ಅನುಷ್ಕಾ ಶೆಟ್ಟಿ ಕೊಟ್ಟ ಚಾಲೆಂಜ್ ರಾಮ್‌ಚರಣ್‌ಗೆ ದಾಟಿಸಿದ ಪ್ರಭಾಸ್
ಬಹಳ ದಿನಗಳ ನಂತರ ಅನುಷ್ಕಾ ಶೆಟ್ಟಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆಕೆ ನಟಿಸಿರುವ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಈ ಕಾಮಿಡಿ ಎಂಟರ್‌ಟೈನರ್ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಅಭಿಮಾನಿಗಳು ಮತ್ತೆ ತೆರೆಮೇಲೆ ಸ್ವೀಟಿ ದರ್ಶನಕ್ಕೆ ಕಾಯುತ್ತಿದ್ದಾರೆ.
ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಬಹಳ ವಿಭಿನ್ನವಾಗಿ ಪ್ರಚಾರ ಮಾಡಲಾಗುತ್ತಿದೆ. ನಟ ನವೀನ್ ಪೋಲಿಶೆಟ್ಟಿ ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅನುಷ್ಕಾ ಶೆಟ್ಟಿ ಮಾತ್ರ ಸೈಲೆಂಟ್ ಆಗಿದ್ದಾರೆ. ಕೆಲ ಸುದ್ದಿಮಾಧ್ಯಮಗಳಿಗೆ ಫೋನ್‌ನಲ್ಲಿ ಸಂದರ್ಶನ ನೀಡಿದ್ದಾರೆ ಅಷ್ಟೆ. ಆದರೆ ಈಗ ವಿಭಿನ್ನ ಚಾಲೆಂಜ್ ಶುರು ಮಾಡಿ ಸಿನಿಮಾ ಬಗ್ಗೆ ಗಮನ ಸೆಳೆಯುತ್ತಿದ್ದಾರೆ.

'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದಲ್ಲಿ ಅನುಷ್ಕಾ ಶೆಫ್ ಪಾತ್ರದಲ್ಲಿ ನಟಿಸಿದ್ದಾರೆ. ನವೀನ್ ಸ್ಯಾಂಡಪ್ ಕಾಮೆಡಿಯನ್ ಆಗಿ ಮಿಂಚಿದ್ದಾರೆ. ಪ್ರಚಾರದ ಭಾಗವಾಗಿ ತಮಗಿಷ್ಟವಾದ ಅಡುಗೆಯ ರೆಸಿಪಿಯನ್ನು ಸ್ವೀಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ #MSMPRecipeChallenge ಹೆಸರಿನಲ್ಲಿ ಹೊಸ ಚಾಲೆಂಜ್ ಶುರು ಮಾಡಿದ್ದಾರೆ. ಅನುಷ್ಕಾ ತಮ್ಮ ನೆಚ್ಚಿನ ಮಂಗಳೂರು ಚಿಕನ್ ಕರಿ, ನೀರ್ ದೋಸೆ ಮಾಡುವುದು ಹೇಗೆ ಎಂದು ವಿವರಿಸಿ ಟ್ವೀಟ್ ಮಾಡಿದ್ದಾರೆ.
'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದಲ್ಲಿ ಶೆಫ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಅದಕ್ಕಾಗಿಯೇ ನಾನು ನನ್ನ ನೆಚ್ಚಿನ ರೆಸಿಪಿ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಚಾಲೆಂಜ್ ಆರಂಭಿಸುತ್ತಿದ್ದೇನೆ. ಮೊದಲು ಪ್ರಭಾಸ್‌ಗೆ ನನ್ನ ಚಾಲೆಂಜ್. ಪ್ರಭಾಸ್ ಭೋಜನಪ್ರಿಯ. ತನ್ನ ಭೋಜನದಿಂದ ಅತಿಥಿಗಳನ್ನು ಅಚ್ಚರಿಗೊಳಿಸುತ್ತಾರೆ. ಈಗ ಪ್ರಭಾಸ್ ತಮ್ಮ ನೆಚ್ಚಿನ ಖಾದ್ಯವನ್ನು ಹೇಗೆ ಮಾಡಬೇಕೆಂದು ವಿವರಿಸುವ ಪೋಸ್ಟ್ ಅನ್ನು ಹಂಚಿಕೊಳ್ಳಬೇಕು' ಎಂದು ಪ್ರಭಾಸ್‌ನ ಅನುಷ್ಕಾ ಟ್ಯಾಗ್ ಮಾಡಿದ್ದಾರೆ.
ಅನುಷ್ಕಾ ಚಾಲೆಂಜ್‌ಗೆ ಪ್ರಭಾಸ್ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ತಕ್ಷಣವೇ ಈ ಚಾಲೆಂಜ್ ಸ್ವೀಕರಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. "ಸ್ವೀಟಿ ನನಗೆ ಬಹಳ ವರ್ಷಗಳಿಂದ ಗೊತ್ತು. ಆದರೆ ಈಗ ಆಕೆಯ ನೆಚ್ಚಿನ ಆಹಾರ ಯಾವುದು ಎಂದು ಗೊತ್ತಾಯ್ತು. ಆಕೆಯ ಚಾಲೆಂಜ್ ಸ್ವೀಕರಿಸುತ್ತೇನೆ. ನನ್ನ ನೆಚ್ಚಿನ ಪ್ರಾನ್ ಪುಲಾವ್ ಅನ್ನು ಹೇಗೆ ಮಾಡಬೇಕೆಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ರಾಮ ಚರಣ್ ಇದನ್ನು ಮುಂದುವರಿಸಬೇಕು ಎಂದು ಬಯಸುತ್ತೇನೆ" ಎಂದು ಪ್ರಭಾಸ್, ಟಾಲಿವುಡ್ ಮಗಧೀರನನ್ನು ಟ್ಯಾಗ್ ಮಾಡಿದ್ದಾರೆ.
ಅಭಿಮಾನಿಗಳು ಸಹ ನೆಚ್ಚಿನ ಭಕ್ಷ್ಯಗಳು ಮತ್ತು ಅದರ ರೆಸಿಪಿ, ಮಾಡುವ ವಿಧಾನವನ್ನು ವಿಧಾನವನ್ನು ಹಂಚಿಕೊಳ್ಳಲು ಪ್ರಭಾಸ್ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈಗ #MSMPRecipeChallenge ಹ್ಯಾಷ್‌ಟ್ಯಾಗ್‌ನಲ್ಲಿ ನಟನಟಿಯರ ನಡುವೆ ಅಡುವೆ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಯಾವ ಅಡುಗೆರ ರೆಸೆಪಿ ಹಂಚಿಕೊಳ್ಳುತ್ತಾರೋ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಮಹೇಶ್ ಬಾಬು ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ರಾಧನ್ ಸಂಗೀತ ಚಿತ್ರಕ್ಕಿದೆ. 'ನಿಶಬ್ಧಂ' ಬಳಿಕ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಇದ್ದ ಸ್ವೀಟಿ ಬಹಳ ಇಷ್ಟಪಟ್ಟು 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಒಪ್ಪಿಕೊಂಡಿದ್ದಾರೆ. ಇದು ಸೀದಾ ಸಾದಾ ಲವ್ ಸ್ಟೋರಿ ಅಲ್ಲ. ಬೇರೆಯದ್ದೇ ಟ್ವಿಸ್ಟ್ ಇದೆ ಅನ್ನುವುದು ಟ್ರೈಲರ್ ನೋಡಿದರೆ ಗೊತ್ತಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನು ಸ್ವೀಟಿ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಜಯಸೂರ್ಯ ನಟನೆಯ ಕಥನಾರ್ ಸಿನಿಮಾದಲ್ಲಿ ಆಕೆ ಬಣ್ಣ ಹಚ್ಚುತ್ತಿದ್ದಾರೆ. ಬಹಳ ಇಷ್ಟಪಟ್ಟು ಈ ಕತೆ ಒಪ್ಪಿಕೊಂಡಿದ್ದು 5 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ.


Click it and Unblock the Notifications











