Salaar Trailer: ಸ್ನೇಹಿತನ ಸಾಮ್ರಾಜ್ಯ ಉಳಿಸಲು ಒನ್ ಮ್ಯಾನ್ ಆರ್ಮಿಯಾದ 'ಪ್ರಭಾಸ್'!

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸಲಾರ್‌ಗೆ ಅಗ್ರಸ್ಥಾನ. ಒಂದೇ ಒಂದು ಅಪ್‌ಡೇಟ್ ಸಿಕ್ಕರೆ ಸಾಕು ಎನ್ನುತ್ತಿದ್ದ ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಪ್ರಪಂಚ ಹಬ್ಬದೂಟ ನೀಡಿದೆ. ಬರೋಬ್ಬರಿ 3:46 ನಿಮಿಷಗಳ ಸಲಾರ್ ಭಾಗ ಒಂದರ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರಭಾಸ್ ಅಬ್ಬರ ಕಣ್ತುಂಬಿಕೊಳ್ಳಬಹುದು.

ಫುಲ್ ಆಕ್ಷನ್ ಸಿನಿಮಾವಾಗಿರುವ ಸಲಾರ್‌ನಲ್ಲಿ ರಕ್ತಕ್ಕೆ ಬೆಲೆಯೇ ಇಲ್ಲ. ಕೆಜಿಎಫ್ ನಿರ್ಮಾಪಕರ ಸಿನಿಮಾದಲ್ಲಿ ಪ್ರಭಾಸ್ ಮತ್ತು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಅಬ್ಬರಿಸಿದ್ದಾರೆ. ನಟ ಜಗಪತಿ ಬಾಬು, ಗರುಡ ಖ್ಯಾತಿಯ ರಾಮಚಂದ್ರ, ಶ್ರುತಿ ಹಾಸನ್ ನಟಿಸಿದ್ದು, ಟ್ರೈಲರ್‌ನಲ್ಲಿ ಬಹುಪಾಲನ್ನು ಪೃಥ್ವಿರಾಜ್ ಆವರಿಸಿಕೊಂಡಿದ್ದಾರೆ.

Prabhas starrer, Prashant Neel directorial Part 1 – Ceasefire trailer out


ಸಲಾರ್ ಟ್ರೈಲರ್‌ನಲ್ಲಿ ಏನಿದೆ...?

ಸಲಾರ್ ಟ್ರೈಲರ್ ಇಬ್ಬರು ಸ್ನೇಹಿತರ ಕಥೆ ಎಂಬುದನ್ನು ಸಾರಿ ಹೇಳುತ್ತಿದೆ. ಟ್ರೈಲರ್ ಶುರುವಾಗುವುದೇ ಇಬ್ಬರ ಮೂಲಕ. ಸ್ನೇಹಿತನಿಗಾಗಿ ಏನಾದರೂ ಮಾಡುವ 'ದೇವ'ನ ಕೋಪ, ತ್ಯಾಗದಿಂದ ಅವರ ಸ್ನೇಹ ಅರಿವು ಮೂಡಿಸುವ ಪ್ರಯತ್ನ ಪ್ರಶಾಂತ್ ನೀಲ್ ಮಾಡಿಸಿದ್ದಾರೆ. ದೂರದ ಒಂದು ಪ್ರದೇಶದಲ್ಲಿ ಖಾನ್ಸಾರಾ ಎಂಬ ಸಾಮ್ರಾಜ್ಯದ ಸುತ್ತ ಕಥೆ ಕಟ್ಟಲಾಗಿದೆ.

ತನ್ನ ನಂತರ ತನ್ನ ಮಗ ವರದ ರಾಜ ಮನ್ನಾರ್ ಈ ಕುರ್ಚಿಯಲ್ಲಿ ಕೂರಬೇಕು ಎಂಬ ಆಸೆ ಹೊತ್ತ ರಾಜ ಮನ್ನಾರ್ ಮತ್ತು ಈ ಸಾಮ್ರಾಜ್ಯದ ಕುರ್ಚಿಗಾಗಿ ನಡೆಯುವ ಕುತಂತ್ರವನ್ನು ಟ್ರೈಲರ್‌ನಲ್ಲಿ ನೋಡಬಹುದು. ತನ್ನ ಸಾಮ್ರಾಜ್ಯಕ್ಕೆ ಎಲ್ಲಾ ಕಡೆಯಿಂದಲೂ ವವಿರೋಧಿಗಳು ದಾಳಿ ಮಾಡಿದಾಗ ಸ್ನೇಹಿತನನ್ನು ಕರೆಯುವ ವರದ. ವರದನ ಮೈ ಮುಟ್ಟಲು ಬಿಡದೇ ಎಲ್ಲರನ್ನು ಸದೆ ಬಡಿಯುವ ಒನ್ ಮ್ಯಾನ್ ಆರ್ಮಿಯಾಗಿ ದೇವ ಕಾಣಿಸಿಕೊಂಡಿದ್ದಾರೆ.

Prabhas starrer, Prashant Neel directorial Part 1 – Ceasefire trailer out

ಇಲ್ಲಿಯೂ ಹಿಂಸೆ ಎನ್ನುವುದು, ರಕ್ತಪಾತ ಕಣ್ಣೂ ಕುಕ್ಕುವಂತಿದೆ. ಕೆಜಿಎಫ್ ಮಾದರಿಯಲ್ಲಿಯೇ ಕಪ್ಪು- ಬಿಳುಪಿನ ಆಟವಿದೆ. ಪ್ರಶಾಂತ್ ನೀಲ್ ಗರಡಿಯಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಬ್ಬರಿಸಿದ್ದಾರೆ. ಸ್ನೇಹಿತನ ಮೇಲೆ ಒಂದು ಗೆರೆ ಬೀಳದಂತೆ ಕಾಯುವ ದೇವನ ಖಡಕ್ ಸಂಭಾಷಣೆಯಿದೆ.


ಉಗ್ರಂ ನೆನಪಿಸುವ ಸಲಾರ್!

ಸಲಾರ್ ಟ್ರೈಲರ್‌ ನೋಡಿದ ಕನ್ನಡಿಗರಿಗೆ ಕೆಲವು ಡೈಲಾಗ್‌ಗಳು ಎಲ್ಲೋ ಕೇಳಿದ ಹಾಗೆ ಅನ್ನಿಸುತ್ತದೆ. ಈ ಹಿಮದೆ ಕನ್ನಡದಲ್ಲಿ ಬಂದಿದ್ದ ಪ್ರಶಾಂತ್ ನೀಲ್ ಅವರ ನೆಚ್ಚಿನ ಸಿನಿಮಾ 'ಉಗ್ರಂ' ಛಾಯೆ ಕಾಣಿಸುತ್ತದೆ. ಆದರೆ, ಉಗ್ರಂನಲ್ಲಿ ಇಷ್ಟು ಹಿಂಸೆ ಇರಲಿಲ್ಲ ಎನ್ನಬಹುದು, ಕಥೆಯನ್ನು ಕೊಂಡ ಬದಲಿಸಿರುವ ಹಾಗಿದೆ. ಆದರೆ, ಇದು ಕೂಡ ಇಬ್ಬರು ಸ್ನೇಹಿತರ ಕಥೆಯೇ.

ನಟ ಶ್ರೀ ಮುರಳಿಗೆ ಹೊಸ ಫೇಮ್ ಕೊಟ್ಟ 'ಉಗ್ರಂ' ಕತೆಯನ್ನೇ ಕೊಂಚ ಬದಲಿಸಿ ಬಹಳ ದೊಡ್ಡದಾಗಿ 2 ಭಾಗಗಳಾಗಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ ಎಂದು ಈ ಹಿಂದೆಯೇ ಹಲವು ವದಂತಿಗಳಿದ್ದವು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಸಲಾರ್ ಇಬ್ಬರು ಸ್ನೇಹಿತರು ಶತ್ರುಗಳಾಗುವ ಕಥೆ ಎಂದಿದ್ದರು.

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' 5 ಭಾಷೆಗಳಲ್ಲಿ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ. ನಟ ಯಶ್ ನಟನೆಯ ಪ್ಯಾನ್ ಇಂಡಿಯನ್ ಸಿನಿಮಾ 'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ ಸಲಾರ್ ಚಿತ್ರಕ್ಕೂ ಕೆಲಸ ಮಾಡಿದೆ.

ಇನ್ನು, "ಸಲಾರ್ ಇಬ್ಬರು ಸ್ನೇಹಿತರು ದೊಡ್ಡ ಶತ್ರುಗಳಾಗಿ ಬದಲಾಗುವ ಕತೆ. ಸ್ನೇಹವೇ ಚಿತ್ರದ ಮುಖ್ಯವಾದ ಅಂಶ. ಇಬ್ಬರು ಆತ್ಮೀಯ ಸ್ನೇಹಿತರ ಜರ್ನಿಯನ್ನು ನಾವು ಎರಡು ಭಾಗಗಳಲ್ಲಿ ಹೇಳುತ್ತೇವೆ. ನಾವು ಸೃಷ್ಟಿಸಿರುವ 'ಸಲಾರ್' ಪ್ರಪಂಚದ ಝಲಕ್ ಅನ್ನು ಪ್ರೇಕ್ಷಕರಿಗೆ ಟ್ರೈಲರ್‌ನಲ್ಲಿ ತೋರಿಸಲಿದ್ದೇವೆ" ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

More from Filmibeat

English summary
Prabhas starrer, Prashant Neel directorial Salaar trailer out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X