ಪ್ರಭಾಸ್ 'ಕಲ್ಕಿ 2898 AD'ಟ್ರೈಲರ್‌ಗೆ ಮುಹೂರ್ತ: ಇನ್ನು ಕೆಲವೇ ದಿನಗಳು ಬಾಕಿ

By ಫಿಲ್ಮಿಬೀಟ್ ಡೆಸ್ಕ್

ಪ್ರಭಾಸ್ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಲ್ಕಿ 2898 AD' ಬೇಜಾನ್ ಸದ್ದು ಮಾಡುತ್ತಿದೆ. ಈಗಾಗಲೇ ಈ ಸಿನಿಮಾಗಾಗಿ ನಿರ್ಮಿಸಿರುವ ವಿಶೇಷ ವಾಹನ ಬುಜ್ಜಿ ದಕ್ಷಿಣ ಭಾರತದಲ್ಲೆಲ್ಲ ಸಂಚಾರ ಮಾಡಿ ಸದ್ದು ಮಾಡುತ್ತಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಈ ಸಿನಿಮಾದಲ್ಲಿ ಭೈರವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿಕ್ಕ ತುಣುಕುಗಳನ್ನು ನೋಡಿದವರಿಗೆ 'ಕಲ್ಕಿ 2898 AD'ಯ ಟ್ರೈಲರ್ ನೋಡಬೇಕು ಅಂತ ಹಲವು ದಿನಗಳಿಂದ ಕಾದು ಕುಳಿತಿದ್ದರು. ಆ ಫ್ಯಾನ್ಸ್‌ಗೆ ಖುಷಿ ವಿಷಯವೊಂದನ್ನು ನೀಡಿದೆ. ಭಾರತದ ಅತೀ ದುಬಾರಿ ವೆಚ್ಚದ ಸಿನಿಮಾ 'ಕಲ್ಕಿ 2898 AD' ಸಿನಿಮಾ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

Prabhas starrer Kalki 2898 AD movie trailer launch date fix

ಬುಜ್ಜಿ ಹಾಗೂ ಭೈರವನ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಟ್ರೈಲರ್ ನೋಡುವುದಕ್ಕೆ ಕೇವಲ ತೆಲುಗು ಪ್ರೇಕ್ಷಕರು ಅಷ್ಟೇ ಅಲ್ಲದೆ ಇಡೀ ದೇಶವೇ 'ಕಲ್ಕಿ 2898 AD' ಸಿನಿಮಾ ಟ್ರೈಲರ್‌ಗಾಗಿ ಎದುರು ನೋಡುತ್ತಿದೆ. ಆ ದಿನವೀಗ ಸಮೀಪ ಬಂದಿದೆ.

ಒಂದರ ಹಿಂದೊಂದು ವಿಶೇಷತೆಗಳನ್ನು ಹೊತ್ತು ಬರುತ್ತಿರುವ ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬಂದಿದೆ. ಕಲ್ಕಿ ಸಿನಿಮಾ ತನ್ನ ಸ್ಟಾರ್ ಕಾಸ್ಟ್‌ನಲ್ಲೂ ಕುತೂಹಲ ಮೂಡಿಸಿದೆ. ಸದ್ಯ ಟ್ರೈಲರ್‌ ಮೂಲಕ 'ಕಲ್ಕಿ 2898 AD' ಸಿನಿಮಾದ ಮತ್ತಷ್ಟು ರೋಚಕತೆ ಹೆಚ್ಚಿಸಲು ಚಿತ್ರತಂಡ ಸಜ್ಜಾಗಿದೆ. ಜೂನ್‌ 10ರಂದು ಹಲವು ಭಾಷೆಗಳಲ್ಲಿ 'ಕಲ್ಕಿ 2898 AD' ಸಿನಿಮಾದ ಟ್ರೈಲರ್‌ ಬಿಡುಗಡೆ ಆಗಲಿದೆ.

ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿದ್ದಾರೆ. 'ಕಲ್ಕಿ 2898 AD'ಸಿನಿಮಾದ ಟ್ರೇಲರ್‌ ಜೂನ್ 10ರಂದು ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿರುವ ಬಿ&ಬಿ ಅಂದರೆ, ಬುಜ್ಜಿ ಮತ್ತು ಭೈರವ ಸಿರೀಸ್‌ ಮೂಲಕ ಇನ್ನಷ್ಟು ಕುತೂಹಲ ಮೂಡಿಸಿದೆ. ನಿರ್ದೇಶಕ ನಾಗ್ ಅಶ್ವಿನ್‌ ಆಕ್ಷನ್ ಕಟ್ ಹೇಳಿದ್ದು, ಮತ್ತಷ್ಟು ಕ್ಯೂರಿಯಾಸಿಟಿ ಮೂಡಿಸುವುದಕ್ಕೆ ಮುಂದಾಗಿದ್ದಾರೆ.

'ಕಲ್ಕಿ 2898 AD' ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಹೊಸ ಪೋಸ್ಟರ್‌ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಘೋಷಿಸಿದೆ. ಭೈರವನ ಅವತಾರದಲ್ಲಿ ಪ್ರಭಾಸ್ ಸೂಪರ್‌ ಹೀರೋ ಲುಕ್ ಕೊಟ್ಟಿದ್ದಾರೆ.‌ ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಜಗತ್ತಿನಾದ್ಯಂತ ಈ ಸಿನಿಮಾ ಜೂನ್‍ 27ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Prabhas starrer Kalki 2898 AD movie trailer launch date fix
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X