For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ 'ಸಲಾರ್' ಮುಹೂರ್ತ: ಅತಿಥಿಗಳು ಯಾರು?

  |

  ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಸಿನಿಮಾ ಸೆಟ್ಟೇರುತ್ತಿದೆ. ಸಿನಿಮಾ ಮುಹೂರ್ತವು ನಾಳೆ (ಜನವರಿ 15) ರಂದು ನಡೆಯಲಿದ್ದು, ಸಿನಿಮಾ ಚಿತ್ರೀಕರಣ ಶೀಘ್ರವಾಗಿ ಪ್ರಾರಂಭವಾಗಲಿದೆ.

  ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಸಲಾರ್ ಮುಹೂರ್ಥ | Filmibeat Kannada

  ಜನವರಿ 15 ರಂದು ಹೈದರಾಬಾದ್‌ನಲ್ಲಿ ಸಿನಿಮಾದ ಮುಹೂರ್ತ ಭಾರಿ ಅದ್ಧೂರಿಯಾಗಿಯೇ ನಡೆಯಲಿದ್ದು, ಮುಹೂರ್ತ ಕಾರ್ಯಕ್ರಮದಲ್ಲಿ ಅತಿಥಿಗಳ ದಂಡೇ ಇರಲಿದೆ.

  ಕೆಜಿಎಫ್ ಮುಗಿಸಿ ಹೈದರಾಬಾದ್‌ಗೆ ಬಂದಿಳಿದ ಪ್ರಶಾಂತ್ ನೀಲ್

  ನಟ ಯಶ್, ಕರ್ನಾಟಕ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್, ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ಮುಹೂರ್ತ ಸಮಾರಂಭದಲ್ಲಿ ಹಾಜರಿರಲಿದ್ದಾರೆ.

  ಭಿನ್ನ ಲುಕ್‌ನಲ್ಲಿ ನಟ ಪ್ರಭಾಸ್

  ಭಿನ್ನ ಲುಕ್‌ನಲ್ಲಿ ನಟ ಪ್ರಭಾಸ್

  ಸಲಾರ್ ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಭಾಸ್, 'ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಬಹಳ ಉತ್ಸುಕನಾಗಿದ್ದೇನೆ. ಸಿನಿಮಾದಲ್ಲಿ ಭಿನ್ನ ಲುಕ್‌ನಲ್ಲಿ ನಾನು ಕಾಣಿಸಿಕೊಳ್ಳಲಿದ್ದು, ಅದನ್ನು ಅಭಿಮಾನಿಗಳಿಗೆ ತೋರಿಸಲು ಕಾತರದಿಂದಿದ್ದೇನೆ' ಎಂದಿದ್ದಾರೆ.

  ಹಲವು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ

  ಹಲವು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಮೊದಲ ತೆಲುಗು ಸಿನಿಮಾ 'ಸಲಾರ್'. ಈ ಸಿನಿಮಾವು ಹಲವು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ವಿಜಯ್ ಕಿರಗಂದೂರ್ ನಿರ್ಮಿಸಲಿದ್ದಾರೆ.

  ಪ್ರಭಾಸ್ ಮತ್ತು ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ವಿಲನ್ ಆಗ್ತಾರಾ ಈ ಸ್ಟಾರ್ ನಟ?

  ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಆರಂಭ

  ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಆರಂಭ

  'ಸಲಾರ್' ಸಿನಿಮಾದ ಚಿತ್ರೀಕರಣ ಈ ತಿಂಗಳ ಅಂತ್ಯಕ್ಕೆ ಪ್ರಾರಂಭವಾಗಲಿದ್ದು, ಸಿನಿಮಾದಲ್ಲಿ ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಾಯಕಿ ಸ್ಥಾನಕ್ಕೆ ಕಿಯಾರಾ ಅಡ್ವಾಣಿ ಆಯ್ಕೆ ಆಗುವ ಸಂಭವ ಇದೆ.

  'ರಾಧೆ-ಶ್ಯಾಂ' ಚಿತ್ರೀಕರಣ ಮುಗಿಸಿರುವ ಪ್ರಭಾಸ್

  'ರಾಧೆ-ಶ್ಯಾಂ' ಚಿತ್ರೀಕರಣ ಮುಗಿಸಿರುವ ಪ್ರಭಾಸ್

  'ರಾಧೆ-ಶ್ಯಾಂ' ಸಿನಿಮಾದ ಚಿತ್ರೀಕರಣವನ್ನು ಪ್ರಭಾಸ್ ಈಗಷ್ಟೆ ಮುಗಿಸಿದ್ದಾರೆ. 'ಆದಿಪುರುಷ್' ಹಾಗೂ ಸಲಾರ್ ಸಿನಿಮಾಗಳಲ್ಲಿ ಒಟ್ಟಿಗೆ ಪ್ರಭಾಸ್ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಇವುಗಳು ಮುಗಿದ ಬಳಿಕ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಪ್ರಭಾಸ್.

  English summary
  Prabhas's Salaar movie muhurtham on January 15 in Hyderabad. Yash, Rajamouli and many celebrities will be present in the event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X