For Quick Alerts
  ALLOW NOTIFICATIONS  
  For Daily Alerts

  'ಪ್ರಭಾಸ್ 25' ಸಂದೀಪ್ ರೆಡ್ಡಿ ವಂಗಾ 'ಸ್ಪಿರಿಟ್'

  By ರವೀಂದ್ರ ಕೊಟಕಿ
  |

  ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿ ಮಾಡುತ್ತಿದ್ದ 'ಪ್ರಭಾಸ್ 25' ಚಿತ್ರ ಇಂದು ಅಧಿಕೃತವಾಗಿ ಘೋಷಣೆಯಾಗಿದೆ. ಪ್ರಭಾಸ್ ಈಗಾಗಲೇ "ರಾಧೇಶ್ಯಾಮ್' ಚಿತ್ರವನ್ನು ಪೂರ್ಣಗೊಳಿಸಿದ್ದು ಜನವರಿ 14ರಂದು ಸಂಕ್ರಾಂತಿ ವಿಶೇಷವಾಗಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

  ಇನ್ನೊಂದೆಡೆ 'ಆದಿಪುರುಷ' ಮತ್ತು 'ಸಲಾರ್' ಚಿತ್ರಗಳ ಚಿತ್ರೀಕರಣ ಕೂಡ ಭರದಿಂದ ಸಾಗಿದೆ. ಎರಡು ಚಿತ್ರಗಳು 2022ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅಲ್ಲದೆ ಭಾರತೀಯ ಸಿನೆಮಾ ರಂಗದ ಅತಿ ದೊಡ್ಡ ಬಜೆಟ್ಟಿನ ಚಿತ್ರದಲ್ಲಿ ಕೂಡ ಪ್ರಭಾಸ್ ನಾಯಕನಟನಾಗಿ ನಟಿಸುತ್ತಿದ್ದಾರೆ. ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್‌ ಅಶ್ವಿನ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ದೀಪಿಕಾ ಪಡುಕೋಣೆ ಕೂಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೈನ್ಸ್ ಫಿಕ್ಷನ್ ಸಂಭಾವಿತ ಮೂರನೇ ಮಹಾಯುದ್ಧದ ಸುತ್ತಲೂ ಕಥೆಯನ್ನು ಹೆಣೆಯಲಾಗಿದ್ದು ಭಾರತೀಯ ಭಾಷೆಗಳ ಜೊತೆಗೆ ಹಾಲಿವುಡ್‌ನಲ್ಲಿ ಕೂಡ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

  ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಪ್ರಭಾಸ್ ತಮ್ಮನ್ನು ತೊಡಗಿಸಿಕೊಂಡಿರುವಾಗಲೇ ಪ್ರಭಾಸ್ 25 ನೇ ಚಿತ್ರದ ಘೋಷಣೆಯಾಗಿದೆ. ವಿಶೇಷ ಎಂದರೆ ಈ ಚಿತ್ರವನ್ನು ತೆಲುಗು, ಕನ್ನಡ, ಹಿಂದಿ, ತಮಿಳು ಮಲಯಾಳಂ ಜೊತೆಗೆ ಚೈನೀಸ್, ಕೊರಿಯನ್ ಮತ್ತು ಜಪಾನೀಸ್ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಬಿಡುಗಡೆಯಾಗಲಿದೆ.

  ಪ್ರಭಾಸ್ ಅವರ 25 ನೇ ಚಿತ್ರದ ಅಧಿಕೃತ ಘೋಷಣೆ ಬಂದಿದೆ. ನಿರೀಕ್ಷೆಯಂತೆ, 'ಪ್ರಭಾಸ್ 25'ಅನ್ನು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ 'ಸ್ಪಿರಿಟ್' ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆ. ಟೀ ಸೀರೀಸ್ ಮತ್ತು ವಂಗಾ ಪಿಕ್ಚರ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತೇವೆ. ಚಿತ್ರವು ದೊಡ್ಡ ಆಕ್ಷನ್ ಹಿನ್ನೆಲೆಯನ್ನು ಹೊಂದಿದೆ. ಇದರ ಜೊತೆಯಲ್ಲಿ, ಚಲನಚಿತ್ರವು ವಿಶ್ವದಾದ್ಯಂತ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 8 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  English summary
  Prabhas's new movie name is Spirit. Movie will be directed by Sandeep Reddy Vanda. earlier he directed movie Arjun Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X