Kalki 2898 AD Release Trailer: ವಿಷ್ಯುವಲ್ ಟ್ರೀಟ್.. 'ಕಲ್ಕಿ' ಹೊಸ ಟ್ರೈಲರ್ ನೋಡಿದ್ರಾ?

ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಿಡುಗಡೆಗೆ 4 ದಿನ ಮಾತ್ರ ಬಾಕಿಯಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಇದು. ಆದರೆ ರಿಲೀಸ್ ಡೇಟ್ ಹತ್ತಿರವಾದರೂ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಲಿಲ್ಲ. ಇದೀಗ ಮತ್ತೊಂದು ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡ ಕುತೂಹಲ ಮೂಡಿಸಿದೆ.

ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್‌ ಫಿಕ್ಷನ್ ಫ್ಯಾಂಟಸಿ ಸಿನಿಮಾ 'ಕಲ್ಕಿ 2898 AD'. ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಹಾಗೂ ಕಮಲ್ ಹಾಸನ್ ರೀತಿಯ ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೊಸ ಟ್ರೈಲರ್ ನೋಡಿ ಸಿನಿರಸಿಕರು ಬೆರಗಾಗಿದ್ದಾರೆ. ಹೈವೋಲ್ಟೇಜ್ ವಿಷ್ಯುವಲ್ಸ್ ಜೊತೆ ಹಾಲಿವುಡ್ ಸಿನಿಮಾಗಳನ್ನು ಕಲ್ಕಿ ಕಣ್ಮುಂದೆ ತಂದಿದ್ದಾನೆ.

Prabhas starrer Kalki 2898 AD Release Trailer raises hype

'ಅವರನ್ನು ಹುಡುಕುವ ಸಮಯ ಬಂದಿದೆ' ಎಂದು ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಬ್ ಹೇಳುವ ಡೈಲಾಗ್‌ನೊಂದಿಗೆ ಟ್ರೇಲರ್‌ ಶುರುವಾಗುತ್ತದೆ. ಭಗವಂತನ ಒಳಗೆ ಇಡೀ ಸೃಷ್ಟಿಯೇ ಇರುತ್ತದೆಯಂತೆ. ಆದರೆ ನಿನ್ನ ಗರ್ಭದಲ್ಲಿ ಭಗವಂತನೇ ಇದ್ದಾನೆ ಎಂದು ದೀಪಿಕಾಗೆ ಅಮಿತಾಬ್ ಹೇಳುವ ಡೈಲಾಗ್ ಕುತೂಹಲ ಮೂಡಿಸುತ್ತದೆ. ಹಾಗಾಗಿ ದೀಪಿಕಾಗೆ ಜನಿಸುವವನೇ ಕಲ್ಕಿ ಎನ್ನುವುದು ಅರ್ಥವಾಗುತ್ತದೆ.

ಇತ್ತ ಕಲ್ಕಿ ಹುಟ್ಟುವುದನ್ನು ತಡೆಯಲು ಕಾಂಪ್ಲೆಕ್ಸ್‌ನಲ್ಲಿ ಕಮಾಂಡರ್ ಪ್ರಯತ್ನಿಸುತ್ತಿರುತ್ತಾನೆ . ನಾನು ಕಾಪಾಡುತ್ತೇನೆ ಎಂದು ಅಶ್ವಥಾಮನಾಗಿ ಅಮಿತಾಬ್ ಮುಂದೆ ಬರುವುದನ್ನು ನೋಡಬಹುದು. ಚೆನ್ನಾಗಿ ಸಂಪಾದಿಸಿ ಕಾಂಪ್ಲೆಕ್ಸ್‌ಗೆ ಹೋಗಬೇಕೆನ್ನುವುದು ಭೈರವ(ಪ್ರಭಾಸ್)ನ ಮಹದಾಸೆ. ಹಾಗಾಗಿ ದೀಪಿಕಾನ ಹಿಡಿದುಕೊಡುವ ಟಾಸ್ಕ್‌ ಅನ್ನು ಭೈರವ ತೆಗೆದುಕೊಳ್ಳುತ್ತಾನೆ. ಆದರೆ ಆಕೆಯ ಬೆಂಬಲ್ಲೆ ಅಶ್ವತ್ಥಾಮ ನಿಲ್ಲುತ್ತಾನೆ. ಮುಂದೆ ಭೈರವ ಹಾಗೂ ಅಶ್ವಥಾಮ ನಡುವ ಘನಘೋರ ಯುದ್ಧವೇ ನಡೆಯುತ್ತದೆ.

ಕಾಶಿ, ಕಾಂಪ್ಲೆಕ್ಸ್ ಹಾಗೂ ಶಂಬಲ ಎನ್ನುವ ಮೂರು ಬೇರೆ ಬೇರೆ ಲೋಕಗಳಲ್ಲಿ 'ಕಲ್ಕಿ 2898 AD' ಚಿತ್ರದ ಕಥೆ ನಡೆಯುತ್ತದೆ. ಅದಕ್ಕೆ ಅದ್ಧೂರಿ ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಗ್ರಾಫಿಕ್ಸ್ ಬಳಸಿ ಮತ್ತಷ್ಟು ರೋಚಕವಾಗಿ ಚಿತ್ರೀಕರಣ ಮಾಡಲಾಗಿದೆ. ಅಶ್ವತ್ಥಾಮನನ್ನು ಸೋಲಿಸಲು ಭೈರವನು ಬುಜ್ಜಿ ಸಹಾಯ ತೆಗೆದುಕೊಳ್ಳುತ್ತಾನೆ. 'ರೋಬೊ' ಚಿತ್ರದಲ್ಲಿ ಚಿಟ್ಟಿ ವಿವಿಧ ಆಕಾರಗಳಲ್ಲಿ ಎದುರಾಳಿಗಳ ವಿರುದ್ಧ ಸಮರಕ್ಕೆ ನಿಲ್ಲುವಂತೆ ಇಲ್ಲಿ ಬುಜ್ಜಿ ಆರ್ಭಟ ನೋಡಬಹುದು.

ಮಹಾಭಾರತದ ಅಂತ್ಯದಲ್ಲಿ ಕಲಿಯುಗದ ಅಂತ್ಯದವರೆಗೆ ಏನೆಲ್ಲಾ ಆಯಿತು ಎನ್ನುವ ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಹಾಗಾಗಿ ಅಶ್ವತ್ಥಾಮನ ವೃತ್ತಾಂತವನ್ನು ಹೇಳಲು ಮಹಾಭಾರತದ ಕಥೆಯನ್ನು ಕೊಂಚ ಹೇಳಲಾಗುತ್ತಿದೆ. ಹೊಸ ಟ್ರೈಲರ್‌ನಲ್ಲಿ ಮಹಾಭಾರತದ ಕುರುಕ್ಷೇತ್ರ ರಣಾಂಗದ ಝಲಕ್ ಕೂಡ ಇದೆ. ವಿಚಿತ್ರ ಅವತಾರದಲ್ಲಿ ಕಮಲ್ ಹಾಸನ್‌ನ ಕಾಣಿಸಿಕೊಂಡಿದ್ದಾರೆ.

Prabhas starrer Kalki 2898 AD Release Trailer raises hype

"ಎಷ್ಟೇ ಯುಗಗಳಾದರೂ ಎಷ್ಟೇ ಅವಕಾಶಗಳನ್ನು ಕೊಟ್ಟರೂ ಮನುಷ್ಯ ಬದಲಾಗಲ್ಲ, ಬದಲಾಗೋದು ಇಲ್ಲ" ಎಂದು ಕಮಲ್ ಪಾತ್ರ ಹೇಳುವ ಡೈಲಾಗ್ ಗಮನ ಸೆಳೆಯುತ್ತದೆ. ಕಲಿಪುರುಷನ ಪ್ರಭಾವದಿಂದ ಜಗತ್ತಿನಲ್ಲಿ ಅನೇಕ ಅನಾಚಾರಗಳು ಸಂಭವಿಸುತ್ತವೆ. ಕೆಲವರು ಅಸಹಾಯಕರಾಗಿ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಸಹಾಯ ಮಾಡುವವರು ಯಾರು ಎನ್ನುವುದನ್ನು ತೆರೆಮೇಲೆ ನೋಡಬೇಕು. ಅಂದಹಾಗೆ 'ಕಲ್ಕಿ 2898 AD' ಸಿನಿಮಾ ಸೀಕ್ವೆಲ್ ಆಗಿ ಬರಲಿದ್ದು ಇದು ಮೊದಲ ಭಾಗ ಅಷ್ಟೇ ಎನಿಸುವಂತಿದೆ.

ಜೂನ್ 27ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕಲ್ಕಿ 2898 AD' ಸಿನಿಮಾ ತೆರೆಗೆ ಬರಲಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. 'ಸಲಾರ್' ಬಳಿಕ ಕಲ್ಕಿ ಆಗಿ ಪ್ರಭಾಸ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಬಾಕ್ಸಾಫೀಸ್ ಗಳಿಕೆ ಮೇಲೆಯೂ ನಿರೀಕ್ಷೆಯಿದೆ.

More from Filmibeat

English summary
Ahead of the Kalki 2898 AD release, Team unveils second trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X