ಇಂಗ್ಲೀಷ್ ಅಲ್ಲ... ಈ ಅಂತಾರಾಷ್ಟ್ರೀಯ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಪ್ರಭಾಸ್ ನಟನೆಯ 'ಸಲಾರ್'
ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್: ಭಾಗ 1 - ಕದನ ವಿರಾಮ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ತನ್ನ ಯಶಸ್ಸು ಆಚರಿಸುತ್ತಿದೆ. ಸಲಾರ್ ಚಿತ್ರವು 2023 ರಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ಬಿಡುಗಡೆಯಾಗು ಮೂರನೇ ವಾರಕ್ಕೆ ಸಲಾರ್ ಸಿನಿಮಾ 700 ಕೋಟಿ ಕ್ಲಬ್ ಸೇರಿಕೊಂಡಿದೆ.
ಪ್ರಭಾಸ್ ಮತ್ತು ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಅವರನ್ನು ನಿರ್ದೇಶಕ ಪ್ರಶಾಂತ್ ನೀಲ್ ಅಚ್ಚುಕಟ್ಟಾಗಿ ಬಳಸಿಕೊಂಡಿದ್ದು, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಡಿಸೆಂಬರ್ 22 ರಂದು ಬಿಡುಗಡೆಯಾದ ಸಲಾರ್ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. ಇದರ ಜೊತೆಗೆ ಈ ಸಿನಿಮಾ ಅಂತರಾಷ್ಟ್ರೀಯ ಭಾಷೆಯೊಂದರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ 'ಸಲಾರ್'
ಸಲಾರ್ ಸಿನಿಮಾದ ಮೊದಲ ಭಾಗಕ್ಕೆ ವಿಶ್ವದಾದ್ಯಂತ ಪ್ರೀತಿ ವ್ಯಕ್ತವಾಗುತ್ತಿದೆ. ಇದನ್ನು ಎನ್‌ಕ್ಯಾಚ್ ಮಾಡಿಕೊಳ್ಳುವ ತವಕದಲ್ಲಿರುವ ಚಿತ್ರತಂಡ ಮತ್ತೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಅಂತಾರಾಷ್ಟ್ರೀಯ ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆ ಮಾಡಲಿದೆ.
ಲ್ಯಾಟಿನ್ ಅಮೇರಿಕಾದಲ್ಲಿ ಸಲಾರ್ ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ. ಇದೇ ವರ್ಷದ ಮಾರ್ಚ್ 7, 2024 ರಂದು ಸ್ಪ್ಯಾನಿಷ್ ಭಾಷೆಯಲ್ಲಿ 'ಸಲಾರ್: ಭಾಗ 1 - ಕದನ ವಿರಾಮ' ಬಿಡುಗಡೆಯಾಗಲಿದೆ. ಸ್ಪ್ಯಾನಿಷ್ ಆವೃತ್ತಿಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.
"'ಸಲಾರ್: ಭಾಗ 1 - ಕದನ ವಿರಾಮ' ಲ್ಯಾಟಿನ್ ಅಮೆರಿಕಾದಲ್ಲಿ ಮಾರ್ಚ್ 7, 2024 ರಂದು ಸ್ಪ್ಯಾನಿಷ್ ಭಾಷೆಯಲ್ಲಿ ಸಿನಿಪೋಲೀಸ್ ಬಿಡುಗಡೆ ಮಾಡಲಿದೆ. ಮಹಾಕಾವ್ಯ ನೋಡಲು ಸಿದ್ಧರಾಗಿ! ಸಲಾರ್: ಭಾಗ 1 - ಕದನ ವಿರಾಮ ಲ್ಯಾಟಿನ್ ಅಮೇರಿಕಾದಲ್ಲಿ 7ನೇ ಮಾರ್ಚ್ 2024 ರಂದು ಬಿಡುಗಡೆಯಾಗುತ್ತಿದೆ" ಎಂದು ಸ್ಪ್ಯಾನಿಷ್ ಭಾಷೆಯಲ್ಲಿ ಟ್ವೀಟ್ ಮಾಡಲಾಗಿದೆ.
ಸಲಾರ್
ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಜೊತೆಗೆ, ಚಿತ್ರದಲ್ಲಿ ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಬಾಬಿ ಸಿಂಹ, ಜಗಪತಿ ಬಾಬು, ದೇವರಾಜ್, ಪ್ರಮೋದ್, ನವೀನ್ ಶಂಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಇನ್ನು, ಫಿಲ್ಮ ಟ್ರೆಂಡ್ ಅನಲಿಸ್ಟ್ ಮನೋಬಾಲಾ ವಿಜಯಬಾಲನ್ ಶುಕ್ರವಾರ ಮಾಹಿತಿ ಹಂಚಿಕೊಂಡಂತೆ, ಸಲಾರ್ ಸಿನಿಮಾ, "ಸಲಾರ್ ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್... ಪ್ರಭಾಸ್ ಅಭಿನಯದ ಸಲಾರ್ 675 ಕೋಟಿ ಗ್ರಾಸ್ ಮಾರ್ಕ್‌ನತ್ತ ಸಾಗುತ್ತಿದೆ. ಮೊದಲ ದಿನ 176.52 ಕೋಟಿ, ಎರಡನೇ ದಿನ 101.39 ಕೋಟಿ, ಮೂರನೇ ದಿನ 95.24 ಕೋಟಿ ರೂ, ನಾಲ್ಕನೇ ದಿನ 76.91 ಕೋಟಿ, ಐದನೇ ದಿನ 40.17 ಕೋಟಿ, ದಿನ 6ನೇ ದಿನ 31.62 ಕೋಟಿ, ಏಳನೇ ದಿನ 20.78 ಕೋಟಿ, 8ನೇ ದಿನ 14.21 ಕೋಟಿ, 9ನೇ ದಿನ 21.45 ಕೋಟಿ, 10ನೇ ದಿನ 23.09 ಕೋಟಿ, 11ನೇ ದಿನ 25.81 ಕೋಟಿ, 12ನೇ ದಿನ 12.15 ಕೋಟಿ, 13ನೇ ದಿನ 11.07 ಕೋಟಿ, 14ನೇ ದಿನ 9.28 ಕೋಟಿ ಒಟ್ಟು 659.69 ಕೋಟಿ ರೂಪಾಯಿ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications











