'ಕಲ್ಕಿ 2898 AD' ಮೆಗಾ ಈವೆಂಟ್, ದಿಗ್ಗಜರ ಸಮಾಗಮ, ಡಿಟೈಲ್ಸ್

ಬಹುನಿರೀಕ್ಷಿತ 'ಕಲ್ಕಿ 2898 AD' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ರಭಾಸ್ ಹೀರೊ ಆಗಿ ನಟಿಸಿರುವ ಈ ಸೈನ್ಸ್ ಫಿಕ್ಷನ್ ಚಿತ್ರಕ್ಕೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಶ್ವಿನಿ ದತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್‌ರಂತಹ ಸೂಪರ್ ಸ್ಟಾರ್‌ಗಳು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಕಲ್ಕಿ 2898 AD' ಸಿನಿಮಾ ತೆರೆಗೆ ಬರಲಿದೆ. ಜೂನ್ 27ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಭರ್ಜರಿ ಪ್ರಮೋಷನ್ ಪ್ಲ್ಯಾನ್ ಮಾಡಲಾಗುತ್ತಿದೆ. ಅದ್ಯಾಕೋ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡುವಲ್ಲಿ ವಿಫಲವಾಗಿದೆ.

ಇದೀಗ ಮುಂಬೈ, ಅಮರಾವತಿ, ಚೆನ್ನೈನಲ್ಲಿ ದೊಡ್ಡ ಈವೆಂಟ್, ಪ್ರೆಸ್‌ಮೀಟ್ ಮಾಡಿ 'ಕಲ್ಕಿ 2898 AD' ಪ್ರಮೋಷನ್ ಮಾಡಲು ಚಿತ್ರತಂಡ ಮುಂದಾಗಿದೆ. ಜೂನ್ 23ಕ್ಕೆ ಆಂಧ್ರದ ಅಮರಾವತಿಯಲ್ಲಿ ದೊಡ್ಡಮಟ್ಟದ ಈವೆಂಟ್ ಮಾಡಲು ಸಿದ್ಧತೆ ನಡೀತಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ರಜನಿಕಾಂತ್, ಚಿರಂಜೀವಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮುಖ್ಯ ಅತಿಥಿಗಳಾಗಿ ಆಗಮಿಸುವ ನಿರೀಕ್ಷೆಯಿದೆ.

ಮತ್ತೊಂದು ಟ್ರೈಲರ್ ರಿಲೀಸ್ ಮಾಡಿ ಕೊನೆ ಕ್ಷಣದಲ್ಲಿ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಲು ಚಿತ್ರತಂಡ ಮುಂದಾಗಿದೆ. ಹಾಲಿವುಡ್ ಶೈಲಿಯಲ್ಲಿ 'ಕಲ್ಕಿ 2898 AD' ಸಿನಿಮಾ ಮೂಡಿ ಬಂದಿದೆ. ಆದರೆ ನಮ್ಮ ನೇಟಿವಿಟಿಗೆ ಸೆಟ್ ಆಗುವಂತೆ ಕಾಣುತ್ತಿಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಇನ್ನು ಚಿತ್ರದಲ್ಲಿ ಪ್ರಭಾಸ್ ಭೈರವ ಆಗಿ ಅಬ್ಬರಿಸಲಿದ್ದಾರೆ. ಅಶ್ವತ್ಥಾಮನ ಪಾತ್ರದಲ್ಲಿ ಬಿಗ್‌ಬಿ ಕಾಣಿಸಿಕೊಂಡಿದ್ದಾರೆ. ದ್ವಾಪರ ಯುಗದಿಂದ ಶುರುವಾಗುವ ಸಿನಿಮಾ ಕಥೆ ಕಲಿಯುಗದಲ್ಲಿ ಇನ್ನು ಹಲವು ವರ್ಷಗಳ ಕಾಲ ಮುಂದುವರೆಯಲಿದೆ.

ಚಿತ್ರದಲ್ಲಿ ರಾಜಮೌಳಿ, ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ಜನ ನಿರ್ದೇಶಕರು, ನಟರು ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನಲಾಗ್ತಿದೆ. 3ಡಿ, ಐಮ್ಯಾಕ್ಸ್ ಫಾರ್ಮೆಟ್‌ಗಳಲ್ಲಿ ಕೂಡ 'ಕಲ್ಕಿ 2898 AD' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ವಿದೇಶಗಳಲ್ಲಿ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಶೀಘ್ರದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಭಾರತದಲ್ಲಿ ಶುರುವಾಗಲಿದೆ. 'ಸಲಾರ್' ಸಿನಿಮಾ ತಕ್ಕಮಟ್ಟಿಗೆ ಗೆದ್ದು ಪ್ರಭಾಸ್‌ಗೆ ಜೋಶ್ ತುಂಬಿದೆ. ಇದೀಗ 'ಕಲ್ಕಿ' ಸರದಿ.

Prabhas starrer Kalki 2898 ad team planned for massive promotion with huge event in amaravathi

ನಾಗ್ ಅಶ್ವಿನ್ ನಿರ್ದೇಶನದ 'ಮಹಾನಟಿ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ 'ಕಲ್ಕಿ 2898 AD' ಬಗ್ಗೆ ಕುತೂಹಲ ಮೂಡಿದೆ. ಇನ್ನು 500 ಕೋಟಿ ರೂ. ಬಜೆಟ್ ಕಮಲ್, ಅಮಿತಾಬ್, ದೀಪಿಕಾ ಜೊತೆಯಾಗಿರುವುದು ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಆದರೆ ಚಿತ್ರದ ಸ್ಯಾಂಪಲ್ಸ್ ಯಾಕೋ ಕಿಕ್ ಕೊಡುತ್ತಿಲ್ಲ. ಇದ್ದಿದ್ದರಲ್ಲಿ ಬುಜ್ಜಿ ಟೀಸರ್ ಹಾಗೂ ಇತ್ತೀಚೆಗೆ ಬಂದ ಟೀಸರ್ ತಕ್ಕಮಟ್ಟಿಗೆ ಸದ್ದು ಮಾಡಿತ್ತು.

ಚಿತ್ರದಲ್ಲಿ ನಾಯಕ ಭೈರವನ ಜೊತೆ ಬುಜ್ಜಿ ಎನ್ನುವ ರೋಬೊ ಪಾತ್ರವೂ ಇರಲಿದೆ. ಆ ಪಾತ್ರದಲ್ಲಿ ತೆಲುಗಿನಲ್ಲಿ ಕೀರ್ತಿ ಸುರೇಶ್ ವಾಯ್ಸ್ ಕೊಟ್ಟಿದ್ದಾರೆ. ಇನ್ನುಳಿದಂತೆ ಆಯಾ ಭಾಷೆಯಲ್ಲಿ ಬೇರೆ ಬೇರೆ ನಟಿಯರಿಂದ ಡಬ್ ಮಾಡಿಸುವ ಪ್ರಯತ್ನ ನಡೀತಿದೆ. ಬುಜ್ಜಿಗೆ ವಿಶೇಷವಾದ ಕಾರ್ ಮಾದರಿಯ ವಾಹನವೂ ಇದೆ. ಇದನ್ನು ಏರಿ ಭೈರವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ. ಅದಕ್ಕಾಗಿ 7 ಕೋಟಿ ರೂ. ವೆಚ್ಚದಲ್ಲಿ 3 ಚಕ್ರಗಳ ವಾಹನ ಡಿಸೈನ್ ಮಾಡಿಸಲಾಗಿದೆ. ಅದನ್ನು ಇದೀಗ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ.

More from Filmibeat

English summary
tollywood, kollywood stars grace Kalki 2898 ad pre-release event
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X