ದೇವಕನ್ಯೆಯ ಪುತ್ರನಾಗಲಿರುವ ದೇವಸೇನಾಳ ಪ್ರಿಯ ಬಾಹುಬಲಿ!
ಬಾಹುಬಲಿ ಎಂಬ ಫ್ಯಾಂಟಸಿ ಕತೆ ಗೆದ್ದ ನಂತರ ಪ್ರಭಾಸ್ ಗೆ ಬರೀಯ ಅಂಥಹುದ್ದೇ ಕತೆಗಳ ಆಫರ್‌ಗಳು ಬರಲಾರಂಭಿಸಿದ್ದವು. ಆದರೆ ಅದೆಲ್ಲವನ್ನೂ ಬಿಟ್ಟು ಸಾಹೋ ನಟಿಸಿದರು ಪ್ರಭಾಸ್.
Recommended Video
ಆದರೆ ಈಗ ಮತ್ತೆ ಫ್ಯಾಂಟಸಿ ಕತೆಗಳತ್ತ ಹೊರಳಿರುವ ಪ್ರಭಾಸ್. ಬಾಹುಬಲಿ ಕತೆ ನಡೆದ ಜಮಾನಾಗಿಂತಲೂ ಹಿಂದಿನ ಜಮಾನಾದ ಕತೆಯೊಂದರಲ್ಲಿ ನಾಯಕನಾಗಲಿದ್ದಾರೆ.
ಹೌದು, ಸಿನಿಮಾ ರಂಗ ಉದಯ ಸಮಯದಲ್ಲಿ ಸೂಪರ್ ಹಿಟ್ ಆಗಿದ್ದ ಮಾಯಾಬಜಾರ್ ಸಿನಿಮಾದ ಪಾತ್ರಗಳನ್ನು ಮಾದರಿಯಾಗಿಟ್ಟುಕೊಂಡು ನಿರ್ಮಿಸಲಾಗುತ್ತಿರುವ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ.

ಮಹಾನಟಿ ನಿರ್ದೇಶಿಸಿದ್ದ ನಾಗ ಅಶ್ವಿನ್
ಮಹಾನಟಿ ಸಿನಿಮಾ ನಿರ್ದೇಶಿಸಿ ಯಶಸ್ವಿ ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿರುವ ನಾಗ್ ಅಶ್ವಿನ್ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಚಿತ್ರವು ಫ್ಯಾಂಟಸಿ ಕತೆಯನ್ನು ಹೊಂದಿದ್ದು ಇದರಲ್ಲಿ ಪ್ರಭಾಸ್ ನಾಯಕರಾಗಿ ನಟಿಸಲಿದ್ದಾರೆ.

ದೇವಕನ್ಯೆಯ ಮಗನ ಪಾತ್ರದಲ್ಲಿ ಪ್ರಭಾಸ್
ಪ್ರಭಾಸ್ ದೇವಕನ್ಯೆಯ ಮಗನ ಪಾತ್ರದಲ್ಲಿ ನಟಿಸಲಿದ್ದು, ಈ ಸಿನಿಮಾ ತೆಲುಗಿನ ಸೂಪರ್ ಹಿಟ್ ಚಿತ್ರ 'ಜಗದೇಕ ವೀರುಡು ಅತಿಲೋಕ ಸುಂದರಿ' ಸಿನಿಮಾದ ಮುಂದುವರೆದ ಭಾಗದಂತೆ ಮೂಡಿಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಬಾಲಿವುಡ್‌ನಿಂದ ಹಾರಿಬರಲಿದ್ದಾರೆ ನಾಯಕಿ
ಪ್ರಭಾಸ್ ಗೆ ಎದುರಾಗಿ ಬಾಲಿವುಡ್‌ನ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎನ್ನಲಾಗಿದ್ದು, ಇದಿನ್ನೂ ಅಂತಿಮವಾಗಿಲ್ಲ. ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಹೆಸರೂ ಸಹ ಕೇಳಿಬರುತ್ತಿದೆ.

ಮುಂದಿನ ವರ್ಷ ಸೆಟ್ಟೇರಲಿರುವ ಸಿನಿಮಾ
ಪ್ರಭಾಸ್ ಅವರ ಈ ಫ್ಯಾಂಟಸಿ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ. ಪ್ರಸ್ತುತ ಹೆಸರಿಡದ ಎರಡು ಸಿನಿಮಾಗಳಲ್ಲಿ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ. ಲಾಕ್‌ಡೌನ್ ನಿಂದಾಗಿ ಸಿನಿಮಾ ಚಿತ್ರೀಕರಣ ಬಂದ್ ಆಗಿದ್ದು, ಲಾಕ್‌ಡೌನ್ ಮುಗಿದ ಬಳಿಕ ಸಿನಿಮಾ ಚಿತ್ರೀಕರಣ ಮುಂದುವರೆಯಲಿದೆ.


Click it and Unblock the Notifications











