3 ದಿನ ಮೊದ್ಲೆ ವಿದೇಶದಲ್ಲಿ 'ಆದಿಪುರುಷ್' ರಿಲೀಸ್: ಸಿನಿಮಾ ರನ್‌ಟೈಮ್ ಕೇಳಿ ಪ್ರಭಾಸ್ ಫ್ಯಾನ್ಸ್ ಶಾಕ್

ಬಾಹುಬಲಿ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಪ್ರೀಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದೆ. ಜೂನ್ 16ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಆದರೆ ಅದಕ್ಕು ಮುನ್ನ ವಿದೇಶದ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಅಪರೂಪದ ಗೌರವದ ಬಗ್ಗೆ ಚಿತ್ರತಂಡ ಸಂತಹ ಹಂಚಿಕೊಂಡಿದೆ. ಇನ್ನು ಸಿನಿಮಾ ರನ್‌ಟೈಮ್ ಕೂಡ ಲಾಕ್‌ ಆಗಿದೆ.

ಈ ಪೌರಾಣಿಕ ಕಥಾಹಂದರ ತ್ರೀಡಿ ಚಿತ್ರವನ್ನು ಓಂ ರಾವುತ್ ಕಟ್ಟಿಕೊಟ್ಟಿದ್ದಾರೆ. 400 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್ ಭಾರೀ ಟೀಕೆಗೆ ಗುರಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೇ ಕಾರಣಕ್ಕೆ ಚಿತ್ರದ ಗ್ರಾಫಿಕ್ಸ್ ಸೇರಿದಂತೆ ಒಂದಷ್ಟು ಬದಲಾವಣೆ ಮಾಡಲಾಗುತ್ತಿದೆ. ಸಿನಿಮಾ ರೀ ವರ್ಕ್‌ಗಾಗಿ ಚಿತ್ರತಂಡ ಮತ್ತಷ್ಟು ಶ್ರಮವಹಿಸಿದೆ. ಇದೇ ಕಾರಣಕ್ಕೆ ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ತಡವಾಗ್ತಿದೆ.

Prabhass Adipurush Runtime Locked, mythological film All Set To Screen At Tribeca Film Festival

'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಬಣ್ಣ ಹಚ್ಚಿದ್ದಾರೆ. ಸೀತಾಮಾತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿಸಿಂಗ್, ಹನುಮಂತನಾಗಿ ದೇವದತ್‌ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಟೀಸರ್ ರಿಲೀಸ್ ಆದಾಗ ರಾವಣನ ಹಾಗೂ ಹನುಮಂತನ ಲುಕ್‌ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ತಪ್ಪಿನ ಅರಿವಾಗುತ್ತಿದ್ದಂತೆ ಅದನ್ನೆಲ್ಲಾ ಸರಿಪಡಿಸುವುದಾಗಿ ಚಿತ್ರತಂಡ ಹೇಳಿತ್ತು. ಅದಕ್ಕಾಗಿ ಮತ್ತಷ್ಟು ಕಾಲಾವಕಾಶ ಕೇಳಿತ್ತು. ಇದೀಗ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ.

ಮೂಲಗಳ ಪ್ರಕಾರ 'ಆದಿಪುರುಷ್' ಸಿನಿಮಾ ರನ್‌ಟೈಮ್ 174 ನಿಮಿಷ ಅನ್ನಲಾಗ್ತಿದೆ. ಅಂದರೆ ಬರೋಬ್ಬರಿ 2 ಗಂಟೆ 54 ನಿಮಿಷ. ರಾಮಾಯಣ ಕಾವ್ಯವನ್ನು ಸಂಪೂರ್ಣವಾಗಿ ತೆರೆಮೇಲೆ ತರಲು 3 ಗಂಟೆ ಅಲ್ಲ 30 ಗಂಟೆಗಳು ಕೂಡ ಸಾಲದು. ಈಗಾಗಲೇ ಟೀಸರ್ ನೋಡಿ ಸಿನಿಮಾ ಗುಣಮಟ್ಟ ಹೇಗಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಹೆಚ್ಚು ಕಮ್ಮಿ 3 ಗಂಟೆಗಳ ಕಾಲ ಈ ಸಿನಿಮಾವನ್ನು ನೋಡುವುದು ಕಷ್ಟ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೇ ವಿಚಾರ ಈಗ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಮಾಗಳಿಗೂ ಆತಂಕ ತಂದಿದೆ.

2 ಗಂಟೆ 54 ನಿಮಿಷಗಳ ಕಾಲ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಚಿತ್ರದಲ್ಲಿ ರಾಮ- ರಾವಣನ ಯುದ್ಧ ಮಾತ್ರವಲ್ಲ, ವಾಲಿ- ಸುಗ್ರೀವರ ಯುದ್ಧದ ಸನ್ನಿವೇಶವನ್ನು ಕೂಡ ಬಹಳ ರೋಚಕವಾಗಿ ಕಟ್ಟಿಕೊಡಲಾಗಿದೆಯಂತೆ. ಇದಕ್ಕಾಗಿ ಭಾರೀ ಗ್ರಾಫಿಕ್ಸ್ ಕೆಲಸಗಳು ನಡೆದಿದೆ. ಟೀಸರ್ ನೋಡಿದವರು ಗ್ರಾಫಿಕ್ಸ್ ಗುಣಮಟ್ಟ ಚೆನ್ನಾಗಿಲ್ಲ ಎಂದಿದ್ದರು. ಇದೀಗ ಸಂಪೂರ್ಣ ಗ್ರಾಫಿಕ್ಸ್‌ ಬದಲಾಯಿಸಿ ಚಿತ್ರಕ್ಕೆ ಹೊಸ ರೂಪ ಕೊಡಲಾಗುತ್ತಿದೆ. ಹಾಗಾಗಿ ಪ್ರೇಕ್ಷಕರಿಗೆ ಇನ್ನು ಸಿನಿಮಾ ಮೇಲೆ ನಿರೀಕ್ಷೆಯಿದೆ.

Prabhass Adipurush Runtime Locked, mythological film All Set To Screen At Tribeca Film Festival

'ಆದಿಪುರುಷ್' ಸಿನಿಮಾ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗಲಿದೆ. ಆ ಮೂಲಕ ಅಪರೂಪದ ಗೌರವ ಚಿತ್ರಕ್ಕೆ ಸಿಗುತ್ತಿದೆ. ಅಂತರಾಷ್ಟ್ರೀಯಮಟ್ಟದ ದೊಡ್ಡ ಫಿಲ್ಮ್ ಫೆಸ್ಟಿವಲ್ ಇದು. ಜೂನ್ 16ಕ್ಕೆ ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಆದರೆ ಅದಕ್ಕಿಂತ 3 ದಿನ ಮುನ್ನ ಅಂದ್ರೆ ಜೂನ್ 13ರಂದು ಸಿನಿಮಾ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸ್ಕ್ರೀನಿಂಗ್ ಆಗಲಿದೆ. ಈ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್ ಖುಷಿಯಾಗಿದ್ದಾರೆ.

ಬಾಹುಬಲಿ ಸೀರಿಸ್ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. 'ಆದಿಪುರುಷ್' ಚಿತ್ರಕ್ಕಾಗಿ ಯಂಗ್ ರೆಬಲ್ ಸ್ಟಾರ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿರುವುದಾಗಿ ಹೇಳಲಾಗ್ತಿದೆ. 'ಆದಿಪುರುಷ್' ನಂತರ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಿಡುಗಡೆಯಾಗಲಿದೆ. ಸಂಕ್ರಾಂತಿಗೆ 'ಪ್ರಾಜೆಕ್ಟ್ K' ಸಿನಿಮಾ ತೆರೆಗೆ ಬರ್ತಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ನಂತರ ಮಾರುತಿ ನಿರ್ದೇಶನದ 'ರಾಜಾ ಡೀಲಕ್ಸ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

More from Filmibeat

English summary
Prabhas Starrer Adipurush Runtime Locked, mythological film All Set To Screen At Tribeca Film Festival. Aipurush is scheduled for a theatrical release on june 16. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X