For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಂದಲೇ ಪ್ರಭಾಸ್ ಚಿತ್ರಕ್ಕೆ ಬಾಯ್‌ಕಾಟ್ ಬಿಸಿ: ಅಂಥಾದ್ದೇನಾಯ್ತು ?

  |

  ಬಾಯ್‌ಕಾಟ್ ಅನ್ನೋ ಪದ ಕೇಳಿದರೆ ಸಾಕು ಬಾಲಿವುಡ್ ಬೆಚ್ಚಿಬೀಳ್ತಿದೆ. ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗೆ ಇದರ ಬಿಸಿ ತಟ್ಟುತ್ತಿದ್ದು, ಬಾಕ್ಸಾಫೀಸ್ ಕಲೆಕ್ಷನ್‌ಗೂ ದೊಡ್ಡ ಪೆಟ್ಟು ಬೀಳುತ್ತಿದೆ. ಇದೀಗ ಬಾಯ್‌ಕಾಟ್ ಟ್ರೆಂಡ್ ಟಾಲಿವುಡ್‌ಗೂ ತಲುಪಿದಂತೆ ಕಾಣುತ್ತಿದೆ. ಬಾಹುಬಲಿ ಪ್ರಭಾಸ್ ನಟನೆಯ ಮುಂದಿನ ಚಿತ್ರವನ್ನು ಸ್ವತಃ ಅವರ ಅಭಿಮಾನಿಗಳೇ ಬಾಯ್‌ಕಾಟ್ ಮಾಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಸ್ಟಾರ್‌ಗಳು 'ಅಭಿಮಾನಿಗಳೇ ದೇವರು' ಎನ್ನುತ್ತಾರೆ. ಆದರೆ ಬರ್ತಾ ಬರ್ತಾ ಅಭಿಮಾನಿಗಳೇ ಸ್ಟಾರ್‌ಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಂತೆ ಕಾಣುತ್ತಿದೆ. ಇದೀಗ ಪ್ರಭಾಸ್ ವಿಚಾರದಲ್ಲಿ ಇದೇ ಆಗುತ್ತಿದೆ.

  ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಹೊಸ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಮಾರುತಿ ನಿರ್ದೇಶನದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಆದರೆ ಈ ಸಿನಿಮಾ ಬಗ್ಗೆ ಬಹಳ ದಿನಗಳಿಂದ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ನಟಿಸೋದು ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ. 'ನಮ್ಮ ಮಾತು ಕೇಳದೇ ಮಾರುತಿ ನಿರ್ದೇಶನದ ಸಿನಿಮಾದಲ್ಲಿ ನಟಿಸಿದರೆ ಬಾಯ್‌ಕಾಟ್ ಮಾಡ್ತೀವಿ, ನಮ್ಮನ್ನು ಅಪಾರ್ಥ ಮಾಡಿಕೊಳ್ಳಬೇಡ' ಎಂದು ಎಚ್ಚರಿಕೆ ಕೊಡುತ್ತಿದ್ದಾರೆ. ನಿರ್ದೇಶಕ ಮಾರುತಿನ ತೆಲುಗು ಚಿತ್ರರಂಗದಿಂದಲೇ ಬಾಯ್‌ಕಾಟ್ ಮಾಡಬೇಕು ಎನ್ನುತ್ತಿದ್ದಾರೆ.

  ಪ್ರಭಾಸ್ ಮದುವೆ ಮಾಡಿಕೊಂಡರೆ ಸಮಸ್ಯೆ; ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!ಪ್ರಭಾಸ್ ಮದುವೆ ಮಾಡಿಕೊಂಡರೆ ಸಮಸ್ಯೆ; ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!

  ಮಾರುತಿ ನಿರ್ದೇಶನದ ಕೊನೆಯ ಸಿನಿಮಾ 'ಪಕ್ಕಾ ಕಮರ್ಷಿಯಲ್‌' ಫ್ಲಾಫ್ ಆಗಿತ್ತು. ಅದೇ ಕಾರಣಕ್ಕೆ ಪ್ರಭಾಸ್ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅದೇ ಕಾರಣಕ್ಕೆ ಈಗ ಪ್ರಭಾಸ್ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಬಾಯ್‌ಕಾಟ್‌ ಮಾರುತಿ ಹ್ಯಾಷ್ ಟ್ಯಾಗ್‌ (#BoycottMaruthiFromTFI ) ಟ್ರೆಂಡ್‌ ಮಾಡುತ್ತಿದ್ದಾರೆ. ಇದನ್ನು ನೋಡಿ ನಿರ್ದೇಶಕ ಮಾರುತಿ ಶಾಕ್ ಆಗಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನ ಕಟ್ಟಿಕೊಡುವುದರಲ್ಲಿ ನಿರ್ದೇಶಕರು ಸಿದ್ಧಹಸ್ತರು. ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ ಮಾಡುವುದು ಅಂದರೆ ತಮಾಷೆಯ ಮಾತಲ್ಲ. ಅದೇ ಕಾರಣಕ್ಕೆ ಅಭಿಮಾನಿಗಳು ಮಾರುತಿ ನಿರ್ದೇಶನದಲ್ಲಿ ಪ್ರಭಾಸ್ ನಟಿಸೋದು ಬೇಡ ಎನ್ನುತ್ತಿದ್ದಾರೆ.

  ನಾಳೆ (ಆಗಸ್ಟ್ 25) ಚಿತ್ರಕ್ಕೆ ಮುಹೂರ್ತ ನೆರವೇರಿಸಿ, ದಸರಾ ಹಬ್ಬದ ನಂತರ ಶೂಟಿಂಗ್ ನಡೆಸಲು ನಿರ್ಧರಿಸಿಲಾಗಿದೆ. ಈ ಹಿನ್ನಲೆಯಲ್ಲಿ ಪ್ರಭಾಸ್ ಸಿನಿಮಾ ಬಾಯ್‌ಕಾಟ್ ಮಾಡುವುದಾಗಿ ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ. ಪ್ರಭಾಸ್ ಈಗ 200, 300, 500 ಕೋಟಿ ರೂ. ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಾರುತಿ ಸಿನಿಮಾ ಕೇವಲ 20ರಿಂದ 30 ಕೋಟಿ ರೂ. ಅಲ್ಲಿ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಪ್ರಭಾಸ್ ಕರಿಯರ್‌ಗೆ ಹೊಡೆತ ಬೀಳುತ್ತದೆ ಅನ್ನುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಈ ಸಣ್ಣ ಸಣ್ಣ ಬಜೆಟ್ ಸಿನಿಮಾ ಯಾಕೆ ಎಂದು ಕೇಳುತ್ತಿದ್ದಾರೆ.

  ಮಾರುತಿ ಪ್ರಭಾಸ್‌ಗಾಗಿ ಒಂದು ರೊಮ್ಯಾಂಟಿಕ್ ಹಾರರ್‌ ಕಾಮಿಡಿ ಸ್ಟೋರಿ ಸಿದ್ದಪಡಿಸಿದ್ದಾರೆ. ಒಂದೇ ಥಿಯೇಟರ್‌ನಲ್ಲಿ ಬಹುತೇಕ ಕಥೆ ನಡೆಯಲಿದೆ. ಚಿತ್ರಕ್ಕೆ 'ಸೂಪರ್ ಡೀಲಕ್ಸ್' ಅನ್ನುವ ಟೈಟಲ್‌ ಕೂಡ ಫೈನಲ್ ಆಗಿದೆ ಅನ್ನಲಾಗುತ್ತಿದೆ. ಕಥೆ ಕೇಳಿ ಮೆಚ್ಚಿಕೊಂಡಿರುವ ಪ್ರಭಾಸ್ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಮಾಳವಿಕಾ ಮೋಹನ್ ನಾಯಕಿಯಾಗಿ ನಟಿಸುವ ಸಾಧ್ಯತೆಯಿದೆ. ಮತ್ತೊಬ್ಬ ನಾಯಕಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದರೂ ಅಚ್ಚರಿಪಡಬೇಕಿಲ್ಲ. ಇದೆಲ್ಲದರ ನಡುವೆ ಚಿತ್ರಕ್ಕೆ ಬಾಯ್‌ಕಾಟ್ ಬಿಸಿ ಎದುರಾಗಿರುವುದು ವಿಪರ್ಯಾಸ. ಪ್ರಭಾಸ್ ಸದ್ಯ 'ಸಲಾರ್', 'ಆದಿಪುರುಷ್', 'ಪ್ರಾಜೆಕ್ಟ್ K' ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

  English summary
  Prabhas’s fans trend Boycott Maruti on Social Media.
  Thursday, August 25, 2022, 0:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X