For Quick Alerts
  ALLOW NOTIFICATIONS  
  For Daily Alerts

  ಅಬ್ಬಾ.! ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರದ ಕ್ಲೈಮ್ಯಾಕ್ಸ್ ಗೆ ಇಷ್ಟೊಂದು ಕೋಟಿ ಖರ್ಚು ಮಾಡುತ್ತಿದ್ದಾರಾ?

  |

  ತೆಲುಗು ಸಿನಿಮಾದ ಖ್ಯಾತ ನಟ ಪ್ರಭಾಸ್ ಸದ್ಯ ರಾಧೆ ಶ್ಯಾಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತರಾಗಿರುವ ರಾಧೆ ಶ್ಯಾಮ್ ಟೀಂ ಇದೀಗ ಕ್ಲೈಮ್ಯಾಕ್ಸ್ ಸೆರೆಹಿಡಿಯಲು ಸಜ್ಜಾಗಿದೆ.

  ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ಸ್ ಗೆ ಖರ್ಚು ಮಾಡುತ್ತಿರುವ ಹಣ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಬಿಗ್ ಬಜೆಟ್ ಸಿನಿಮಾಗಳ ಕ್ಲೈಮ್ಯಾಕ್ಸ್ ಅಥವಾ ಆಕ್ಷನ್ ದೃಶ್ಯಗಳಿಗೆ ಕೋಟಿ ಕೋಟಿ ಸುರಿಯುವುದು ಸಾಮಾನ್ಯ. ಆದರೆ ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ಸ್ ನ ಖರ್ಚು ಎಲ್ಲಕ್ಕಿಂತ ಹೆಚ್ಚಾಗಿದೆ. ಪ್ರಭಾಸ್ ಸಿನಿಮಾದ ಕ್ಲೈಮ್ಯಾಕ್ಸ್ ನ ಬಜೆಟ್ ಕೇಳಿದ್ರೆ ನಿಜಕ್ಕು ದಂಗುಬಡಿಸುತ್ತದೆ. ಮುಂದೆ ಓದಿ..

  ಚಿತ್ರರಂಗದಲ್ಲಿ 18 ವರ್ಷ ಪೂರೈಸಿದ ಪ್ರಭಾಸ್: ಅಭಿಮಾನಿಗಳಿಂದ ಸಂಭ್ರಮಾಚರಣೆ

  30 ಕೋಟಿ ವೆಚ್ಚದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ

  30 ಕೋಟಿ ವೆಚ್ಚದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ

  ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ನಡೆದಿದೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಿಶೇಷವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ. ಇದರ ಖರ್ಚು ಬರೋಬ್ಬರಿ 30 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಇಟಲಿಯ ಚಿತ್ರೀಕರಣ ಮುಗಿಸಿ ವಾಪಸ್ ಆಗಿರುವ ಸಿನಿಮಾತಂಡ ಇದೀಗ 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೆಟ್ ನಲ್ಲಿ ಕ್ಲೈಮ್ಯಾಕ್ಸ್ ಸೆರೆಹಿಡಿಸಲು ಹೊರಟಿದ್ದಾರೆ.

  ಹಾಲಿವುಡ್ ಸಾಹಸ ನಿರ್ದೇಶಕ ಎಂಟ್ರಿ

  ಹಾಲಿವುಡ್ ಸಾಹಸ ನಿರ್ದೇಶಕ ಎಂಟ್ರಿ

  ಈ ಮೊದಲು ರಾಧೆ ಶ್ಯಾಮ್ ಸಿನಿಮಾದಲ್ಲಿ ಯಾವುದೇ ಫೈಟ್ ದೃಶ್ಯಗಳು ಇರುವುದಿಲ್ಲ, ಪ್ರಭಾಸ್ ಫುಲ್ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಅದ್ದೂರಿಯಾಗಿ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡುತ್ತಿದ್ದಾರೆ. ಕ್ಲೈಮ್ಯಾಕ್ಸ್ ಅಕ್ಷನ್ ದೃಶ್ಯಕ್ಕೆ ಹಾಲಿವುಡ್ ಸಾಹಸ ನಿರ್ದೇಶಕ ನಿಲ್ ಪೊವೆಲ್ ಸಾಹಸ ನಿರ್ದೇಶನ ಮಾಡಲಿದ್ದಾರಂತೆ.

  ಪ್ರಭಾಸ್ 'ಆದಿಪುರುಷ್' ಸಿನಿಮಾದ ಪೋಸ್ಟರ್ ವೈರಲ್

  ತಮಿಳು-ಬಾಲಿವುಡ್ ನಲ್ಲಿ ಕೆಲಸ ಮಾಡಿರುವ ನಿಲ್ ಪೊವೆಲ್

  ತಮಿಳು-ಬಾಲಿವುಡ್ ನಲ್ಲಿ ಕೆಲಸ ಮಾಡಿರುವ ನಿಲ್ ಪೊವೆಲ್

  ಬಾಲಿವುಡ್ ಮಣಿಕರ್ಣಿಕಾ, ತಮಿಳಿನ 2.0 ಸಿನಿಮಾಗಳಲ್ಲಿ ಕೆಲಸ ಮಾಡಿರುವ ನಿಲ್ ಪೊವೆಲ್ ಇದೀಗ ತೆಲುಗಿನ ರಾಧೆ ಶ್ಯಾಮ್ ಸಿನಿಮಾಗೆ ಆಕ್ಷನ್ ದೃಶ್ಯ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಲಿದ್ದಾರೆ,

  3 ಜನ ಒಳ್ಳೆ ಗ್ಲಾಮರ್ ಎಂದು ಕಾಲೆಳೆದ Upendra | Filmibeat Kannada
  ಪೂಜಾ ಹೆಗ್ಡೆ ನಾಯಕಿ

  ಪೂಜಾ ಹೆಗ್ಡೆ ನಾಯಕಿ

  ಅಂದಹಾಗೆ ರಾಧೆ ಶ್ಯಾಮ್ ಸಿನಿಮಾದಲ್ಲಿ ನಟ ಪ್ರಭಾಸ್ ಗೆ ಜೋಡಿಯಾಗಿ ಪೂಜೆ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಿನಿಮಾ ತೆಲುಗು ಸೇರಿದಂತೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ.

  English summary
  Prabhas starrer Radhe Shyam movie climax shot in sets worh 30 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X