ಪ್ರಭಾಸ್‌ಗೆ ಸರ್ಜರಿ ಆಗಿದ್ದು ಗೊತ್ತಾ? 'ಸಲಾರ್' ವಿಷಯದಲ್ಲಿ ನಿಮ್ಮ ಭವಿಷ್ಯ ಸುಳ್ಳಾಯ್ತು ಎಂದವರಿಗೆ ವೇಣು ಸ್ವಾಮಿ ತಿರುಗೇಟು

ಟಾಲಿವುಡ್ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಪ್ರಭಾಸ್ ವಿಚಾರದಲ್ಲಿ ವೇಣು ಸ್ವಾಮಿ ಪದೇ ಪದೇ ತಮ್ಮ ಹೇಳಿಕೆಗಳಿಂದ ಗಮನ ಸೆಳಯುತ್ತಾರೆ. ಪ್ರಭಾಸ್ ಆರೋಗ್ಯ ಹಾಗೂ ಸಿನಿಕರಿಯರ್ ಬಗ್ಗೆ ವೇಣುಸ್ವಾಮಿ ಭವಿಷ್ಯ ಹೇಳುತ್ತಾ ಬರ್ತಿದ್ದಾರೆ.

ಮೊದಲಿಗೆ ವೇಣು ಸ್ವಾಮಿ ಭವಿಷ್ಯವನ್ನು ಯಾರು ನಂಬುತ್ತಿರಲಿಲ್ಲ. ಆದರೆ ಸಮಂತಾ- ನಾಗಚೈತನ್ಯಾ ಡಿವೋರ್ಸ್ ಪಡೆದ ಬಳಿಕ ವೇಣು ಸ್ವಾಮಿ ಹೇಳಿಕೆಗಳ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಬಹಳ ಹಿಂದಿಯೇ ಇವರಿಬ್ಬರು ದೂರಾಗುತ್ತಾರೆ ಎಂದು ವೇಣುಸ್ವಾಮಿ ಹೇಳಿದ್ದರು. ವೇಣುಸ್ವಾಮಿ ಸಲಹೆಯಂತೆ ನಟಿ ರಶ್ಮಿಕಾ ಮಂದಣ್ಣ ತಾರಾದೇವಿ ಪೂಜೆ ಮಾಡಿದ್ದರು. ಅದರಿಂದಲೇ ಆಕೆಗೆ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಸಿಕ್ಕಿದೆ ಎನ್ನುವ ವಾದ ಕೆಲವರದ್ದು.

Prabhas Salaar success: Venu Swamy hits back who trolls that his prediction wrong

ರಶ್ಮಿಕಾ ಬಳಿಕ ಸಾಕಷ್ಟು ನಟಿಯರು ವೇಣುಸ್ವಾಮಿ ಬಳಿ ಹೋಗಿ ಇದೇ ಪೂಜೆ ಮಾಡಿಸುತ್ತಿದ್ದಾರೆ. ಪ್ರಭಾಸ್ ಜಾತಕದ ಪ್ರಕಾರ ಆತನಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಮದುವೆ ಆಗುವುದಿಲ್ಲ, ಇನ್ಮುಂದೆ ಆತನ ಸಿನಿಮಾಗಳು ದೊಡ್ಡದಾಗಿ ಗೆಲ್ಲಲ್ಲ ಎಂದು ವೇಣುಸ್ವಾಮಿ ಹೇಳುತ್ತಾ ಬಂದಿದ್ದಾರೆ. 'ಆದಿಪುರುಷ್' ಸಿನಿಮಾ ಸೋಲುತ್ತದೆ ಎಂದಿದ್ದರು. ಅದೇ ರೀತಿ 'ಸಲಾರ್' ಕೂಡ ಗೆಲ್ಲಲ್ಲ ಎಂದಿದ್ದಾರೆ.

ಇದೇ ಶುಕ್ರವಾರ ಬಿಡುಗಡೆಯಾದ 'ಸಲಾರ್' ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 170 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗಾಗಿ ಪ್ರಭಾಸ್ ಅಭಿಮಾನಿಗಳು ವೇಣುಸ್ವಾಮಿನ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ನಿನ್ನ ಭವಿಷ್ಯ, ಜೋತಿಷ್ಯ ಎಲ್ಲವೂ ಸುಳ್ಳು. 'ಸಲಾರ್' ಸಿನಿಮಾ ಸೋಲುತ್ತೆ ಎಂದು ಹೇಳಿದ್ದೆ. ಈಗ ಏನಾಯ್ತು? ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ ನೋಡು ಎನ್ನುತ್ತಿದ್ದಾರೆ.

ತಮ್ಮನ್ನು ಟ್ರೋಲ್ ಮಾಡುವವರಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿ ವೇಣುಸ್ವಾಮಿ ತಿರುಗೇಟು ನೀಡಿದ್ದಾರೆ. "ಸೂಪರ್ ಸ್ಟಾರ್ ಅಂದ್ರೆ ಬಿಡುಗಡೆಯಾದ ಸಿನಿಮಾಗಳಲ್ಲಿ 90ರಷ್ಟು ಹಿಟ್ ಆಗಬೇಕು. ಅದುಬಿಟ್ಟು ಬಿಡುಗಡೆಯಾದ 4 ಸಿನಿಮಾಗಳಲ್ಲಿ ಒಂದು ಸಿನಿಮಾ ಗೆದ್ದರೆ ಏನು ಹೇಳುವುದು" ಎಂದು ಬರೆದುಕೊಂಡಿದ್ದಾರೆ. 'ಬಾಹುಬಲಿ' ಬಳಿಕ ಬಂದ 'ಸಾಹೋ', 'ರಾಧೆಶ್ಯಾಮ್', 'ಆದಿಪುರುಷ್' ಸಿನಿಮಾಗಳು ಸೋತಿವೆ. 'ಸಲಾರ್' ಮಾತ್ರ ಹಿಟ್ ಆಗಿದೆ ಎಂದಿದ್ದಾರೆ. ಆದರೂ ಪ್ರಭಾಸ್ ಬಗ್ಗೆ ತಾನು ಹೇಳಿದ್ದೆಲ್ಲಾ ನಿಜ ಎಂದಿದ್ದಾರೆ.

Prabhas Salaar success: Venu Swamy hits back who trolls that his prediction wrong

'ಸಲಾರ್' ಬಿಡುಗಡೆಗೂ ಮುನ್ನ ಕೂಡ ವೇಣುಸ್ವಾಮಿ ಪ್ರಭಾಸ್ ಬಗ್ಗೆ ಮಾತನಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಪೋಸ್ಟ್ ಮಾಡಿದ್ದಾರೆ. "ಪ್ರಭಾಸ್ ವಿಚಾರದಲ್ಲಿ ನಾನು ಹೇಳಿದ್ದರಲ್ಲಿ ಕೆಲವೊಂದು ಹೊರ ಬರುತ್ತದೆ ಮತ್ತೆ ಕೆಲವು ಹೊರ ಬರಲ್ಲ. ಆದರೆ ನಾನು ಹೇಳಿದ್ದು ಮಾತ್ರ ನಿಜ. ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿದ್ದೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆ ಕೂಡ ನಡೀತು. ಅದಕ್ಕೆ 'ಸಲಾರ್' ಚಿತ್ರದ ಪ್ರಚಾರ ಸರಿಯಾಗಿ ನಡೆದಿಲ್ಲ. ಪ್ರಭಾಸ್ ಬಗ್ಗೆ ನಾನು ಹೇಳಿರುವ ಕೆಲವು ವಿಷಯಗಳು ಹೊರಗೆ ಬರುವುದಿಲ್ಲ. ಆದರೆ ಅದು ಒಳಗೆ ನಡೆಯುತ್ತವೆ. ಅಯ್ಯೋ ದಡ್ಡ ಶಿಖಾಮಣಿಗಳೇ ಪ್ರಭಾಸ್ ಸಮಸ್ಯೆಗಳ ಬಗ್ಗೆ ನಿಮಗೇನು ಗೊತ್ತು?" ಎಂದು ವೇಣು ಸ್ವಾಮಿ ತಿರುಗೇಟು ನೀಡಿದ್ದರು.

ಈ ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆ ಆಗುವುದಿಲ್ಲ. ಆತ ಜಾತಕ, ಜ್ಯೋತಿಷ್ಯ ನಂಬುವುದಿಲ್ಲ. ಅದಕ್ಕೆ ಇಷ್ಟೆಲ್ಲಾ ಸಮಸ್ಯೆ ಎಂದು ವೇಣುಸ್ವಾಮಿ ಹೇಳಿದ್ದರು. ಪ್ರಭಾಸ್ ಅಭಿಮಾನಿಗಳು ವೇಣುಸ್ವಾಮಿ ಹೇಳಿಕೆಗಳನ್ನು ಖಂಡಿಸುತ್ತಾ ಬರ್ತಿದ್ದಾರೆ. ಸುಖಾಸುಮ್ಮನೆ ಗಮನ ಸೆಳೆಯಲು ಈ ರೀತಿ ಬಾಯಿಗೆ ಬಂದಿದ್ದು ಹೇಳುತ್ತಾರೆ ಎಂದು ಆರೋಪಿಸುತ್ತಿದ್ದಾರೆ. ಇನ್ನು 'ಸಲಾರ್‌' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 'ಉಗ್ರಂ' ಕಥೆಯನ್ನೇ ಪ್ರಶಾಂತ್ ನೀಲ್ ದೊಡ್ಡಮಟ್ಟದಲ್ಲಿ ತೆರೆಗೆ ತಂದಿದ್ದಾರೆ.

More from Filmibeat

English summary
Venu Swamy hits back to prabhas fans amid Salaar success;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X