For Quick Alerts
  ALLOW NOTIFICATIONS  
  For Daily Alerts

  ರಾಧೆ-ಶ್ಯಾಮ್ ಬಿಡುಗಡೆ ದಿನಾಂಕ: ಮತ್ತೊಮ್ಮೆ ಖಾತ್ರಿಪಡಿಸಿದ ಚಿತ್ರತಂಡ

  |

  ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ರಾಧೆ-ಶ್ಯಾಮ್' ಬಗ್ಗೆ ಇತ್ತೀಚೆಗೆ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿವೆ.

  ಯೂರೋಪ್ ದೇಶಗಳಲ್ಲಿ ಬಹತೇಕ ಚಿತ್ರೀಕರಣಗೊಂಡಿರುವ 'ರಾಧೆ-ಶ್ಯಾಮ್' ಈ ವೇಳೆಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಕೆಲವು ದೃಶ್ಯಗಳನ್ನು ಹೈದರಾಬಾದ್‌ನಲ್ಲಿ ಮರು ಚಿತ್ರೀಕರಣ ಮಾಡಲಾಗುತ್ತಿದೆ.

  ಯೂರೋಪ್‌ನಲ್ಲಿ ಚಿತ್ರೀಕರಣಗೊಂಡ ಕೆಲವು ದೃಶ್ಯಗಳು ಪ್ರಭಾಸ್‌ಗೆ ತೃಪ್ತಿತಂದಿಲ್ಲವಾದ್ದರಿಂದ ಹೈದರಾಬಾದ್‌ನಲ್ಲಿ ಸೆಟ್‌ ಹಾಕಿ ಚಿತ್ರವನ್ನು ಮರಳಿ ಚಿತ್ರೀಕರಣ ಮಾಡಲಾಗುತ್ತಿದೆ. ಆದರೆ ಮರು ಚಿತ್ರೀಕರಣಕ್ಕೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವೆ ಡೇಟ್ಸ್ ಹೊಂದಾಣಿಕೆ ಸಮಸ್ಯೆ ಬಂದಿದ್ದು ಸಿನಿಮಾ ಪೂರ್ಣವಾಗಲು ಹೆಚ್ಚು ಸಮಯ ಹಿಡಿಯುತ್ತಿದೆ.

  'ರಾಧೆ-ಶ್ಯಾಮ್' ಸಿನಿಮಾವು ಜನವರಿ 14 ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿತ್ತು, ಆದರೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವೆ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ವೈಮನಸ್ಯ ಉಂಟಾಗಿರುವ ಕಾರಣ ಚಿತ್ರದ ಬಿಡುಗಡೆ ಇನ್ನಷ್ಟು ತಡವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

  ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ 'ರಾಧೆ-ಶ್ಯಾಮ್' ಚಿತ್ರತಂಡ ಈ ಹಿಂದೆ ಘೋಷಿಸಿದ್ದ ದಿನಾಂಕದಂದೆ ಸಿನಿಮಾದ ಬಿಡುಗಡೆ ಆಗಲಿದೆ ಎಂದಿದ್ದಾರೆ. ಅಂದರೆ ಜನವರಿ 14ರಂದೇ ರಾಧೆ-ಶ್ಯಾಮ್ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

  ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವೆ ವೈಮನಸ್ಯ ಉಂಟಾಗಿದೆ ಎನ್ನಲಾದ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿರುವ ಚಿತ್ರತಂಡ, ಅಂಥಹದ್ದೇನೂ ಇಲ್ಲ ನಟ-ನಟಿಯರಿಬ್ಬರೂ ವೃತ್ತಿಪರರಾಗಿದ್ದು ಯಾವುದೇ ಮನಸ್ತಾಪ ಅವರಿಬ್ಬರ ನಡುವೆ ಇಲ್ಲ ಎಂದು ಹೇಳಿದ್ದಾರೆ.

  ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಆಚಾರ್ಯ' ಸಿನಿಮಾವು ಜನವರಿ 12 ರಂದು ಬಿಡುಗಡೆ ಆಗಲಿದ್ದು, ಪ್ರಭಾಸ್ ಹಾಗೂ ಚಿರಂಜೀವಿ ಸಿನಿಮಾಗಳ ನಡುವೆ ಸ್ಪರ್ಧೆ ಏರ್ಪಡಲಿದೆ. 'ಆಚಾರ್ಯ' ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ರಾಮ್ ಚರಣ್ ತೇಜ ಸಹ ನಟಿಸಿದ್ದು, ಕಾಜಲ್ ಅಗರ್ವಾಲ್ ಹಾಗೂ ಪೂಜಾ ಹೆಗ್ಡೆ ನಾಯಕಿಯರಾಗಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾ ಸಹ ಚಿತ್ರೀಕರಣದ ಕೊನೆಯ ಹಂತದಲ್ಲಿದ್ದು, ಅದರ ಬಿಡುಗಡೆ ಇನ್ನಷ್ಟು ತಡವಾಗಲಿದೆ. 'ಸಲಾರ್' ಸಿನಿಮಾವು 'ಕೆಜಿಎಫ್ 2' ಸಿನಿಮಾದ ಬಿಡುಗಡೆ ಬಳಿಕವೇ ಬಿಡುಗಡೆ ಆಗಲಿದೆ. 'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. 'ಸಲಾರ್' ಸಿನಿಮಾಕ್ಕೆ ಕನ್ನಡದ ಹೊಂಬಾಳೆ ಫಿಲಮ್ಸ್ ಬಂಡವಾಳ ತೊಡಗಿಸಿದೆ.

  ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಭಾಸ್ ನಟಿಸಿರುವ ಸಿನಿಮಾಗಳಲ್ಲಿ ಬಹಳ ಭಿನ್ನವಾದ ಸಿನಿಮಾ 'ರಾಧೆ-ಶ್ಯಾಮ್'. ಸಿನಿಮಾದ ಕತೆ ಯೂರೋಪ್ ದೇಶಗಳಲ್ಲಿ ನಡೆಯಲಿದ್ದು, 1960-70ರ ಕತೆಯನ್ನು ಹೊಂದಿದೆ. ಸಿನಿಮಾ ಸಂಪೂರ್ಣ ಪ್ರೇಮಕತೆಯಾಗಿದ್ದು, ಸಿನಿಮಾದಲ್ಲಿ ಒಂದೂ ಫೈಟ್ ದೃಶ್ಯಗಳು ಇಲ್ಲ. ಸಿನಿಮಾದ ಕೆಲವು ಪೋಸ್ಟರ್‌ಗಳು ಹಾಗೂ ಟೀಸರ್ ಬಿಡುಗಡೆ ಆಗಿದ್ದು, ಬಹಳ ಫ್ರೆಶ್ ಆಗಿ ಕಾಣುತ್ತಿದೆ. ಭಾರಿ ದೊಡ್ಡ ಬಜೆಟ್ ಅನ್ನು ಸಿನಿಮಾದ ಮೇಲೆ ಹೂಡಲಾಗಿದೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇವರು ಈ ಮುಂಚೆ ಕೇವಲ ಒಂದು ಸಿನಿಮಾವನ್ನಷ್ಟೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಟಿ ಸೀರೀಸ್‌ನ ಭೂಷಣ್ ಕುಮಾರ್ ಹಾಗೂ ಇನ್ನೂ ಕೆಲವರು ಬಂಡವಾಳ ಹೂಡಿದ್ದಾರೆ.

  ಪ್ರಭಾಸ್ ಸದ್ಯಕ್ಕೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರತದ ಸೂಪರ್ ಸ್ಟಾರ್‌ ನಟರ ಪಟ್ಟಿ ಸೇರಿರುವ ಪ್ರಭಾಸ್‌ ಮೇಲೆ ನೂರಾರು ಕೋಟಿ ಬಂಡವಾಳ ಹೂಡಲು ನಿರ್ಮಾಪಕರು ಸಾಲುಗಟ್ಟಿದ್ದಾರೆ. ಕನ್ನಡದ 'ಕೆಜಿಎಫ್' ಸಿನಿಮಾ ನಿರ್ದೇಶಿಸಿರುವ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದೆ. ಜೊತೆಗೆ ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾ 'ಆದಿಪುರುಷ್'ನಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ರಾಮಾಯಣದ ಕತೆ ಹೊಂದಿರುವ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕೃತಿ ಸೆನನ್ ನಟಿಸುತ್ತಿದ್ದಾರೆ. ಅದಾದ ಬಳಿಕ ದೀಪಿಕಾ ಪಡುಕೋಣೆ ಜೊತೆಗೆ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್, ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ಮುಖ್ಯ ಪಾತ್ರದಲ್ಲಿರಲಿದ್ದಾರೆ.

  English summary
  Prabhas's Radhe Shyam movie will release on January 12. Makers re confirms the date. Prabhas's Salaar movie will be late.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X