ರಾಧೆ-ಶ್ಯಾಮ್ ಸಿನಿಮಾದ ಹೊಸ ಅಪ್‌ಡೇಟ್ ಕೇಳಿ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ!

2021 ಕ್ಕೆ ಬಿಡುಗಡೆ ಆಗಲಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಟಾಪ್ ಹತ್ತರಲ್ಲಿದೆ ಪ್ರಭಾಸ್-ಪೂಜಾ ಹೆಗ್ಡೆ ನಟನೆಯ 'ರಾಧೆ-ಶ್ಯಾಮ್'.

ಇಟಲಿಯಲ್ಲಿ ಚಿತ್ರೀಕರಣ ನಡೆಯುತ್ತಿರುವ ರಾಧೆ-ಶ್ಯಾಮ್ ಸಿನಿಮಾದ ಕೆಲವು ಪೋಸ್ಟರ್‌ಗಳು ಹಾಗೂ ಒಂದು ಟೀಸರ್‌ ಸಹ ಬಿಡುಗಡೆ ಆಗಿದೆ. ಎಲ್ಲವೂ ಸಹ ಇದೊಂದು ಪಕ್ಕಾ ಪ್ರೇಮ ಕತಾ ಸಿನಿಮಾ ಎಂಬುದನ್ನು ಸಾರಿ ಹೇಳುತ್ತಿವೆ.

ಪ್ರಭಾಸ್ ಈ ಹಿಂದೆಯೂ ಪ್ರೇಮಕತೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಎಲ್ಲಾ ಸಿನಿಮಾಗಳಲ್ಲಿಯೂ ಆಕ್ಷನ್ ಕಡ್ಡಾಯವಾಗಿ ಇದ್ದೇ ಇರುತ್ತವೆ. ರೆಬೆಲ್ ಸ್ಟಾರ್ ಎಂದು ಕರೆಸಿಕೊಳ್ಳುವ ಪ್ರಭಾಸ್ ಸಿನಿಮಾಗಳಲ್ಲಿ ಹೊಡಿ-ಬಡಿ ಇಲ್ಲದಿದ್ದರೆ ಹೇಗೆ? ಆದರೆ ಅವರ ಹೊಸ ಸಿನಿಮಾ ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾಗಿದೆ.

ಪೂರ್ಣ ಪ್ರಮಾಣದ ಪ್ರೇಮಕತಾ ಸಿನಿಮಾ 'ರಾಧೆ-ಶ್ಯಾಮ್'?

ಪೂರ್ಣ ಪ್ರಮಾಣದ ಪ್ರೇಮಕತಾ ಸಿನಿಮಾ 'ರಾಧೆ-ಶ್ಯಾಮ್'?

ರಾಧೆ-ಶ್ಯಾಮ್ ಸಿನಿಮಾ ಪೂರ್ಣ ಪ್ರೇಮಕತಾ ಸಿನಿಮಾ ಮಾತ್ರವೇ ಆಗಿರಲಿದೆಯಂತೆ. ಆ ಸಿನಿಮಾದಲ್ಲಿ ಒಂದೂ ಸಹ ಆಕ್ಷನ್ ದೃಶ್ಯ ಇರುವುದಿಲ್ಲ ಎನ್ನಲಾಗುತ್ತಿದೆ. ಒಂದೂ ಸಹ ಫೈಟ್ ಸೀನ್‌ಗಳಿಲ್ಲದೆ ಸ್ವಚ್ಛವಾಗಿ ಪ್ರೇಮಕತೆಯೊಂದರ ಮೇಲೆ ಮಾತ್ರವೇ ಗಮನಹರಿಸಿದ್ದಾರಂತೆ ನಿರ್ದೇಶಕರು.

ಪೋಸ್ಟರ್, ಟೀಸರ್‌ಗಳು ಅದನ್ನೇ ಹೇಳುತ್ತಿವೆ

ಪೋಸ್ಟರ್, ಟೀಸರ್‌ಗಳು ಅದನ್ನೇ ಹೇಳುತ್ತಿವೆ

ಸಿನಿಮಾದ ಪೋಸ್ಟರ್‌, ಟೀಸರ್‌ಗಳು ಸಹ ಇದನ್ನೇ ಹೇಳುತ್ತಿವೆ. ಪ್ರಭಾಸ್ ಸಿನಿಮಾಗಳು, ಟೀಸರ್‌ನಲ್ಲಿ ಅವರ ಆಕ್ಷನ್ ದೃಶ್ಯಗಳನ್ನೇ ಇಡುತ್ತಿದ್ದವು. ಅಭಿಮಾನಿಗಳನ್ನು ಸೆಳೆಯಲು, ಆದರೆ ರಾಧೆ-ಶ್ಯಾಮ್ ಇದಕ್ಕೆ ಭಿನ್ನವಾಗಿದೆ. ಆದರೆ ಪ್ರಭಾಸ್ ಹೊಸ ಸಿನಿಮಾದಲ್ಲಿ ಆಕ್ಷನ್ ಇರುವುದಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಪ್ರಭಾಸ್ ನಟನೆಯ ಎಲ್ಲಾ ಸಿನಿಮಾದಲ್ಲಿ ಫೈಟ್ ದೃಶ್ಯಗಳಿವೆ

ಪ್ರಭಾಸ್ ನಟನೆಯ ಎಲ್ಲಾ ಸಿನಿಮಾದಲ್ಲಿ ಫೈಟ್ ದೃಶ್ಯಗಳಿವೆ

ಪ್ರಭಾಸ್ ಈ ವರೆಗೆ ನಟಿಸಿರುವ ಎಲ್ಲಾ ಸಿನಿಮಾಗಳಲ್ಲಿಯೂ ಸಹ ಆಕ್ಷನ್‌ ದೃಶ್ಯಗಳೇ ಪ್ರಧಾನ. ಮೊದಲ ಸಿನಿಮಾ ಈಶ್ವರ್‌ನಿಂದಲೂ ಸಹ ಪ್ರಭಾಸ್ ಆಕ್ಷನ್ ಹೀರೋ ಆಗಿಯೇ ಗುರುತಿಸಿಕೊಂಡು ಬಂದಿದ್ದಾರೆ. ಅವರ 'ಚಕ್ರಂ', 'ಪೌರ್ಣಮಿ' ಸಿನಿಮಾದಲ್ಲಿಯೂ ಸಹ ಹೊಡಿ-ಬಡಿ ದೃಶ್ಯಗಳಿದ್ದವು.

Recommended Video

ಆತ್ಮೀಯ ಗೆಳೆಯನಿಗೆ ವಿಶ್ ಮಾಡಿದ D Boss | Filmibeat Kannada
ಮಹೇಶ್ ಬಾಬು-ವೆಂಕಟೇಶ್ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಿರಲಿಲ್ಲ

ಮಹೇಶ್ ಬಾಬು-ವೆಂಕಟೇಶ್ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಿರಲಿಲ್ಲ

ಕೆಲ ವರ್ಷಗಳ ಹಿಂದೆ ಮಹೇಶ್ ಬಾಬು, ವೆಂಕಟೇಶ್ ಒಟ್ಟಿಗೆ ನಟಿಸಿದ್ದ 'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚಟ್ಟು' ಸಿನಿಮಾದಲ್ಲಿ ಇಬ್ಬರು ಆಕ್ಷನ್ ಹೀರೋಗಳಿದ್ದರೂ ಒಂದೂ ಸಹ ಆಕ್ಷನ್ ದೃಶ್ಯಗಳಿರಲಿಲ್ಲ, ಆದರೆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಪ್ರಭಾಸ್ ರ ರಾಧೆ-ಶ್ಯಾಮ್ ಸಹ ಇದೇ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾ ಎನ್ನಲಾಗುತ್ತಿದೆ.

More from Filmibeat

English summary
Some sources saying that Prabhas's next movie Radhe Shyam will not have single action scene. It will be complete love story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X