30ರ ಹರೆಯದ ಚೆಲುವೆಗಾಗಿ ತಮ್ಮ 45ನೇ ವರ್ಷದಲ್ಲಿ ಪ್ರಭಾಸ್ ಮಾಡಿದ್ದೇನು ? ಬಾಹುಬಲಿಗೆ ಲವ್ವಾಯ್ತಾ ?

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ಸ್ಟಾರ್‌ಗಳಲ್ಲಿ ಪ್ರಭಾಸ್ ಕೂಡ ಒಬ್ಬರು. ಒಂದಾದ ಮೇಲೊಂದು ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡುತ್ತಿರುವ ಪ್ರಭಾಸ್ ಬೆಳ್ಳಿತೆರೆಯ ಮೇಲಷ್ಟೇ ರಗಡ್ ಆಗಿ ಕಾಣುತ್ತಾರೆ. ಆದರೆ ನಿಜ ಜೀವನದಲ್ಲಿ ಪ್ರಭಾಸ್ ಹೃದಯವಂತ.

ಗೆಲುವಿನ ಅಂಹಕಾರವನ್ನು ನೆತ್ತಿಗೇರಿಸಿಕೊಳ್ಳದೇ ತನ್ನ ಅಕ್ಕ-ಪಕ್ಕ ಇರುವ ಸ್ಟಾರ್‌ಗಳಿಗೆ, ಕಲಾವಿದರಿಗೆ, ತನ್ನ ಜೊತೆ ಚಿತ್ರರಂಗಕ್ಕೆ ಬಂದ ಬೇರೆ ಹೀರೋಗಳಿಗೆ ಇವತ್ತು ಕೂಡ ಪ್ರಭಾಸ್ ಅದೇ ಬೆಲೆ ಕೊಡುತ್ತಾರೆ. ಪ್ರೀತಿಯಿಂದ ಮಾತನಾಡುತ್ತಾರೆ. ಕಾಳಜಿಯನ್ನು ತೋರಿಸುತ್ತಾರೆ. ಇದಕ್ಕೆ ಇಮಾನ್ ಎಸ್ಮಾಯಿಲ್ ಹಾಕಿಕೊಂಡಿರುವ ಫೋಸ್ಟ್ ಸದ್ಯದ ಸಾಕ್ಷಿ.

Prabhas sends delicious homemade food to his Fauji co-actor Imanvi

ಹೌದು, ಪ್ರಭಾಸ್ ಫೌಜಿ ಚಿತ್ರವನ್ನು ಮಾಡುತ್ತಿದ್ದಾರೆ. 'ಸೀತಾರಾಮಂ' ಚಿತ್ರದ ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಈ ಚಿತ್ರದಲ್ಲಿ ಇಮಾನ್ ಎಸ್ಮಾಯಿಲ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ರೀಲ್ಸ್ ಮಾಡುತ್ತಾ, ಬಾಲಿವುಡ್‌ ಸೇರಿ ಬೇರೆ ಬೇರೆ ಭಾಷೆಯ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರತಿಸಿಕೊಂಡಿದ್ದ ಇಮಾನ್ವಿ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ.

ಸದ್ಯ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ನ್ಯೂಯಾರ್ಕ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇಮಾನ್ವಿಗೆ ಪ್ರಭಾಸ್ ಸರ್‌ಫ್ರೈಸ್ ನೀಡಿದ್ದಾರೆ. ತಮ್ಮ ಮನೆಯಿಂದ ಭಕ್ಷ್ಯ ಭೋಜನವನ್ನು ಕಳಿಸಿದ್ದಾರೆ. ಪ್ರಭಾಸ್ ಅವರ ಈ ಪ್ರೀತಿಯನ್ನು ಕಂಡು ಅವಕ್ಕಾಗಿರುವ ಇಮಾನ್ವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪ್ರಭಾಸ್‌ಗೆ ಧನ್ಯವಾದ ಹೇಳಿದ್ದಾರೆ. ವೆಜ್ ನಾನ್ ವೆಜ್‌ನ ಹಲವು ಬಗೆಯ ಐಟಂಗಳನ್ನು ಇಮಾನ್ವಿಗೆ ಪ್ರಭಾಸ್ ಕಳಿಸಿದ್ದಾರೆ.

Prabhas sends delicious homemade food to his Fauji co-actor Imanvi

ಅಂದ್ಹಾಗೇ ಪ್ರಭಾಸ್ ಹೀಗೆ ತರಹೇವಾರಿ ಭೋಜನವನ್ನು ಕಳಿಸುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಪ್ರಭಾಸ್ ಅವರ ಈ ಆತಿಥ್ಯಕ್ಕೆ ಹಲವರು ಮನ ಸೋತಿದ್ದಾರೆ. ಹೊಟ್ಟೆ ಬಿರಿಯುವಷ್ಟು ಊಟ ಹಾಕಿಸಿದ್ದಾರೆ. ಕಂಗುವ ಚಿತ್ರದ ಬಿಡುಗಡೆಯ ಸಮಯದಲ್ಲಿ ಸೂರ್ಯ ಕೂಡ ಪ್ರಭಾಸ್ ಮನೆಯ ಊಟದ ರುಚಿಯ ಬಗ್ಗೆ ಮಾತನಾಡಿದ್ದರು. ನನಗಾಗಿ ಊಟ ಮಾಡದೆ ಕಾಯುತ್ತಾ ಕುಳಿತುಕೊಂಡಿದ್ದರು, ಅಷ್ಟೊಂದು ವಿನಯವಂತ ಪ್ರಭಾಸ್ ಎಂದು ಹೇಳಿದ್ದರು.

ಇನ್ನು ಇದಕ್ಕೂ ಮುನ್ನ ಪ್ರಭಾಸ್ ಕಡಿಮೆ ಅಂದರೂ 30ಬಗೆಯ ಡಿಶ್‌ಗಳನ್ನು ಕಳಿಸುತ್ತಾರೆ ಎಂದು ಹೇಳಿದ್ದರು. ತಮ್ಮ ಜೊತೆ ಇದ್ದವರನ್ನು ಪ್ರಭಾಸ್ ತುಂಬಾ ಚೆನ್ನಾಗಿ ಖುಷಿಯಿಂದ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ದೇವರ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಜಗಪತಿ ಬಾಬು ಅವರಿಗೆ ಕೂಡ ಇದೇ ರೀತಿಯ ಬಕಾಸುರನಂತೆ ಊಟ ಮಾಡಿದೆ ಈಗ ಕುಂಭಕರ್ಣನಂತೆ ನಿದ್ದೆ ಮಾಡುತ್ತೇನೆ ಎಂದು ಜಗಪತಿ ಬಾಬು ವಿಡಿಯೋ ಹಂಚಿಕೊಂಡಿದ್ದರು. ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಂತೂ ಪ್ರಭಾಸ್ ಕಳಿಸಿದ ಊಟ ಇಡಲು ಹೊಟೇಲ್‌ನಲ್ಲಿ ಇನ್ನೊಂದು ರೂಮ್ ಬಾಡಿಗೆಗೆ ಪಡೆದುಕೊಂಡಿದ್ದರಂತೆ.

ಹೀಗೆ ಪ್ರಭಾಸ್ ಅವರ ಈ ಫುಡ್ ಕ್ಲಬ್‌ಗೆ ಚಿತ್ರರಂಗದಲ್ಲಿ ಅನೇಕ ಜನ ಅಭಿಮಾನಿಗಳಿದ್ದಾರೆ. ಪ್ರಭಾಸ್ ಆತಿಥ್ಯಕ್ಕೆ ಮನ ಸೋತಿದ್ದಾರೆ. ಈ ಸಾಲಿಗೆ ಈಗ ಇಮಾನ್ವಿ ಸೇರಿಕೊಂಡಿದ್ದಾರೆ.ಪ್ರಭಾಸ್ ಅವರ ಈ ಗುಣಕ್ಕೆ ಫಿದಾ ಆಗಿದ್ದಾರೆ. ಇನ್ನುಳಿದಂತೆ ಸದ್ಯ ಪ್ರಭಾಸ್ ಕೈಯಲ್ಲಿ 'ದಿ ರಾಜಾ ಸಾಬ್' ಹಾಗೂ 'ಫೌಜಿ' ಚಿತ್ರಗಳಿವೆ. ಈ ಎರಡು ಚಿತ್ರಗಳನ್ನು ಹೊರತು ಪಡಿಸಿದರೆ ಸಲಾರ್ 2 ಮತ್ತು ಕಲ್ಕಿ 2 ಸರತಿ ಸಾಲಿನಲ್ಲಿವೆ. ಇನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ, ಪ್ರಭಾಸ್ ಅವರ ಜೊತೆ ಮೂರು ಚಿತ್ರಗಳ ಒಪ್ಪಂದ ಕೂಡ ಮಾಡಿಕೊಂಡಿದೆ.

More from Filmibeat

Read more about: prabhas food tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X