ಪ್ರಭಾಸ್ ಕೈಯಲ್ಲಿ 'ಅಷ್ಟಗ್ರಹ': ಕುತೂಹಲ ಹುಟ್ಟಿಸಿದ 'ರಾಧೆ-ಶ್ಯಾಮ್' ಪೋಸ್ಟರ್

ಪ್ರಭಾಸ್ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷದ ಮೇಲೆ ಕೆಲವು ತಿಂಗಳುಗಳಾಗಿವೆ. ಇದೀಗ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ತೆರೆಗೆ ಬರುತ್ತಿದ್ದು, ಸಿನಿಮಾದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ.

ಕೋವಿಡ್‌ಗೆ ಮುಂಚಿನಿಂದಲೂ 'ರಾಧೆ-ಶ್ಯಾಮ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, 2019ರ ಆರಂಭದಲ್ಲಿಯೇ ಸಿನಿಮಾ ಘೋಷಣೆಯಾಗಿತ್ತು. ಕೋವಿಡ್ ಹಾಗೂ ಇನ್ನಿತರೆ ಕಾರಣಗಳಿಂದ ತಡವಾಗಿದ್ದ ಸಿನಿಮಾ ಇದೀಗ ಜನವರಿ 12 ಕ್ಕೆ ತೆರೆಗೆ ಬರಲಿದೆ.

'ರಾಧೆ-ಶ್ಯಾಮ್' ಇಂದಷ್ಟೆ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ಸಿನಿಮಾದ ಕತೆಯ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಈ ವರೆಗೆ ಬಿಡುಗಡೆ ಮಾಡಲಾಗಿದ್ದ ಸಿನಿಮಾದ ಪೋಸ್ಟರ್‌ಗಳಿಗಿಂತಲೂ ಈಗ ಬಿಡುಗಡೆ ಮಾಡಿರುವ ಪೋಸ್ಟರ್ ಬಹಳ ಭಿನ್ನವಾಗಿದೆ.

Prabhas Starer Radhe Shyam Movie Poster Released

ಈವರೆಗೆ ಬಿಡುಗಡೆ ಮಾಡಿದ್ದ ಪೋಸ್ಟರ್‌ನಲ್ಲಿ ಪ್ರಭಾಸ್-ಪೂಜಾ ಹೆಗ್ಡೆಯ ಪ್ರೇಮಕತೆಯನ್ನು ಪ್ರತಿನಿಧಿಸುವಂತಹಾ ಚಿತ್ರಗಳಿದ್ದವು. ಆದರೆ ಈಗ ಒಟ್ಟಾರೆ ಕತೆಯ ಬಗ್ಗೆ ಸೂಚ್ಯ ಸಂದೇಶವುಳ್ಳ ಪೋಸ್ಟರ್‌ ಬಿಡುಗಡೆ ಆಗಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಹಸ್ತದ ಮೇಲೆ ಎಂಟು ಗ್ರಹಗಳಿವೆ. ಆ ಗ್ರಹಗಳನ್ನು ಭೂತಗನ್ನಡಿಯಲ್ಲಿ ಪ್ರಭಾಸ್ ನೋಡುತ್ತಿದ್ದಾರೆ.

'ರಾಧೆ-ಶ್ಯಾಮ್' ಸಿನಿಮಾವು ಪ್ರೇಮಕತೆಯ ಜೊತೆಗೆ ಖಗೋಳ ಶಾಸ್ತ್ರ, ಭವಿಷ್ಯ, ಹಸ್ತಸಾಮುದ್ರಿಕಾ ಶಾಸ್ತ್ರ ಹಾಗೂ ವಿಜ್ಞಾನದ ವಿಷಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಪ್ರಭಾಸ್‌ಗೆ ಭವಿಷ್ಯ ನೋಡುವ ಶಕ್ತಿಯಿರುತ್ತದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಭಾರಿ ಸಿಜಿಐಗಳು, ಸಾಹಸ ಮಯ ದೃಶ್ಯಗಳು ಇರಲಿವೆ ಆದರೆ ಸಿನಿಮಾದಲ್ಲಿ ಯಾವುದೇ ವಿಲನ್‌ ಪಾತ್ರ ಇರುವುದಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಸಮುದ್ರದಾಳದಲ್ಲಿ ಪ್ರಭಾಸ್ ಮಾಡುವ ಸಾಹಸ ಸಿನಿಮಾದ ಹೈಲೈಟ್ ಎಂದು ಚಿತ್ರತಂಡ ಈಗಾಗಲೇ ಹೇಳಿದೆ.

ಸಿನಿಮಾದಲ್ಲಿ ಪ್ರಭಾಸ್, ವಿಕ್ರಮ್ ಆದಿತ್ಯ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದು, ಸಿನಿಮಾವು 70-80ರ ದಶಕದ ಕತೆಯನ್ನು ಹೊಂದಿದೆ. ಸಿನಿಮಾದ ಬಹುಭಾಗದ ಚಿತ್ರೀಕರಣ ಯೂರೋಪ್ ದೇಶಗಳಲ್ಲಿಯೇ ನಡೆದಿದೆ. ಕೆಲ ಭಾಗಗಳ ಚಿತ್ರೀಕರಣವಷ್ಟೆ ಹೈದರಾಬಾದ್‌ನಲ್ಲಿ ನಡೆಸಲಾಗಿದೆ. ಸಿನಿಮಾದ ಕತೆಯೂ ಯೂರೋಪ್ ದೇಶಗಳಲ್ಲಿಯೇ ನಡೆಯಲಿದೆ.

ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಹಿಟ್ ಆಗಿವೆ. ಸಿನಿಮಾವು ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹಾಗೂ ಟ್ರೈಲರ್ ಲಾಂಚ್ ಕಾರ್ಯಕ್ರಮ ಇಂದು (ಡಿಸೆಂಬರ್ 23)ರಂದು ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಪ್ರಭಾಸ್, ಪೂಜಾ ಹೆಗ್ಡೆ, ನಿರ್ದೇಶಕ ರಾಧಾ ಕೃಷ್ಣ ಕುಮಾರ್, ಯುವಿ ಕ್ರಿಯೇಶನ್ ಪ್ರಮುಖರು, ಪ್ರಭಾಸ್ ಮುಂದಿನ ಸಿನಿಮಾಗಳ ನಿರ್ದೇಶಕರು ಇನ್ನೂ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದು, ನಟ ನವೀನ್ ಪೋಲಿ ಶೆಟ್ಟಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ.

'ರಾಧೆ-ಶ್ಯಾಮ್' ಸಿನಿಮಾವು ಜನವರಿ 14 ರಂದು ಬಿಡುಗಡೆ ಆಗಲಿದೆ. ಅದಾದ ಬಳಿಕ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ನಿರ್ಮಾಣ ಮಾಡಿರುವುದು ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್. ಅದರ ಬಳಿಕ ಭಾರತದ ಅತಿ ದೊಡ್ಡ ಬಜೆಟ್‌ನ ಸಿನಿಮಾ 'ಆದಿಪುರುಷ್' ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಕೃತಿ ಸೆನನ್ ಸೀತೆ ಹಾಗೂ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. 'ಆದಿಪುರುಷ್' ಬಳಿಕ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಜೊತೆ ನಟಿಸುವ ಹೊಸ ಸಿನಿಮಾದ ಬಿಡುಗಡೆ ಆಗಲಿದೆ. ಈ ಸಿನಿಮಾ ಬಹುಷಃ 2023ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.

More from Filmibeat

English summary
Prabhas starer Radhe-Shyam movie poster released. Movie will release on January 14. Movie's pre release event happening today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X