ಧಾರಾವಾಡದಲ್ಲಿ ಓದಿದ್ದ ವಂಗಾ 'ಸ್ಪಿರಿಟ್' ಚಿತ್ರಕ್ಕಾಗಿ ಪ್ರಭಾಸ್ ಅವರಿಂದ ಕನ್ನಡದಲ್ಲಿ ಡಬ್ ಮಾಡಿಸಿದ್ರಾ?

ಡಾರ್ಲಿಂಗ್ ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ಚಿತ್ರಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ.

ನಿನ್ನೆ(ಸೆಪ್ಟೆಂಬರ್ 23) ನಟ ಪ್ರಭಾಸ್ 46ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ 'ಸ್ಪಿರಿಟ್' ಚಿತ್ರದ ಆಡಿಯೋ ಟೀಸರ್ ರಿಲೀಸ್ ಆಗಿದೆ. ಪ್ರಕಾಶ್ ರಾಜ್ ಹಾಗೂ ಪ್ರಭಾಸ್ ವಾಯ್ಸ್ ಮಾತ್ರ ಇದರಲ್ಲಿ ಕೇಳಿಸುತ್ತದೆ. ಹಂಟಿಂಗ್ ಬಿಜಿಎಂ ಜೊತೆಗೆ ಪವರ್‌ಫುಲ್ ಡೈಲಾಗ್ಸ್ ಕೇಳಿಸಿ ಸಂದೀಪ್ ಕುತೂಹಲ ಮೂಡಿಸಿದ್ದಾರೆ. ಆಡಿಯೋ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದ್ದು ಎಲ್ಲಾ ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗಿದೆ.

Prabhas s Spirit Audio Teaser Creates Buzz Fans Wonder if Kannada Voice Was Dubbed Using AI

'ಸ್ಪಿರಿಟ್' ಚಿತ್ರ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗ್ತಿದೆ. ಅಂದಹಾಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ ಕರ್ನಾಟಕದ ನಂಟು ಇದೆ. ಧಾರವಾಡದ SDM ಕಾಲೇಜಿನಲ್ಲಿ ಅವರು ಓದಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ಸಿಡ್ನಿ ಇಂಟರ್‌ನ್ಯಾಷನಲ್ ಫಿಲ್ಮ್ ಸ್ಕೂಲ್‌ನಲ್ಲಿ ಮೇಕಿಂಗ್ ಬಗ್ಗೆ ತರಬೇತಿ ಪಡೆದು ಬಂದಿದ್ದರು. ಸಂದೀಪ್ ನಿರ್ದೇಶನದ 4ನೇ ಸಿನಿಮಾ 'ಸ್ಪಿರಿಟ್'. ಅಂದಹಾಗೆ ಟೀ-ಸೀರಿಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಲಿದೆ.

'ಸ್ಪಿರಿಟ್' ಚಿತ್ರದಲ್ಲಿ ತ್ರಿಪ್ತಿ ಡಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟಿ ಕಾಂಚನಾ, ಬಹುಭಾಷಾ ನಟ ಪ್ರಕಾಶ್ ರಾಜ್ ಹಾಗೂ ವಿವೇಕ್ ಒಬೆರಾಯ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಐಪಿಎಸ್ ಆಫೀಸರ್(ಪ್ರಭಾಸ್) ಆಗಿದ್ದರೂ ಪ್ರಕರಣವೊಂದರಲ್ಲಿ ಪೊಲೀಸ್ ಕಸ್ಟಡಿಗೆ ಒಳಪಡಬೇಕಾಗುತ್ತದೆ. ರಿಮ್ಯಾಂಡ್‌ ಅವಧಿಯಲ್ಲಿ ಆತನನ್ನು ಠಾಣೆಗೆ ಕರೆದುಕೊಂಡು ಬಂದಾಗ ಪೊಲೀಸ್ ವರಿಷ್ಠಾಧಿಕಾರಿ (ಪ್ರಕಾಶ್ ರಾಜ್) ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಟೀಸರ್‌ನಲ್ಲಿ ಕಟ್ಟಿಕೊಡಲಾಗಿದೆ. ಇನ್ನು ಚಿತ್ರದ ಚಿತ್ರೀಕರಣ ಶುರುವಾಗಿಲ್ಲ. ಹಾಗಾಗಿ ಬರೀ ವಾಯ್ಸ್ ಟೀಸರ್ ಬಿಟ್ಟಿದ್ದಾರೆ.

5 ಭಾಷೆಗಳಲ್ಲಿ ಪ್ರಕಾಶ್ ರಾಜ್ ಡಬ್ ಮಾಡಿರುವಂತೆ ಕಾಣ್ತಿದೆ. ಪ್ರಭಾಸ್ ಜೊತೆ ಖಡಕ್ಕಾಗಿ ಪ್ರಕಾಶ್ ರಾಜ್ ವರ್ತಿಸುವ ಸನ್ನಿವೇಶ ಇದು. ಕೊನೆಯಲ್ಲಿ ಪ್ರಭಾಸ್ "ನನಗೆ ಚಿಕ್ಕವಯಸ್ಸಿಂದ ಒಂದು ಕೆಟ್ಟ ಅಭ್ಯಾಸ ಇದೆ" ಎಂದು ಡೈಲಾಗ್ ಹೇಳಿದ್ದಾರೆ. ಕನ್ನಡದಲ್ಲಿ ಕೂಡ ಪ್ರಭಾಸ್ ಡಬ್ ಮಾಡಿದ್ರಾ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

ಇತ್ತೀಚೆಗೆ ಸಿನಿಮಾ ಡಬ್ಬಿಂಗ್ ಮಾಡಲು AI ತಂತ್ರಜ್ಞಾನ ಬಳಸಿಕೊಳ್ಳಲಾಗ್ತಿದೆ. ಈ ಹಿಂದೆ 'ಮಿರಾಯ್' ಚಿತ್ರದಲ್ಲಿ ಕೂಡ AI ಮೂಲಕ ಪ್ರಭಾಸ್ ವಾಯ್ಸ್ ಬಳಸಿಕೊಳ್ಳಲಾಗಿತ್ತು. ಅದೇ ರೀತಿ ಈಗ 'ಸ್ಪಿರಿಟ್' ಚಿತ್ರದ ಟೀಸರ್‌ನಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಪ್ರಭಾಸ್ ವಾಯ್ಸ್ ಕ್ರಿಯೇಟ್ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಹಿಂದೆ 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ವಾಯ್ಸ್ ಅನ್ನು ಕೂಡ AI ತಂತ್ರಜ್ಞಾನದಿಂದ ಬಳಸಿಕೊಳ್ಳಲಾಗಿತ್ತು. ಆರಂಭದಲ್ಲಿ ಅಪ್ಪು ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದರು. ಬಳಿಕ ಬದಲಿಸಲಾಗಿತ್ತು.

ಸದ್ಯ 'ದಿ ರಾಜಾ ಸಾಬ್' ಹಾಗೂ 'ಫೌಜಿ' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಮುಂದಿನ ತಿಂಗಳು 'ಸ್ಪಿರಿಟ್' ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಮುಂದೆ 'ಸಲಾರ್- 2' ಚಿತ್ರದಲ್ಲಿ ಕೂಡ ಪ್ರಭಾಸ್ ನಟಿಸಬೇಕಿದೆ. ಹೊಂಬಾಳೆ ಫಿಲ್ಮ್ಸ್ ಜೊತೆ ಮತ್ತೆರಡು ಚಿತ್ರಗಳನ್ನು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ.

More from Filmibeat

Read more about: prabhas prakash raj tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X