salaar: 'ಕೆಜಿಎಫ್ 2' ಬೆನ್ನಲ್ಲೇ 'ಸಲಾರ್'ಗೆ ಮುಹೂರ್ತ ಫಿಕ್ಸ್!

ಸದ್ಯ ಕನ್ನಡದ 'ಕೆಜಿಎಫ್ 2' ಚಿತ್ರ ರಿಲೀಸ್ ಆಗಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ವಿಶ್ವದಾದ್ಯಂತ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್‌ಗೆ ಜನ ಜೈ ಕಾರ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ನೀಲ್ ಮುಂದಿನ ಚಿತ್ರದ ಬಗ್ಗೆ ಸುದ್ದಿ ಪ್ರಕಟವಾಗಿದೆ.

Recommended Video

KGF 2 Leaked ಸಿನಿಮಾಗೆ ಪೈರಸಿ ಕಾಟ | Yash | Prashanth Neel | Public opinoin

ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಚಿತ್ರ ಕನ್ನಡ ಚಿತ್ರ ಅಲ್ಲ. ಪ್ರಭಾಸ್‌ಗಾಗಿ ತೆಲುಗು ಚಿತ್ರವನ್ನು ಮಾಡುತ್ತಾ ಇದ್ದಾರೆ. ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಕನ್ನಡದಲ್ಲೂ ಕೂಡ 'ಸಲಾರ್' ರಿಲೀಸ್ ಆಗಲಿದೆ.

ಸದ್ಯ ಸಲಾರ್ ಬಳಗದಿಂದ ಹೊಸ ಸಿದ್ದಿ ಬಂದಿದೆ.‌ ಸಲಾರ್ ಈಗಾಗಲೇ ತಡವಾಗಿದೆ. ಇನ್ನು ಹೆಚ್ಚು ತಡಮಾಡಲು ಚಿತ್ರತಂಡ ಸಿದ್ಧವಿಲ್ಲ‌. 'ಕೆಜಿಎಫ್ 2' ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿದ್ದ ಪ್ರಶಾಂತ್ ನೀಲ್.‌ಈಗ 'ಸಲಾರ್' ಚಿತ್ರದ ಕಡೆಗೆ ಮುಖ ಮಾಡಿದ್ದಾರೆ. 'ಸಲಾರ್‌' ಟೀಸರ್ ರಿಲೀಸ್ ಮಾಡಲು ಚಿತ್ರತಂಡ ತಯಾರಾಗಿದೆ. ಟೀಸರ್‌ಗೆ ತಯಾರಿ ನಡೆಯುತ್ತಿದ್ದು,‌ ಮುಂದಿನ ತಿಂಗಳು ಚಿತ್ರ‌ದ ಟೀಸರ್ ರಿಲೀಸ್ ಆಗಲಿದೆ‌‌.

Prabhas Starrer, Prashanth Neel Directional Salaar Film Teaser In May 2022

'ಕೆಜಿಎಫ್ 2‌' ಚಿತ್ರದ ನಂತರ ಪ್ರಶಾಂತ್ ನೀಲ್‌ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ 'ಸಲಾರ್' ಮೇಲಿನ‌ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ‌ಈ‌‌ ಚಿತ್ರ ಪ್ರಭಾಸ್ ಸಿನಿಮಾ ವೃತ್ತಿ ಬದುಕಿನಲ್ಲಿ ಮತ್ತೊಂದು ಉತ್ತಮ‌ ಚಿತ್ರ ಆಗಲಿದೆ ಎನ್ನುವ ನಿರೀಕ್ಷೆ ಇದೆ. 'ಸಲಾರ್' ಬಳಿಕ, 'ಸಲಾರ್ 2' ಚಿತ್ರವನ್ನೂ ಮಾಡಲಿದ್ದಾರೆ ಪ್ರಶಾಂತ್ ನೀಲ್. ಅತ್ತ ಆದಿ ಪುರುಷ್ ಚಿತ್ರವನ್ನು ಮುಗಿಸಿದ ಪ್ರಭಾಸ್, 'ಸಲಾರ್' ಉಳಿದ ಭಾಗವನ್ನು ಮಾಡಲು ತಯಾರಿ ನಡೆಸಿದ್ದಾರೆ. ಈ ಗ್ಯಾಪ್‌ನಲ್ಲಿ ಪ್ರಾಜೆಕ್ಟ್-ಕೆ ಚಿತ್ರದ ಶೂಟಿಂಗ್‌ನಲ್ಲೂ ಕೂಡ ಪ್ರಭಾಸ್ ಭಾಗಿ ಆಗಿದ್ದಾರೆ.

Prabhas Starrer, Prashanth Neel Directional Salaar Film Teaser In May 2022

'ಸಲಾರ್' ಚಿತ್ರದಲ್ಲಿ ಪ್ರಭಾಸ್‌ಗೆ ನಟಿ ಶೃತಿ ಹಾಸನ್ ಜೊತೆಯಾಗಿದ್ದಾರೆ. ಈ ಚಿತ್ರ ಕನ್ನಡದ 'ಉಗ್ರಂ' ರಿಮೇಕ್ ಎಂದು ಹೇಳಲಾಗುತ್ತಿದೆ. ಆದರೆ ಅದನ್ನು ಚಿತ್ರತಂಡ ಖಚಿತ ಪಡಿಸಿಲ್ಲ. ಸದ್ಯ ಸಿನಿಮಾ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರದ ರಿಲೀಸ್ ದಿನಾಂಕವನ್ನು ಸದ್ಯದಲ್ಲೇ ಚಿತ್ರತಂಡ ರಿವೀಲ್ ಮಾಡಲಿದೆ.

More from Filmibeat

English summary
Prabhas Starrer, Prashanth Neel Directional Salaar Film Teaser In May 2022, Know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X