1000 ಕಿ.ಮೀ ದೂರದ ಹೋಟೆಲ್‌ನಲ್ಲಿ ಆರ್ಡರ್; ವಿಮಾನದಲ್ಲಿ ಬರುತ್ತೆ ಪ್ರಭಾಸ್ ಊಟದ ಪಾರ್ಸಲ್

ತೆಲುಗು ನಟ ಪ್ರಭಾಸ್ ಭೋಜನಪ್ರಿಯ ಎನ್ನುವುದು ಗೊತ್ತೇಯಿದೆ. ಬಗೆ ಬಗೆಯ ಭಕ್ಷ್ಯಭೋಜನವನ್ನು ಯಂಗ್ ರೆಬಲ್ ಸ್ಟಾರ್ ಇಷ್ಟು ಪಟ್ಟು ಸವಿಯುತ್ತಾರೆ. ತಾವು ಮಾತ್ರವಲ್ಲ ನಮ್ಮ ಸುತ್ತಾ ಇರುವವರಿಗೂ ತರಹೇವಾರಿ ಊಟೋಪಚಾರ ಮಾಡುತ್ತಾರೆ. ಪ್ರಭಾಸ್ ಜೊತೆ ಊಟ ಮಾಡುವುದಕ್ಕೆ ಭಯವಾಗುತ್ತದೆ. ಡಾರ್ಲಿಂಗ್ ಬಲವಂತ ಮಾಡಿ ಊಟ ಮಾಡಿಸುತ್ತಾರೆ ಎಂದು ಸಹ ಕಲಾವಿದರು ಹೇಳಿರುವುದು ಇದೆ.

ವೆಜ್, ನಾನ್‌ವೆಜ್, ಇಂಡಿಯನ್- ಚೈನೀಸ್ ಹೀಗೆ ಎಲ್ಲಾ ತರಹದ ಭೋಜನವನ್ನು ಪ್ರಭಾಸ್ ಸವಿಯುತ್ತಾರೆ. ತಮ್ಮಿಷ್ಟದ ಆಹಾರದ ಬಗ್ಗೆ ಪ್ರಭಾಸ್ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ಭೋಜನಪ್ರೀತಿ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಸಾವಿರಾರು ಕಿಲೋ ಮೀಟರ್ ದೂರದಿಂದ ಊಟ ಆರ್ಡರ್ ಮಾಡುವುದಾಗಿ ಪ್ರಭಾಸ್ ಹೇಳಿದ್ದಾರೆ. ವಿಮಾನದಲ್ಲಿ ಆರ್ಡರ್ ತಂದುಕೊಡುವ ವ್ಯಕ್ತಿ ಕೂಡ ಶಾಕ್ ಆಗಿದ್ದ ಎಂದು ಪ್ರಭಾಸ್ ವಿವರಿಸಿದ್ದಾರೆ.

Prabhas Reveals He Once Ordered Food from Chennai to Mumbai During Adipurush Shoot

ಬಹಳ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ನಟ ಪ್ರಭಾಸ್ ಮಾತನಾಡಿದ್ದಾರೆ. ಈ ವೇಳೆ ತಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. "ನಾನು ನಿಮಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಹೇಳ್ತೀನಿ. ಕೆಲವೊಮ್ಮೆ ನಾನು ಬೇರೆ ರಾಜ್ಯಗಳಿಂದ ಫುಡ್ ಆರ್ಡರ್ ಮಾಡ್ತೀನಿ. ಒಮ್ಮೆ ಮುಂಬೈನಲ್ಲಿ 'ಆದಿಪುರುಷ್' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ, ಚೆನ್ನೈನಿಂದ ನನ್ನಿಷ್ಟ ಊಟ ಆರ್ಡರ್ ಮಾಡಿದ್ದೆ. ಇಡೀ ತಂಡ ಶಾಕ್ ಆಗಿತ್ತು. ವಿಮಾನದಲ್ಲಿ ಆರ್ಡರ್ ತಂದ ವ್ಯಕ್ತಿ ನನ್ನ ಬಳಿಗೆ ಬಂದು, ನೀವು ಸಾಮಾನ್ಯದವನಲ್ಲ, ನಿನ್ನಂತಹವನ್ನು ನಾನು ಎಲ್ಲೂ ನೋಡಿಲ್ಲ ಅಂತ ಹೇಳಿದ್ದಾಗಿ" ಪ್ರಭಾಸ್ ನೆನಪಿಸಿಕೊಂಡಿದ್ದಾರೆ.

ವಿಜಯವಾಡದ ಪುನುಗುಲು(ಎಣ್ಣೆಯಲ್ಲಿ ಕರಿದ ಪಡ್ಡು ಬೋಂಡಾ) ಅಂದರೆ ಬಹಳ ಇಷ್ಟ. ಪ್ರಮೋದ್ ನನ್ನ ಆತ್ಮೀಯ ಸ್ನೇಹಿತ. ಆತನ ಮನೆ ಬಳಿ ಒಂದು ಪಡ್ಡು ಮಾರುವ ಗಾಡಿ ಇರುತ್ತಿತ್ತು. ಬೇಸಿಗೆ ರಜೆಯಲ್ಲಿ ಅವರ ಮನೆಗೆ ಹೋದಾಗ ಅವರಪ್ಪ ನಮ್ಮಿಬ್ಬರನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಪಡ್ಡು ತಿನ್ನಲು ಕರೆದುಕೊಂಡು ಹೋಗುತ್ತಿದ್ದರು. ಆ ಪಡ್ಡು ರುಚಿ ಎಂದರೆ ನನಗೆ ಬಹಳ ಇಷ್ಟ. ಅಂತಹ ಪಡ್ಡು ನನ್ನ ಜೀವನದಲ್ಲಿ ಎಲ್ಲಿಯೂ ತಿಂದಿಲ್ಲ. ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ ಎಂದು ಪ್ರಭಾಸ್ ವಿವರಿಸಿದ್ದಾರೆ.

ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಕೂಡ ಭರ್ಜರಿ ಭೋಜನದ ವ್ಯವಸ್ಥೆ ಮಾಡಿರುವ ಸಾಕಷ್ಟು ಸಂದರ್ಭಗಳಿವೆ. ಇನ್ನುಳಿದಂತೆ ಅನುಷ್ಕಾ ಶೆಟ್ಟಿ, ಶ್ರುತಿ ಹಾಸನ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಪೃಥ್ವಿರಾಜ್ ಸುಕುಮಾರನ್ ಸೇರಿ ಪ್ರಭಾಸ್ ಜೊತೆ ನಟಿಸಿದ ಕೆಲ ನಟ ನಟಿಯರು ಕೂಡ ತೆಲುಗು ನಟನ ಭೋಜನ ಪ್ರೀತಿಯನ್ನು ಕೊಂಡಾಡಿದ್ದಾರೆ. ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಪ್ರಭಾಸ್ ಮನೆಯಲ್ಲಿ ಊಟಕ್ಕೆ ಸಾವಿರಾರು ರೂ. ಖರ್ಚಾಗುತ್ತದೆ. ಪ್ರಭಾಸ್ ತಿಂತಾರೋ ಬಿಡ್ತಾರೋ ಯಾವಾಗಲೂ ಡೈನಿಂಗ್ ಟೇಬಲ್ ತುಂಬಾ ವಿವಿಧ ಭಕ್ಷ್ಯ ಭೋಜನದ ವ್ಯವಸ್ಥೆ ಆಗಬೇಕು.

ಇನ್ನು ತಮ್ಮ ಮನೆಯಲ್ಲಿ ಸಿದ್ಧಪಡಿಸುವ ವಿಶೇಷ ಆಹಾರವನ್ನು ಆಪ್ತರಿಗೆ ಪ್ರಭಾಸ್ ಕಳುಹಿಸಿಕೊಡ್ತಾರೆ. ಸಿನಿಮಾ ಸೆಟ್‌ನಲ್ಲಿ ಕೆಲಸ ಮಾಡುವ ಎಲ್ಲರಿಗೂ ಕೂಡ ಡಾರ್ಲಿಂಗ್ ಹೀಗೆ ವಿಶೇಷವಾಗಿ ಭೋಜನ ವ್ಯವಸ್ಥೆ ಮಾಡಿಸುವುದು ಇದೆ. ಒಟ್ಟಾರೆ ಪ್ರಭಾಸ್ ಆಹಾರ ಪ್ರೀತಿ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ ಎಂದು ಅವರನ್ನು ಬಲ್ಲವರು ಹತ್ತಿರದಿಂದ ಹೇಳುತ್ತಿರುತ್ತಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಪ್ರಭಾಸ್ ಅಬ್ಬರಿಸುತ್ತಿದ್ದಾರೆ.

ಇತ್ತೀಚೆಗೆ ತೆರೆಕಂಡ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಹೀನಾಯವಾಗಿ ಸೋತಿತ್ತು. ಮುಂದೆ 'ಫೌಜಿ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಪ್ರಭಾಸ್ ಸಜ್ಜಾಗಿದ್ದಾರೆ. ಆ ಬಳಿಕ 'ಸ್ಪಿರಿಟ್' ಚಿತ್ರದಲ್ಲಿ ನಟಿಸಲಿದ್ದಾರೆ. ಮುಂದೆ 'ಸಲಾರ್' ಸೇರಿ ಒಂದಷ್ಟು ಸಿನಿಮಾಗಳು ಲೈನಪ್ ಆಗಿವೆ.

More from Filmibeat

Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X