For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಈಸ್ ಬ್ಯಾಕ್.. ಸೆಟ್‌ನಲ್ಲಿ ಪ್ರಭಾಸ್‌ ನೋಡಿ ಚಿತ್ರತಂಡ ಥ್ರಿಲ್!

  |

  ಬಾಹುಬಲಿ ಪ್ರಭಾಸ್ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. ಇತ್ತೀಚೆಗೆ ಪ್ರಭಾಸ್ ದೊಡ್ಡಪ್ಪ ಖ್ಯಾತ ನಟ ಕೃಷ್ಣಂರಾಜು ಕೊನೆಯುಸಿರೆಳೆದಿದ್ದರು. ಹಾಗಾಗಿ ಯಂಗ್ ರೆಬಲ್ ಸ್ಟಾರ್ ಎಲ್ಲಾ ಕೆಲಸಗಳನ್ನು ಬಿಟ್ಟು ದೊಡ್ಡಪ್ಪನ ಫ್ಯಾಮಿಲಿ ಜೊತೆಗೆ ಇದ್ದರು. ತನಗೆ ತಂದೆ ಸಮಾನರಾಗಿದ್ದ ದೊಡ್ಡಪ್ಪನ ಅಗಲಿಕೆಯಿಂದ ಡಾರ್ಲಿಂಗ್ ಕುಗ್ಗಿ ಹೋಗಿದ್ದರು. ಸದ್ಯಕ್ಕೆ ಮತ್ತೆ ಪ್ರಭಾಸ್ ಶೂಟಿಂಗ್ ಸೆಟ್‌ಗೆ ಹೋಗಲ್ಲ ಅಂತಲೇ ಎಲ್ಲಾ ಅಂದುಕೊಂಡಿದ್ದರು.

  ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಆದಿಪುರುಷ್' ಶೂಟಿಂಗ್ ಈಗಾಗಲೇ ಮುಗಿದಿದ್ದು, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರೀಕರಣ ನಡೀತಿದೆ. ಚಿತ್ರಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭಾರೀ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವಾರವೇ ಹೊಸ ಶೆಡ್ಯೂಲ್ ಶುರುವಾಗಬೇಕಿತ್ತು. ಆದರೆ ಕೃಷ್ಣಂರಾಜು ಹಠಾತ್ ನಿಧನದ ಹಿನ್ನೆಲೆ ಪ್ರಭಾಸ್ ಚಿತ್ರೀಕರಣದಲ್ಲಿ ಭಾಗಿ ಆಗಿರಲಿಲ್ಲ. ಬುಧವಾರಕ್ಕೆ ದೊಡ್ಡಪ್ಪ ನಿಧನರಾಗಿ 11 ದಿನ ಪೂರ್ತಿಯಾಗಿದ್ದು, ಇದೀಗ ಯಂಗ್‌ ರೆಬೆಲ್ ಸ್ಟಾರ್ ಸೆಟ್‌ಗೆ ಅಡಿ ಇಟ್ಟಿದ್ದಾರಂತೆ.

  ನೋವಿನಲ್ಲಿರುವ ಪ್ರಭಾಸ್ ಬಗ್ಗೆ ಹೀಗೊಂದು ಗಾಸಿಪ್: ಫ್ಯಾನ್ಸ್‌ಗೆ ಆ ಟೀಂ ಮೇಲೆ ಅನುಮಾನ?ನೋವಿನಲ್ಲಿರುವ ಪ್ರಭಾಸ್ ಬಗ್ಗೆ ಹೀಗೊಂದು ಗಾಸಿಪ್: ಫ್ಯಾನ್ಸ್‌ಗೆ ಆ ಟೀಂ ಮೇಲೆ ಅನುಮಾನ?

  'ಸಲಾರ್' ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್ ನಿರ್ಮಿಸಿ ಎಲ್ಲರೂ ಡೇಟ್ಸ್ ಬ್ಲಾಕ್ ಮಾಡಿಕೊಂಡು ಇಡೀ ತಂಡ ಕಾಯ್ತಿದೆ. ನನ್ನೊಬ್ಬನಿಂದ ಯಾರಿಗೂ ತೊಂದರೆಯಾಗಬಾರದು ಅನ್ನುವ ಕಾರಣಕ್ಕೆ ಪ್ರಭಾಸ್ ಎಲ್ಲರೂ ನಿರೀಕ್ಷೆ ಮಾಡಿದ್ದಕ್ಕಿಂತ ಬೇಗ ಶೂಟಿಂಗ್‌ಗೆ ಮರಳಿದ್ದಾರೆ. ಸೆಟ್‌ನಲ್ಲಿ ಯಂಗ್‌ ರೆಬಲ್ ಸ್ಟಾರ್‌ನ ನೋಡಿದವರು ಅಚ್ಚರಿಕೊಂಡಿದ್ದಾರೆ. 10 ದಿನಗಳ ಕಾಲ ಈ ಶೆಡ್ಯೂಲ್ ಶೂಟಿಂಗ್ ನಡೆಯಲಿದ್ದು, ನಾಯಕಿ ಶ್ರುತಿ ಹಾಸನ್ ಕೂಡ ಭಾಗಿ ಆಗಿದ್ದಾರೆ. ಅಕ್ಟೋಬರ್ 23ಕ್ಕೆ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

  ರಾಮೋಜಿ ಫಿಲ್ಮ್ ಸಿಟಿಯಲ್ಲಿ 12 ಬೇರೆ ಬೇರೆ ರೀತಿಯ ಸೆಟ್‌ಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಸೆಟ್ ಹಾಕಿ ಬಹಳ ದಿನಗಳಾಗಿದೆ. ಒಂದೊಂದು ಸೆಟ್‌ನಲ್ಲಿ ಮೂರ್ನಾಲ್ಕು ದಿನ ಶೂಟಿಂಗ್ ಇರಲಿದೆ. ಹಾಗಾಗಿ ಸಮಯದ ವ್ಯರ್ಥ ಮಾಡುವುದು ಬೇಡ ಎಂದು ಪ್ರಭಾಸ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ವಾರದ ಶೂಟಿಂಗ್ ನಂತರ ದಸರಾ ಸಮಯದಲ್ಲಿ ಸಣ್ಣ ಬ್ರೇಕ್ ತೆಗೆದುಕೊಂಡು ಮತ್ತೆ ಅಕ್ಟೋಬರ್ 3ನೇ ವಾರದಿಂದ 'ಸಲಾರ್' ಹಾಗೂ 'ಪ್ರಾಜೆಕ್ಟ್- K' ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ನಂತರ ಮಾರುತಿ ನಿರ್ದೇಶನದ ಚಿತ್ರಕ್ಕೂ ಡೇಟ್ಸ್ ಕೊಟ್ಟಿದ್ದಾರೆ.

  ದಸರಾ ಹಬ್ಬಕ್ಕೆ 'ಆದಿಪುರುಷ್' ಟೀಸರ್, ಫಸ್ಟ್ ಲುಕ್: ಟ್ರೆಂಡಿಂಗ್‌ನಲ್ಲಿ ಪ್ರಭಾಸ್!ದಸರಾ ಹಬ್ಬಕ್ಕೆ 'ಆದಿಪುರುಷ್' ಟೀಸರ್, ಫಸ್ಟ್ ಲುಕ್: ಟ್ರೆಂಡಿಂಗ್‌ನಲ್ಲಿ ಪ್ರಭಾಸ್!

  ದಸರಾ ಸಂಭ್ರಮದಲ್ಲಿ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಇನ್ನು ದೆಹಲಿಯಲ್ಲಿ ಲವ್​ ಕುಶ್ ರಾಮ್​ಲೀಲಾ ಸಮಿತಿ ಹಮ್ಮಿಕೊಂಡಿರುವ ದಸರಾ ಹಬ್ಬದ ಆಚರಣೆಯಲ್ಲಿ ಪ್ರಭಾಸ್ ಭಾಗಿಯಾಗಲಿದ್ದಾರೆ. ಕೊನೆಯ ದಿನ ರಾವಣನ ಪ್ರತಿಕೃತಿ ದಹನ ಮಾಡಲಾಗುತ್ತದೆ. ಈ ಬಾರಿ ರಾವಣನ ಪ್ರತಿಕೃತಿಯನ್ನು ಪ್ರಭಾಸ್ ದಹನ ಮಾಡಲಿದ್ದಾರೆ.

  "ಪ್ರಭಾಸ್ ಸರ್ ಮದುವೆ ಆದರೆ ನಾನು ಮದುವೆ ಆಗ್ತೀನಿ": ಧನಂಜಯ್ ಹೇಳಿಕೆ ವೈರಲ್!

  English summary
  Prabhas Resumed the shooting of Salaar from yesterday in Ramoji Film city. Salaar is an upcoming Indian Telugu-language action Film directed by Prashanth Neel, and produced by Vijay Kiragandur under Hombale Films. Know More.
  Friday, September 23, 2022, 12:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X