'ಕಲ್ಕಿ 2898 AD' ಸಿನಿಮಾ ಕಲೆಕ್ಷನ್ ಲೆಕ್ಕ ಎಲ್ಲಾ ಸುಳ್ಳು?

ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌ರಂತಹ ಘಟನಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಆದರೂ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಶ್ವಿನಿ ದತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಬಹಳ ದೊಡ್ಡದಾಗಿ 'ಕಲ್ಕಿ 2898 AD' ಸಿನಿಮಾ ನಿರ್ಮಾಣವಾಗಿದೆ. ಮಹಾಭಾರತ ಹಾಗೂ ಕಲಿಯುಗಕ್ಕೆ ಲಿಂಕ್ ಮಾಡಿ ಒಂದು ವಿಭಿನ್ನ ಕಥೆ ಹೇಳಲಾಗಿದೆ. ನಾಗ್ ಅಶ್ವಿನ್ ಕಲ್ಪನೆ, ವಿಷನ್, ಮೇಕಿಂಗ್ ಎಲ್ಲಾ ನೋಡಿ ಕೆಲವರು ಮೆಚ್ಚಿಕೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳ ಛಾಯೆ ಕಾಣುತ್ತಿದೆ. ಇನ್ನು ಮಹಾಭಾರತ ಸನ್ನಿವೇಶಗಳು ಮಾತ್ರ ಕೊಂಚಮಟ್ಟಿಗೆ ಗಮನ ಸೆಳೆದಿದೆ.

Prabhas starrer Kalki 2898 ad collections fake or genuine

ಮಹಾಭಾರತ ಹಾಗೂ ಕಲ್ಕಿ ಪುರಾಣದ ವಿಚಾರಗಳನ್ನು ಸೇರಿಸಿ ನಾಗ್ ಅಶ್ವಿನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಒಂದಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ ತಮ್ಮದೇ ಕಲ್ಪನೆಯಲ್ಲಿ ಸಿನಿಮಾ ತೆರೆಗ ತಂದಿದ್ದಾರೆ. ನಿರ್ದೇಶಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಫಸ್ಟ್‌ ಹಾಫ್ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ 10 ದಿನಕ್ಕೆ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.

ಹಿಂದಿ ಬೆಲ್ಟ್‌ನಲ್ಲಿ 'ಕಲ್ಕಿ 2898 AD' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. 200 ಕೋಟಿ ರೂ. ಹಿಂದಿ ವರ್ಷನ್ ಮಾತ್ರ ಗಳಿಸಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಆದರೆ ಸಿನಿಮಾ ಕಲೆಕ್ಷನ್ ಲೆಕ್ಕಾ ಎಲ್ಲಾ ಸುಳ್ಳು ಎಂದು ಕೆಲವರು ವಾದಿಸುತ್ತಿದ್ದಾರೆ. ಸುಖಾಸುಮ್ಮನೆ ಚಿತ್ರತಂಡ ಇಷ್ಟು ಕೋಟಿ ಅಷ್ಟು ಕೋಟಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದೆ. ಅದು ಸುಮ್ಮನೆ ಪ್ರೇಕ್ಷಕರನ್ನು ಸೆಳೆಯುವ ತಂತ್ರ ಅಷ್ಟೆ. ವಾಸ್ತವದಲ್ಲಿ ಅಷ್ಟು ಕಲೆಕ್ಷನ್ ಆಗಿಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ.

'ಬಾಹುಬಲಿ-2' ಹಾಗೂ 'KGF-2', 'ಜವಾನ್' ಸಿನಿಮಾಗಳಿಗೆ ಸಿಕ್ಕಂತ ರೆಸ್ಪಾನ್ಸ್ 'ಕಲ್ಕಿ 2898 AD' ಚಿತ್ರಕ್ಕೆ ಸಿಕ್ಕಿಲ್ಲ. ಆದರೂ 10 ದಿನಕ್ಕೆ 800 ಕೋಟಿ ರೂ. ಎನ್ನುತ್ತಿರುವುದು ಸುಳ್ಳು. ದಿನ ಕಳೆದಂತೆ ಪ್ರೇಕ್ಷಕರ ಸಂಖ್ಯೆ ಕಮ್ಮಿ ಆಗುತ್ತಿದೆ. ವೀಕೆಂಡ್‌ನಲ್ಲಿ ಒಂದಷ್ಟು ಜನ ಬಂದರೂ ವಾರದ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ರೆಸ್ಪಾನ್ಸ್ ಸಿಗುತ್ತಿಲ್ಲ. ಹಾಗಿರುವಾಗ 800 ಕೋಟಿ ರೈ. ಕಲೆಕ್ಷನ್ ಎನ್ನುವುದೆಲ್ಲಾ ಸುಳ್ಳು. ಪ್ರಭಾಸ್ ಹಿಂದಿನ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಗಮನದಲ್ಲಿಟ್ಟುಕೊಂಡು ಫೇಕ್‌ ಕಲೆಕ್ಷನ್ ಲೆಕ್ಕ ತೋರಿಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

Prabhas starrer Kalki 2898 ad collections fake or genuine

ಆಂಧ್ರ, ತೆಲಂಗಾಣದಲ್ಲಿ 'ಕಲ್ಕಿ 2898 AD' ಸಿನಿಮಾ ಟಿಕೆಟ್ ದರ ಹೆಚ್ಚಿಸಲಾಗಿದೆ. ಉತ್ತರ ಭಾರತದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಪ್ರೇಕ್ಷಕರಿಗೆ ಇಷ್ಟವಾಗದಿದ್ದರೂ ಬಹಳ ದಿನಗಳ ನಂತರ ಬಂದಿರುವ ದೊಡ್ಡ ಸಿನಿಮಾ ಎನ್ನುವ ಕಾರಣಕ್ಕೆ ನೋಡುತ್ತಿದ್ದಾರೆ. ಫ್ಯಾಮಿಲಿಯನ್ನು ಕರೆದುಕೊಂಡು ಬರುತ್ತಿದ್ದಾರೆ. ಓವರ್‌ಸೀಸ್‌ನಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಇದೆ. ಹಾಗಾಗಿ ಈ ಕಲೆಕ್ಷನ್ ಲೆಕ್ಕ ಸರಿ ಎಂದು ಪ್ರಭಾಸ್ ಫ್ಯಾನ್ಸ್ ವಾದಿಸುತ್ತಿದ್ದಾರೆ.

ಈ ಹಿಂದೆ ಕೂಡ ಬಾಹುಬಲಿ, ಜವಾನ್ ಸಿನಿಮಾಗಳ ಕಲೆಕ್ಷನ್ ಬಗ್ಗೆ ಹೇಳಿದಂತೆ ಎಲ್ಲಾ ಫೇಕ್ ಎನ್ನುವ ವಾದವನ್ನು ಕೆಲವರು ಮುಂದಿಟ್ಟಿದ್ದರು. ಇದೀಗ ನಿರ್ಮಾಪಕರೇ ಘೋಷಣೆ ಮಾಡಿರುವುದರಿಂದ ಇದನ್ನು ನಂಬಬೇಕೋ ಬೇಡವೋ ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. 'ಕಲ್ಕಿ 2898 AD' ಚಿತ್ರವನ್ನು 2 ಭಾಗಗಳಾಗಿ ನಿರ್ದೇಶಕರು ತೆರೆಗೆ ತರುತ್ತಿದ್ದಾರೆ. ಸಂಪೂರ್ಣ ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಮುಂದಿನ ವರ್ಷ ಸೀಕ್ವೆಲ್ ತೆರೆಗೆ ಬರುವ ನಿರೀಕ್ಷೆಯಿದೆ.

More from Filmibeat

English summary
Netizens claiming kalki 2898 ad box office figures being fake
Read more about: prabhas box office tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X