'ಆದಿಪುರುಷ್' ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್.. ಪ್ರೀ ರಿಲೀಸ್ ಈವೆಂಟ್ ಸ್ಥಳ, ದಿನಾಂಕ ನಿಗದಿ
ಓಂ ರಾವುತ್ ನಿರ್ದೇಶನದ ಪೌರಾಣಿಕ ಕಥಾಹಂದರ ತ್ರೀಡಿ ಸಿನಿಮಾ 'ಆದಿಪುರುಷ್' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಬಣ್ಣ ಹಚ್ಚಿದ್ದು ಸಿನಿಮಾ ಜೂನ್ 16ಕ್ಕೆ ತೆರೆಗಪ್ಪಳಿಸಲಿದೆ. ಈಗಾಗಲೇ ಹಲವು ಬಾರಿ ಸಿನಿಮಾ ರಿಲೀಸ್ ಡೇಟ್ ಬದಲಾಗಿತ್ತು. ಇದೀಗ ಟ್ರೈಲರ್ ಲಾಂಚ್ ಹಾಗೂ ಪ್ರೀ ರಿಲೀಸ್ ಈವೆಂಟ್‌ಗಳ ಬಗ್ಗೆ ಚರ್ಚೆ ಶುರುವಾಗಿದೆ.
ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದ 'ಆದಿಪುರುಷ್' ಟೀಸರ್ ಭಾರೀ ಟೀಕೆಗೆ ಗುರಿಯಾಗಿತ್ತು. ಇದೇ ಕಾರಣಕ್ಕೆ ಚಿತ್ರವನ್ನು ಮತ್ತಷ್ಟು ತಿದ್ದಿ ತೀಡಲು ಚಿತ್ರತಂಡ ಹೆಚ್ಚಿನ ಸಮಯ ಕೇಳಿತ್ತು. ಇದೀ ಸಿನಿಮಾ ಸಿದ್ಧವಾಗಿದೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆಗೂ ಮುನ್ನ ಅಂತರಾಷ್ಟ್ರೀಯ ಮಟ್ಟದ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ತಿಂಗಳಿಗೂ ಮೊದ್ಲೆ ಆ ಪ್ರದರ್ಶನಗಳ ಟಿಕೆಟ್ ಸೋಲ್ಡ್‌ಔಟ್ ಆಗೋಗಿದೆ. ದಕ್ಷಿಣ ಭಾರತದ ಸಿನಿಮಾವೊಂದರ ಕ್ರೇಜ್ ನೋಡಿ ಹಾಲಿವುಡ್ ಮಂದಿ ಕುಡ ಬೆರಗಾಗಿದ್ದಾರೆ. ಚಿತ್ರದಲ್ಲಿ ರಾಮಾಯಣ ಕಾವ್ಯವನ್ನು ಹೇಳಲಾಗುತ್ತಿದೆ.

ಚಿತ್ರದಲ್ಲಿ ಸೀತಾಮಾತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ಬಣ್ಣ ಹಚ್ಚಿದ್ದಾರೆ. 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ 'ಆದಿಪುರುಷ್' ಸಿನಿಮಾ ನಿರ್ಮಾಣವಾಗಿದೆ. ಮುಂದಿನ ವಾರ ಟ್ರೈಲರ್ ರಿಲೀಸ್ ಪ್ಲಾನ್ ನಡೀತಿದೆ. ಮೇ 9ಕ್ಕೆ ಟ್ರೈಲರ್ ಬಹುತೇಕ ಖಚಿತ ಎನ್ನಲಾಗುತ್ತಿದೆ. ಟ್ರೈಲರ್ ರಿಲೀಸ್ ಮಾಡಿ ಪ್ರಮೋಷನ್‌ಗೆ ಚಾಲನೆ ಕೊಡುವ ಲೆಕ್ಕಾಚಾರ ನಡೀತಿದೆ. ಇನ್ನು ತಿರುಪತಿ ಹಾಗೂ ಭದ್ರಾಚಲಂನಲ್ಲಿ 2 ಪ್ರೀ ರಿಲೀಸ್ ಈವೆಂಟ್ ಮಾಡುವ ಬಗ್ಗೆಯೂ ಚರ್ಚೆ ನಡೀತಿದೆಯಂತೆ. ಜೂನ್ ಮೊದಲ ವಾರದಲ್ಲಿ ಈವೆಂಟ್ ಪ್ಲಾನ್ ಇದೆ.


Click it and Unblock the Notifications











