ಪ್ರಭಾಸ್‌ಗೆ ಸೋಲಿನ ಭೀತಿ: ಸಂಕ್ರಾಂತಿ ರೇಸ್‌ನಿಂದ ಹೊರಬಿದ್ದ 'ಆದಿಪುರುಷ್'?
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಸಂಕ್ರಾಂತಿ ರಿಲೀಸ್ ಡೌಟ್ ಎನ್ನಲಾಗ್ತಿದೆ. ಜನವರಿ 12ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಸುಗ್ಗಿ ಸಂಭ್ರಮದಲ್ಲಿ ತೆಲುಗು, ತಮಿಳಿನ 4 ಸಿನಿಮಾಗಳು ರಿಲೀಸ್ ಆಗುತ್ತಿದೆ. ಹಾಗಾಗಿ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡುವ ಬಗ್ಗೆ ಚಿತ್ರತಂಡ ಚರ್ಚೆ ನಡೆಸ್ತಿದೆ. ಬಹುಕೋಟಿ ವೆಚ್ಚದ ಸಿನಿಮಾ ಆಗಿರುವುದರಿಂದ ಸೋಲೊ ರಿಲೀಸ್ ಆದರೆ ಉತ್ತಮ ಎನ್ನುವ ಲೆಕ್ಕಾಚಾರದಲ್ಲಿದೆಯಂತೆ ಚಿತ್ರತಂಡ.
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಭಾರೀ ನಿರೀಕ್ಷೆ ಮೂಡಿದೆ. ರಾಮಾಯಣ ಕಾವ್ಯ ಆಧರಿಸಿ ಈ ಚಿತ್ರವನ್ನು ಕಟ್ಟಿಕೊಡಲಾಗ್ತಿದೆ. ಪ್ರಭಾಸ್ ಶ್ರೀರಾಮನಾಗಿ ಬಣ್ಣ ಹಚ್ಚಿದ್ದಾರೆ. 3D ವರ್ಷನ್‌ನಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಟೀಸರ್‌ಗೆ ಭಾರೀ ಸದ್ದು ಮಾಡಿತ್ತು. ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿತ್ತು. ವಿಎಫ್‌ಎಕ್ಸ್ ಕೆಟ್ಟದಾಗಿದೆ. ಕಾರ್ಟೂನ್ ಸಿನಿಮಾ ತರ ಇದೆ ಎಂದು ಬಹುತೇಕರು ಬೇಸರ ವ್ಯಕ್ತಪಡಿಸಿದರು. ಇನ್ನು ರಾಮ, ರಾವಣ, ಹನುಮಂತನ ಪಾತ್ರಗಳನ್ನು ತೋರಿಸಿರುವ ಬಗ್ಗೆಯೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು.

'ಆದಿಪುರುಷ್' ಸಿನಿಮಾ ಪೋಸ್ಟರ್‌ಗಳು ಕೂಡ ನಿರಾಸೆ ಮೂಡಿಸುತ್ತಲೇ ಇದೆ. ಆದರೆ ಚಿತ್ರತಂಡ ಮಾತ್ರ ನಾವು ಯಾರ ಮನಸ್ಸಿಗೂ ನೋವಿಸುವಂತೆ ಸಿನಿಮಾ ಮಾಡಿಲ್ಲ. ಇದು 3Dಯಲ್ಲಿ ನೋಡಲು ಮಾಡಿರುವ ಸಿನಿಮಾ. ಥಿಯೇಟರ್‌ನಲ್ಲಿ ನೋಡಿದರೆ ಮಾತ್ರ ಮಜಾ ಸಿಗೋದು ಎನ್ನುತ್ತಾ ಬರ್ತಿದೆ. ಆಂಧ್ರದ ಕೆಲ ಥಿಯೇಟರ್‌ಗಳಲ್ಲಿ ಅಭಿಮಾನಿಗಳು 3D ಕನ್ನಡಕದಲ್ಲಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಕೃತಿ ಸನೂನ್ ಸೀತಾಮಾತೆಯಾಗಿ ಕಾಣಿಸಿಕೊಂಡಿದ್ದರೆ ಸೈಫ್ ಅಲಿಖಾನ್ ರಾವಣನ ವೇಷದಲ್ಲಿ ಬಣ್ಣ ಹಚ್ಚಿದ್ದಾರೆ. 'ಆದಿಪುರುಷ್' ಲೈವ್ ಆನಿಮೇಷನ್ ಸಿನಿಮಾ ಎನ್ನಲಾಗ್ತಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಚಿತ್ರಕ್ಕೆ ಬಂಡವಾಳ ಹೂಡಿವೆ.

ಸುಮಾರು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿಬರ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿತ್ತು. ಸುಗ್ಗಿ ಹಬ್ಬಕ್ಕೆ ದಳಪತಿ ವಿಜಯ್ ನಟನೆಯ 'ವಾರೀಸು', ಅಜಿತ್ 'ತುನಿವು', ಚಿರಂಜೀವಿ 'ವಾಲ್ತೆರು ವೀರಯ್ಯ', ಬಾಲಕೃಷ್ಣ ನಟನೆಯ 'ವೀರ ಸಿಂಹರೆಡ್ಡಿ' ಸಿನಿಮಾ ರಿಲೀಸ್ ಆಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ಜನ ಪ್ರೇಕ್ಷಕರು ಬಂದೇ ಬರುತ್ತಾರೆ ಎನ್ನುವ ನಿರೀಕ್ಷೆಯಿಂದ ಬಾಕ್ಸಾಫೀಸ್ ಕ್ಲ್ಯಾಶ್‌ಗೂ ಹೆದರದೇ ಸಿನಿಮಾ ರಿಲೀಸ್ ತಯಾರಿ ನಡೀತಿದೆ. ಇಂತಹ ಹೊತ್ತಲೇ 'ಆದಿಪುರುಷ್' ರಿಲೀಸ್ ಡೇಟ್ ಸಮ್ಮರ್‌ಗೆ ಪೋಸ್ಟ್‌ಪೋನ್ ಮಾಡುವ ಬಗ್ಗೆ ಗುಸುಗುಸು ಶುರುವಾಗಿದೆ. ಜನವರಿ 12ಕ್ಕೆ ತೆರೆಮೇಲೆ ಶ್ರೀರಾಮನಾಗಿ ಪ್ರಭಾಸ್ ದರ್ಶನ ಬಹುತೇಕ ಡೌಟ್ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.


Click it and Unblock the Notifications











