'ಸಲಾರ್' ರಿಲೀಸ್ ದಿನಾಂಕ ಪ್ರಕಟ, ಇನ್ನೊಂದು ವರ್ಷ ಕಾಯಲೇ ಬೇಕು!
'ಕೆಜಿಎಫ್ 2' ಚಿತ್ರ ರಿಲೀಸ್ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ 'ಸಲಾರ್'. ಪ್ರಭಾಸ್ ನಾಯಕ ನಟನಾಗಿ ನಟಿಸುತ್ತಿರುವ 'ಸಲಾರ್' ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದು, ಸಿನಿಮಾ ಮೇಲೆ ನಿರೀಕ್ಷೆ ಇದೆ.
'ಸಲಾರ್' ಸಿನಿಮಾದ ಅಪ್ಡೇಟ್‌ಗಾಗಿ ಸಿನಿಪ್ರಿಯರು ಕಾಯುತ್ತಲೇ ಇದ್ದಾರೆ. ಅಂದುಕೊಂಡದ್ದಕ್ಕಿಂತಲೂ ಸಿನಿಮಾ ತಡವಾಗುತ್ತಿದೆ. ಹಾಗಾಗಿ ಚಿತ್ರದ ರಿಲೀಸ್ ಕೂಡ ತಡವಾಗಲಿದೆ. ಸಿನಿಮಾದ ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಆದರೆ ರಿಲೀಸ್ ಯಾವಾಗ ಎನ್ನುವ ಬಗ್ಗೆ ಚಿತ್ರತಂಡ ಪ್ರಕಟ ಮಾಡಿದೆ.
'ಸಲಾರ್' ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುವ ಮೂಲಕ ಪ್ರೇಕ್ಷಕರಿಗೆ ಸಿಹಿ ಸುದ್ದಿ ಕೊಟ್ಟಿದೆ ಸಿನಿಮಾ ತಂಡ. ಹಾಗಿದ್ದರೆಬ ಸಿನಿಮಾ ರಿಲೀಸ್ ಯಾವಾಗ. ಚಿತ್ರದ ಈ ಬಗ್ಗೆ ಕೊಟ್ಟ ಅಪ್ಡೇಟ್ ಏನು ಎನ್ನುವುದನ್ನು ಮುಂದೆ ಓದಿ...

'ಸಲಾರ್'ಗಾಗಿ 1 ವರ್ಷ ಕಾಯಬೇಕು!
ಪ್ರಭಾಸ್ ಇತ್ತೀಚೆಗೆ ಸಾಲು, ಸಾಲು ಸೋಲು ಕಂಡಿದ್ದಾರೆ. ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಅದ್ಧೂರಿ ಯಶಸ್ಸು ಕಂಡಿದ್ದಾರೆ. ಈ ಜೋಡಿ ಒಂದಾಗಿ ಸಿನಿಮಾ ಮಾಡುತ್ತೆ ಎಂದಾಗಲೆ ಸಾಕಷ್ಟು ನಿರೀಕ್ಷೆ ಮನೆ ಮಾಡಿತ್ತು. ಅಂತೆಯೇ ಪ್ರಭಾಸ್ ಕೂಡ ದೊಡ್ಡದೊಂದು ಯಶಸ್ಸಿಗೆ ಕಾಯುತ್ತಿದ್ದಾರೆ. ಹಾಗಾಗಿ 'ಸಲಾರ್' ಪ್ರಭಾಸ್ ಮುಂದಿನ ಸಿನಿಮಾ ಎನ್ನಲಾಗಿತ್ತು. ಆದರೆ ಅದು ಕಷ್ಟ ಸಾಧ್ಯ. ಯಾಕೆಂದರೆ ಈ ಸಿನಿಮಾ ರಿಲೀಸ್ ಅಗುವುದೆ ಮುಂದಿನ ವರ್ಷದ ಅಂತ್ಯದ ವೇಳೆಗೆ. 'ಸಲಾರ್' ನಿರೀಕ್ಷೆಯಲ್ಲಿ ಇರುವವರು ಇನ್ನು ಒಂದು ವರ್ಷ ಕಾಯಲೇ ಬೇಕು.

2023 ಸೆಪ್ಟೆಂಬರ್ 28ಕ್ಕೆ ಸಲಾರ್!
'ಸಲಾರ್' ಈಗಾಗಲೇ ಹೆಚ್ಚು ತಡವಾಗಿದೆ. ಹಾಗಾಗಿ ಇನ್ನು ಹೆಚ್ಚು ತಡ ಆಗುವುದಿಲ್ಲ ಎನ್ನು ನಿರೀಕ್ಷೆ ಇತ್ತು. ಆದರೆ ಚಿತ್ರಡಂದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿರುವಂತೆ ಇನ್ನು ಒಂದು ವರ್ಷ 'ಸಲಾರ್' ಚಿತ್ರವನ್ನು ತೆರೆಯ ಮೇಲೆ ನೋಡಲು ಕಾಯಲೇ ಬೇಕು. ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಈ ಚಿತ್ರ ತೆರೆಗೆ ಬರಲಿದೆ. 2023 ಸೆಪ್ಟೆಂಬರ್ 28ಕ್ಕೆ 'ಸಲಾರ್' ರಿಲೀಸ್ ದಿನಾಂಕ ಪ್ರಕಟವಾಗಿದೆ. ಇದನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ಅಧಿಕೃತವಗಾಗಿ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟ ಮಾಡಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಅಪ್ಡೇಟ್!
ಅಭಿಮಾನಿಗಳು ಸದಾ ಈ ಚಿತ್ರದ ಬಗ್ಗೆ ಅಪ್ಡೇಟ್ ಕೇಳುತ್ತಲೇ ಇದ್ದರು. ಹಾಗಾಗಿ 'ಸಲಾರ್' ಸಿನಿಮಾ ಬಗ್ಗೆ ಅಧಿಕೃತವಾಗಿ ಹೊಸ ನೀಡುವಂತೆ ಹೊಂಬಾಳೆ ಫಿಲ್ಮ್ಸ್ ಈ ಹಿಂದೆಯೇ ಹೇಳಿಕೊಂಡಿತ್ತು. ಆಗಸ್ಟ್ 15ರಂದು ಅಮೃತ ಮಹೋತ್ಸವದ ಶುಭ ಘಳಿಗೆಯಲ್ಲಿಯೇ 'ಸಲಾರ್' ಸಿನಿಮಾ ಅಪ್‌ಡೇಟ್ ನೀಡುವುದಾಗಿ ಪೋಸ್ಟ್ ಹಂಚಿಕೊಂಡಿತ್ತು. ಅಂತೆಯೇ ಇಂದು (ಆಗಸ್ಟ್ 15)ರಂದು 'ಸಲಾರ್' ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದೆಟ.

ಸಲಾರ್ ಶೂಟಿಂಗ್ ತಡವಾಗಲಿದೆ!
ಈ ಹಿಂದೆ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ್ ಕಿರಗಂದೂರು 'ಸಲಾರ್' ಶೂಟಿಂಗ್ ಆಕ್ಟೋಬರ್‌ಗೆ ಮುಗಿಯಲಿದೆ ಎಂದು ಹೇಳಿದ್ದರು. ಆ ಬಳಿಕ ಪೋಸ್ಟ್ ಪ್ರೊಡಕ್ಷನ್‌ಗೆ ಮುಂದಾದರೂ ಸಿನಿಮಾ ಈ ವರ್ಷದೊಳಗಂತೂ ಮುಗಿಯೋ ಮಾತೇ ಇಲ್ಲ. ಹೀಗಾಗಿ ಈ ಸಿನಿಮಾ ಬಹುಶಃ 2023 ಮಾರ್ಚ್, ಏಪ್ರಿಲ್, ಮೇ ನಲ್ಲಿ ರಿಲೀಸ್ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಮತ್ತಷ್ಟು ಶೂಟಿಂಗ್ ತಡವಾಗುತ್ತಿರುವ ಕಾರಣಕ್ಕೆ ಚಿತ್ರದ ರಿಲೀಸ್ ದಿನಾಂಕ 2023ರ ಸೆಪ್ಟೆಂಬರ್‌ಗೆ ಹೋಗಿದೆ.


Click it and Unblock the Notifications











