ಸಲಾರ್- ಶೌರ್ಯಾಂಗ ಪರ್ವ: ಮೊದಲ ಭಾಗದಲ್ಲಿ ಡೈನೋಸಾರ್ ಬರಲೇಯಿಲ್ಲ! ಪಿಕ್ಚರ್ ಅಭಿ ಬಾಕಿ ಹೈ
ಪ್ರಶಾಂತ್ ನೀಲ್ 'ಸಲಾರ್' ಕಥೆ ಹೇಳಿ ಒಂದು ಹಂತಕ್ಕೆ ಗೆದ್ದಿದ್ದಾರೆ. ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿ 2ನೇ ಭಾಗ ಕುತೂಹಲ ಹುಟ್ಟುವಂತೆ ಮಾಡಿದ್ದಾರೆ. ಒಂದು ಮಟ್ಟಿಗೆ ಸಿನಿಮಾ ನಿರೀಕ್ಷೆಯನ್ನು ತಲುಪಿದೆ. ಪ್ರಭಾಸ್ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ಮಾಸ್ ಪ್ರೇಕ್ಷಕರು ಕೂಡ ಪ್ರಭಾಸ್ ಆರ್ಭಟಕ್ಕೆ ಫಿದಾ ಆಗಿದ್ದಾರೆ.
ಈಗಾಗಲೇ 'ಉಗ್ರಂ' ಸಿನಿಮಾ ನೋಡಿದವರಿಗೆ 'ಸಲಾರ್' ಅಷ್ಟಾಗಿ ಇಷ್ಟವಾಗುತ್ತಿಲ್ಲ. ಆದರೂ ಒಮ್ಮೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇನ್ನು 'ಸಲಾರ್: ಭಾಗ-1 ಸೀಸ್‌ಫೈರ್' ನೋಡಿದವರಿಗೆ ಒಂದು ಸಂಪೂರ್ಣ ಸಿನಿಮಾ ವೀಕ್ಷಿಸಿದ ಅನುಭವ ಸಿಕ್ಕಿಲ್ಲ. ಶೌರ್ಯಾಂಗ ಪರ್ವ ನೋಡಿದ ಮೇಲೆ 'ಸಲಾರ್' ಅಸಲಿ ಕಥೆ ಗೊತ್ತಾಗುತ್ತಿದೆ.

'ಉಗ್ರಂ' ಸ್ಟೋರಿಲೈನ್ ಇಟ್ಟುಕೊಂಡು ಬಹಳ ದೊಡ್ಡದಾಗಿ 'ಸಲಾರ್' ಕಥೆಯನ್ನು ಪ್ರಶಾಂತ್ ನೀಲ್ ಹೇಳಿದ್ದಾರೆ. ಆದರೆ ಸೆಕೆಂಡ್ ಆಫ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಿ ಮುಂದಿನ ಭಾಗಕ್ಕೆ ಕಥೆಯನ್ನು ಮುಂದುವರೆಸಿದ್ದಾರೆ. ಹಾಗಾಗಿ 2ನೇ ಭಾಗ ಮತ್ತಷ್ಟು ನಿರೀಕ್ಷೆ ಹುಟ್ಟಾಕ್ಕಿದೆ. ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ. ಎನ್‌ಟಿಆರ್ ಚಿತ್ರವನ್ನು ನೀಲ್ ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದ ಮೇಲೆ ಶೌರ್ಯಾಂಗ ಪರ್ವ ಸೆಟ್ಟೇರಲಿದೆ.
ಸದ್ಯ 'ಸಲಾರ್' ನಿಜವಾದ ಕಥೆಗೆ ಮೊದಲ ಭಾಗದಲ್ಲಿ ಪೀಠಿಕೆಯನ್ನು ಮಾತ್ರ ನೀಲ್ ಹಾಕಿಕೊಂಡಿದ್ದಾರೆ. ಶೌರ್ಯಾಂಗ ಬುಡಕಟ್ಟಿನ ಕಥೆಯನ್ನು 2ನೇ ಭಾಗದಲ್ಲಿ ಬಹಳ ರೋಚಕವಾಗಿ ಹೇಳುವ ಸುಳಿವು ಸಿಗುತ್ತಿದೆ. 'ಸಲಾರ್- 2' ಕಥೆ ಹೇಗಿರುತ್ತದೆ? ಖಾನ್ಸರ್ ಪ್ರಪಂಚದಲ್ಲಿ ನೀಲ್ ಇನ್ನು ಏನೆಲ್ಲಾ ತೋರಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಮೊದಲ ಭಾಗದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಉಳಿಸಿದ್ದಾರೆ. ಆತ್ಮೀಯ ಸ್ನೇಹಿರಾಗಿದ್ದ ವರದ- ದೇವ ಆಜನ್ಮ ಶತ್ರುಗಳಾಗಿದ್ದು ಯಾಕೆ?(ಉಗ್ರಂ ಚಿತ್ರದಲ್ಲಿ ಬಾಲ ಸಹೋದರನನ್ನು ಕೊಂದಿದ್ದಕ್ಕೆ ಆತ ದೇವ ಮೇಲೆ ಕೋಪಗೊಳ್ಳುತ್ತಾನೆ) ಆ ಕಥೆಯನ್ನು ಸೀಕ್ವೆಲ್‌ನಲ್ಲಿ ಹೇಳಲಿದ್ದಾರೆ.
ಇನ್ನು ನಿಯಮದ ಪ್ರಕಾರ ರಾಜಮನ್ನಾರ್ ತಂದೆ ಶಿವ ಮನ್ನಾರ್ 40 ವರ್ಷ ಆಳ್ವಿಕೆಯ ನಂತರ ಅಧಿಕಾರವನ್ನು ಶೌರ್ಯಾಂಗ ಬುಡಕಟ್ಟಿಗೆ ನೀಡಬೇಕಿತ್ತು. ಆದರೆ ರಾಜಮನ್ನಾರ್ ಅದನ್ನು ಕೊಡದೇ ಕಿತ್ತುಕೊಂಡಿದ್ದಾನೆ. ಆ ಸಮಯದಲ್ಲಿ ಏನೆಲ್ಲಾ ನಡೀತು. ಶೌರ್ಯಾಂಗ ಬುಡಕಟ್ಟಿನಲ್ಲಿ ಅಳಿದುಳಿದವರು ಮುಂದೆ ಎಲ್ಲಿ ಹೋದರು? ಏನಾದರು? ಅವರ ನಾಯಕ ಯಾರು? ಪ್ಲಾಸ್ಟಿಕ್ ಕತ್ತಿ ಹಿಡಿದುಕೊಂಡರೂ ದೇವ ತಾಯಿ ಆತಂಕಗೊಳ್ಳುವುದ ಯಾಕೆ? ಅನ್ನುವ ಪ್ರಶ್ನೆಯೂ ಮೂಡುತ್ತದೆ.
'ಉಗ್ರಂ' ಕಥೆಯನ್ನು ಅಲ್ಲಲ್ಲಿ ಕೊಂಚ ಬದಲಿಸಿಕೊಂಡಿದ್ದಾರೆ. ನಾಯಕಿಯ ವಿಚಾರದಲ್ಲೂ ಅದನ್ನು ಗಮನಿಸಬಹುದು. ನಾಯಕಿ ಆದ್ಯಾ ಇಲ್ಲಿ ದೇವಗೆ ಇನ್ನು ಹತ್ತಿರವಾಗಿಲ್ಲ. ಇನ್ನು ಖಾನ್ಸರ್ ಕಥೆಯಲ್ಲಿ ಶೌರ್ಯಾಂಗರ ನಾಯಕ ಧಾರಾಗೆ ಸಿಗಬೇಕಾದ ಅಧಿಕಾರವನ್ನು ರಾಜ ಮನ್ನಾರ್ ಕಿತ್ತುಕೊಂಡಿದ್ದಾಗಿ ಹೇಳಿದ್ದಾರೆ. ಹಾಗಾದರೆ ಆ ಧಾರಾ ಯಾರು? ಆತನ ಮಗನೇ ದೇವನಾ? ಧಾರಾ ಕಥೆ ಏನಾಯ್ತು? ದೇವ ಖಾನ್ಸಾರ್ ಬಿಟ್ಟು ಹೋಗಿದ್ಯಾಕೆ? ಆತ ಅಜ್ಞಾತವಾಸದಲ್ಲಿರುವುದಕ್ಕೆ ಕಾರಣ ಏನು? ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
'ಸಲಾರ್' ಚಿತ್ರತಂಡ ಬಿಟ್ಟ ಮೊದಲ ಪೋಸ್ಟರ್‌ನಲ್ಲಿ ಪ್ರಭಾಸ್ ಗಿರಿಜಾ ಮೀಸೆ ಬಿಟ್ಟು ದೊಡ್ಡ ಗನ್ ಹಿಡಿದು ಕುಳಿತಿದ್ದ ಲುಕ್ ರಿವೀಲ್ ಆಗಿತ್ತು. ಆದರೆ 'ಸಲಾರ್' ಮೊದಲ ಭಾಗದಲ್ಲಿ ಅದನ್ನು ತೋರಿಸಿಲ್ಲ. ಪ್ರಭಾಸ್ ಡಬಲ್ ರೋಲ್ ಪ್ಲೇ ಮಾಡಿದ್ದಾರಾ? ತಂದೆ, ಮಗನಾಗಿ ನಟಿಸಿದ್ದಾರಾ. ಆತನೇ ಧಾರಾನ? ಎನ್ನುವ ಆನುಮಾನ ಕೆಲವರದ್ದು. 'ಸಲಾರ್' ಪೋಸ್ಟರ್‌ಗಳಲಿ ಪ್ರಭಾಸ್ ಬೇರೆ ಬೇರೆ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮೊದಲ ಭಾಗದಲ್ಲಿ ಯಂಗ್ ಲುಕ್‌ನಲ್ಲೇ ಮಿಂಚಿದ್ದಾರೆ.
ಈ ಹಿಂದೆ ಕೂಡ ಪ್ರಭಾಸ್ ಚಿತ್ರದಲ್ಲಿ ಡಬಲ್ ರೋಲ್ ಪ್ಲೇ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಸೀಕ್ವೆಲ್‌ನಲ್ಲಿ ಇದಕ್ಕೆ ಉತ್ತರ ಸಿಗುವ ಸಾಧ್ಯತೆಯಿದೆ. ಇನ್ನು 'ಸಲಾರ್' ಟೀಸರ್‌ನಲ್ಲಿದ್ದ ಸನ್ನಿವೇಶ ಕೂಡ ಚಿತ್ರದಲ್ಲಿ ಇರಲಿಲ್ಲ. ಬಾಬಾ ಪಾತ್ರಧಾರಿ ಟಿನ್ನು ಆನಂದ್ ಸಿಂಪಲ್ ಇಂಗ್ಲೀಷ್ ಡೈಲಾಗ್ ಸೀಕ್ವೆಲ್‌ನಲ್ಲಿ ಇರಲಿದೆ. ಅಂದರೆ ಡೈನೋಸಾರ್ ಎಂಟ್ರಿ ಇನ್ನು ಆಗಿಲ್ಲ. ಆ ಡೈನೋಸಾರ್ ದೇವನಾ? ಧಾರಾನಾ? ಎನ್ನುವ ಕುತೂಹಲ ಕೆಲವರದ್ದು.

ದೇವ ತಮ್ಮ ತಂದೆಗಾದ ಮೋಸಕ್ಕೆ ಸೀಕ್ವೆಲ್‌ನಲ್ಲಿ ಸೇಡು ತೀರಿಸಿಕೊಳ್ಳುವ ಸಾಧ್ಯತೆಯಿದೆ. ಅದೇ ನಿಯಮದ ಪ್ರಕಾರ ತಮ್ಮ ಬುಡಕಟ್ಟಿಗೆ ಸಿಗಬೇಕಾದ ಅಧಿಕಾರವನ್ನು ಮರಳಿ ಪಡೆಯಲು ಹೋರಾಟ ಮಾಡುವುದೇ ಚಿತ್ರದ ಕ್ಲೈಮ್ಯಾಕ್ಸ್ ಎನ್ನುವ ಚರ್ಚೆ ನಡೀತಿದೆ. ಒಟ್ನಲ್ಲಿ ಸಲಾರ್ ಶೌರ್ಯಾಂಗ ಪರ್ವ ಪ್ರಭಾಸ್ ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಆಗುವುದರಲ್ಲಿ ಸಂಶಯವಿಲ್ಲ.


Click it and Unblock the Notifications











