಿ ಏನು ಮಾಡಬೇಕು ಎಂದು ಕೇಳಿದ್ದರು. ಆಗ ನಾನು ಈ ಹಣಕ್ಕೂ ನನ್ನ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಫಿಡೆವಿಟ್ ಮಾಡಲು ಹೇಳಿದೆ. ಆದರೆ ಪ್ರಭಾಸ್ ಈ ದೊಡ್ಡ ಮೊತ್ತದ ಹಣವನ್ನು ಪಡೆದು ಬಳಿಕ ಹೇಗೆ ಹಿಂತಿರುಗಿಸುವುದೆಂದು ನಿರಾಕರಿಸಿದರು. ಅದೇ ಸಮಯದಲ್ಲಿ 10 ಕೋಟಿ ರೂ. ಜಾಹೀರಾತು ಆಫರ್ ಬಂದಿತ್ತು. ಆದರೆ ಅದನ್ನು ತಿರಸ್ಕರಿಸಿದರು.
Recommended Video

ಪ್ರಭಾಸ್ ಗೆ ಸುಳ್ಳು ಹೇಳುವುದು ಗೊತ್ತಿಲ್ಲ- ರಾಜಮೌಳಿ
ಪ್ರಭಾಸ್ ಗೆ ಸುಳ್ಳು ಹೇಳುವುದು ಗೊತ್ತಿಲ್ಲ. ಯಾವುದೇ ಕಾರಣಕ್ಕೂ ಬೇರೆಯವರ ಭಾವನೆಗಳನ್ನು ನೋಯಿಸುವುದಿಲ್ಲ. ಜನರಿಗೆ ನೋವು ಕೊಡಲು ಇಷ್ಟಪಡುವುದಿಲ್ಲ' ಎಂದು ರಾಜಮೌಳಿ ಅಂದು ಪ್ರಭಾಸ್ ಬಗ್ಗೆ ಹೇಳಿದ್ದ ಮಾತುಗಳು ಇದೀಗ ಮತ್ತೆ ವೈರಲ್ ಆಗುತ್ತಿದೆ.


Click it and Unblock the Notifications











