For Quick Alerts
  ALLOW NOTIFICATIONS  
  For Daily Alerts

  ಶ್ರೀರಾಮನಿಗೆ ಗಡ್ಡ, ಮೀಸೆ ಇತ್ತಾ? ಇಲ್ಲವಾ? 'ಆದಿಪುರುಷ್' ಪೋಸ್ಟರ್ ನೋಡಿ ಶುರುವಾಯ್ತು ಹೊಸ ಚರ್ಚೆ!

  |

  ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ನಾಳೆ(ಅಕ್ಟೋಬರ್ 2) ಸಂಜೆ ಅಯೋಧ್ಯೆಯಲ್ಲಿ ಬಹಳ ಅದ್ಧೂರಿಯಾಗಿ ಚಿತ್ರದ ಟೀಸರ್ ಮಾಡಲು ಸಿದ್ಧತೆ ನಡೀತಿದೆ. ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ ಪೋಸ್ಟರ್ ಸೂಪರ್ ಹಿಟ್ ಆಗಿದೆ. ಆದರೆ ಪೋಸ್ಟರ್‌ನಲ್ಲಿ ರಾಘವ ರಾಮನಾಗಿ ಪ್ರಭಾಸ್ ಲುಕ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ.

  ರಾಮಾಯಣ ಕಾವ್ಯ ಆಧರಿಸಿ ನಿರ್ದೇಶಕ ಓಂ ರಾವುತ್ ಈ ತ್ರಿಡಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಜಾನಕಿಯಾಗಿ ಕೃತಿ ಸನೂನ್ ನಟಿಸಿದ್ರೆ, ರಾವಣನ ಅವತಾರದಲ್ಲಿ ಸೈಫ್ ಅಲಿಖಾನ್ ಅಬ್ಬರಿಸಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ಮಿಂಚಿದ್ದು, ದೇವದತ್ ನಾಗೆ ಹನುಮಂತನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. 500 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಪಂಚದ ನಾನಾ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬಿಡುಗಡೆಯಾಗಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

  ಪ್ರಭಾಸ್ ಬಿಲ್ಲು ಹಿಡಿದಿದ್ದು ರಾಮ್‌ ಚರಣ್ ಹಿಡಿದಿದ್ದು ಒಂದೇ ಎಂದ ಫ್ಯಾನ್ಸ್!ಪ್ರಭಾಸ್ ಬಿಲ್ಲು ಹಿಡಿದಿದ್ದು ರಾಮ್‌ ಚರಣ್ ಹಿಡಿದಿದ್ದು ಒಂದೇ ಎಂದ ಫ್ಯಾನ್ಸ್!

  ಸದ್ಯ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಶ್ರೀರಾಮನ ಅವತಾರದಲ್ಲಿ ಬಿಲ್ಲು ಬಾಣ ಹಿಡಿದು ಪ್ರಭಾಸ್ ಆಗಸದತ್ತ ಗುರಿ ಇಟ್ಟಿರುವುದನ್ನು ನೋಡಬಹುದು. ಪೋಸ್ಟರ್‌ನಲ್ಲಿ ರಾಮನ ವೇಷದಲ್ಲಿ ಪ್ರಭಾಸ್ ಮೀಸೆ ಬಿಟ್ಟು ಕೊಂಚ ಗಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ.

  ರಾಮನಿಗೆ ಗಡ್ಡ ಮೀಸೆ ಇರಲಿಲ್ಲ!

  ರಾಮನಿಗೆ ಗಡ್ಡ ಮೀಸೆ ಇರಲಿಲ್ಲ!

  'ಆದಿಪುರುಷ್' ಚಿತ್ರದ ಪೋಸ್ಟರ್‌ನಲ್ಲಿ ಶ್ರೀರಾಮನಾಗಿ ಪ್ರಭಾಸ್ ಲುಕ್ ಚೆನ್ನಾಗಿಲ್ಲ ಎಂದು ಕೆಲವರು ಚಕಾರ ಎತ್ತಿದ್ದಾರೆ. ರಾಮನಿಗೆ ಗಡ್ಡ ಮೀಸೆ ಇರುವುದನ್ನು ನಾವು ನೋಡೇಯಿಲ್ಲ. ಪ್ರಭಾಸ್‌ನ ಯಾಕೆ ಈ ತರ ತೋರಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕ್ಲೀನ್‌ ಶೇವ್‌ನಲ್ಲಿ ಪ್ರಭಾಸ್ ಇರಬೇಕಿತ್ತು ಎನ್ನುವುದು ಕೆಲವರ ವಾದ. ಇದಕ್ಕೆ ಪ್ರಭಾಸ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  ಪ್ರಭಾಸ್ ಫ್ಯಾನ್ಸ್ ತಿರುಗೇಟು!

  ಪ್ರಭಾಸ್ ಫ್ಯಾನ್ಸ್ ತಿರುಗೇಟು!

  ಶ್ರೀರಾಮನಿಗೆ ಗಡ್ಡ ಮೀಸೆ ಇರಲಿಲ್ಲ ಎಂದವರು ಯಾರು? ರವಿವರ್ಮ ಬರೆದ ಚಿತ್ರಗಳಲ್ಲಿ ರಾಮ, ಕೃಷ್ಣರಿಗೆ ಗಡ್ಡಮೀಸೆ ಇದ್ದಂತೆ ಚಿತ್ರಿಸಿಲ್ಲ ಅಷ್ಟೇ. ರವಿವರ್ಮನ ಚಿತ್ರಗಳನ್ನೇ ಎಲ್ಲರೂ ಫೋಟೊ ಮಾಡಿಕೊಂಡು ಪೂಜಿಸುವುದರಿಂದ ರಾಮನಿಗೆ ಗಡ್ಡ ಮೀಸೆ ಇರಲಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಹಾಗಾಗಿ ರಾಮ ಅಂದಾಕ್ಷಣ ಅದೇ ಚಿತ್ರ ನೆನಪಾಗುತ್ತದೆ ಅಷ್ಟೇ. ವನವಾಸ ಮುಗಿಸಿ ಬಂದ ಮೇಲೆ ಪಟ್ಟಾಭಿಷೇಕಕ್ಕೂ ಮುನ್ನ ರಾಮ- ಲಕ್ಷ್ಮಣರು ಕ್ಷೌರ ಮಾಡಿಸಿಕೊಂಡ ಬಗ್ಗೆ ರಾಮಾಯಣ ಕಾವ್ಯದಲ್ಲಿ ಉಲ್ಲೇಖ ಇದೆ ಎಂದು ಕೆಲವರು ಹೇಳುತ್ತಿದ್ದಾರೆ.

  ಚಿತ್ರದಲ್ಲಿ ಪ್ರಭಾಸ್‌ಗೆ ಗಡ್ಡ ಇರಲೇಬೇಕು!

  ಚಿತ್ರದಲ್ಲಿ ಪ್ರಭಾಸ್‌ಗೆ ಗಡ್ಡ ಇರಲೇಬೇಕು!

  ಇನ್ನು ಪೋಸ್ಟರ್‌ನಲ್ಲಿ ಮೀಸೆ ಹೈಲೆಟ್ ಆಗಿದ್ದು, ಗಡ್ಡ ಇಲ್ಲದಂತೆ ಕಾಣುತ್ತಿದೆ ಎನ್ನುವುದು ಕೆಲವರ ಬೇಸರ. ಪ್ರಭಾಸ್‌ ಯಾವುದೇ ಪಾತ್ರ ಮಾಡಿದರೂ ಗಡ್ಡ ಇದ್ದರೆ ನೋಡಲು ಚೆನ್ನಾಗಿ ಕಾಣುತ್ತಾರೆ. ಕ್ಲೀನ್ ಶೇವ್‌ನಲ್ಲಿ ಯಂಗ್‌ ರೆಬಲ್‌ ಸ್ಟಾರ್‌ನ ನೋಡುವುದು ಕಷ್ಟ ಎಂದು ಕೆಲ ಪ್ರಭಾಸ್ ಫ್ಯಾನ್ಸ್ ಹೇಳುತ್ತಿದ್ದಾರೆ. ಕೆಲವರು ಇದಕ್ಕೆ 'RRR' ಅಲ್ಲೂರಿ ಸೀತಾರಾಮರಾಜು ಲುಕ್ ನೋಡಿ ಮಾತನಾಡಬೇಡಿ, ಅದೇ ಇದೇ ಬೇರೆ ಎನ್ನುತ್ತಿದ್ದಾರೆ. ಟೀಸರ್ ಬರುವವರೆಗೂ ಕಾದು ನೋಡಿ ಎಂದು ಸಲಹೆ ನೀಡುತ್ತಿದ್ದಾರೆ.

  ಸಂಕ್ರಾಂತಿಗೆ 'ಆದಿಪುರುಷ್' ರಿಲೀಸ್

  ಸಂಕ್ರಾಂತಿಗೆ 'ಆದಿಪುರುಷ್' ರಿಲೀಸ್

  ಬಾಹುಬಲಿ ಪ್ರಭಾಸ್‌ನ ಶ್ರೀರಾಮನಾಗಿ ನೋಡಲು ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ರಾಮಾಯಣ ಕಾವ್ಯವನ್ನು ತೆರೆಮೇಲೆ ತರುವ ಪ್ರಯತ್ನ ನಡೀತಿದ್ದು, ಭಾರೀ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬರಲಿದೆ.

  English summary
  Prabhas Starrer Adipurush Teaser Poster Goes Viral. Know More.
  Saturday, October 1, 2022, 17:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X