For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಅಭಿಮಾನಿಯಿಂದ ನಿನ್ನೆ ಸೂಡೈಡ್ ಲೆಟರ್: ಇಂದು ಚಿತ್ರ ತಂಡದಿಂದ ಬಂತು ಅಪ್ಡೇಟ್

  |

  ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್‌ ಚಿತ್ರದ ಹೊಸ ಅಪ್ಡೇಟ್‌ ನೀಡಿದೆ ಚಿತ್ರ ತಂಡ. ಚಿತ್ರದ ಹಾಡನ್ನು ರಿಲೀಸ್‌ ಮಾಡಲು ಚಿತ್ರ ತಂಡ ಮುಂದಾಗಿದೆ. ಈಗ ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಹೊಸ ಪೋಸ್ಟರ್‌ ಕೂಡ ಹಂಚಿಕೊಂಡಿದೆ ಚಿತ್ರ ತಂಡ. ಇದೇ ನವೆಂಬರ್‌ 15ರಂದು ಚಿತ್ರದ 'ಈ ರಾತಲೆ' ಎನ್ನುವ ಹಾಡು ರಿಲೀಸ್‌ ಆಗುತ್ತಿದೆ.

  ರಾಧೆ ಶ್ಯಾಮ್ ಚಿತ್ರದ ಅಪ್ಡೇಟ್‌ಗಾಗಿ ಪ್ರಭಾಸ್‌ ಅಭಿಮಾನಿಗಳು ಮತ್ತು ಪ್ರೇಕ್ಷಕರು ಕಾಯುತ್ತಿದ್ದರು. ಪ್ರಭಾಸ್‌ ಹುಟ್ಟು ಹಬ್ಬಕ್ಕೆ ಒಂದು ಟೀಸರ್‌ ಮಾತ್ರ ರಿಲೀಸ್‌ ಆಗಿತ್ತು. ಆದರೆ ಅದು ಪ್ರಭಾಸ್‌ ಅಭಿಮಾನಿಗಳಿಗೆ ಸಾಕಾಗಿಲ್ಲ. ಹಾಗಾಗಿ ಟ್ರೇಲರ್ ಅಥವಾ ಹಾಡು ರಿಲೀಸ್‌ಗಾಗಿ ಪ್ರಭಾಸ್‌ ಅಭಿಮಾನಿಗಳು ಕಾಯುತ್ತಿದ್ದರು. ಈಗ ಚಿತ್ರ ತಂಡ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಲು ಸಿದ್ಧವಾಗಿದೆ.

  ಅಭಿಮಾನಿ ಆತ್ಮಹತ್ಯೆ ಪತ್ರದಿಂದ ಎಚ್ಚೆತ್ತ ಚಿತ್ರತಂಡ!

  ಪ್ರಭಾಸ್‌ಗೆ ಸಹಸ್ರಾರು ಅಭಿಮಾನಿಗಳಿದ್ದಾರೆ. ಪ್ರಭಾಸ್ ಅವರನ್ನು ಇಷ್ಟ ಪಟ್ಟು ಫಾಲೋ ಮಾಡುವಂತಹ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಿನಿಮಾ ರಿಲೀಸ್‌ ಆಗಲು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ನಿನ್ನೆಯಷ್ಟೇ ಪ್ರಭಾಸ್ ಅಭಿಮಾನಿಯೊಬ್ಬ ರಾಧೆ ಶ್ಯಾಮ್‌ ಚಿತ್ರ ತಂಡಕ್ಕೆ ಶಾಕ್ ಕೊಟ್ಟಿದ್ದಾನೆ. ಆಂಧ್ರ ಮೂಲದ ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ.

  ರಾಧೆ ಶ್ಯಾಮ್ ಚಿತ್ರದ ಯಾವುದೇ ಅಪ್ಡೇಟ್ ಬಂದಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಿ ಸೂಸೈಡ್‌ ಮಾಡಿ ಕೊಳ್ಳುವುದಾಗಿ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

  ಇನ್ನು ಪತ್ರದಲ್ಲಿ ನಿರ್ಮಾಣ ಸಂಸ್ಥೆ 'ಯುವಿ ಕ್ರಿಯೇಷನ್ಸ್‌' ಮತ್ತು ನಿರ್ದೇಶಕ 'ರಾಧಾಕೃಷ್ಣ' ಅವರ ಹೆಸರುಗಳನ್ನು ನಮೂದಿಸಿದ್ದ. ಜೊತೆಗೆ ತನ್ನ ಸಾವಿಗೆ ಇವರೇ ಕಾರಣ ಮತ್ತು ಜವಾಬ್ದಾರಿ ಆಗಿರುತ್ತಾರೆ ಎನ್ನುವುದನ್ನು ಪತ್ರದಲ್ಲಿ ಅಭಿಮಾನಿ ಬರೆದುಕೊಂಡಿದ್ದ. ಆದರೆ ಅಭಿಮಾನಿಯ ಸೂಸೈಡ್ ನೋಟ್‌ಗೆ ಚಿತ್ರತಂಡ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ. ಬದಲಿಗೆ ಈಗ ಹೊಸ ಅಪ್ಡೇಟ್‌ ಕೊಟ್ಟಿದೆ. ಇನ್ನೆರಡು ದಿನಗಳಲ್ಲಿ ಸಾಂಗ್‌ ರಿಲೀಸ್‌ಗೆ ಚಿತ್ರ ತಂಡ ಮುಂದಾಗಿದೆ.

   Prabhas Starrer Radhe Shyam Movie Gives New Update

  ರಾಧೆ ಶ್ಯಾಮ್‌ ಚಿತ್ರದ ರಿಲೀಸ್‌ ದಿನಾಂಕ ಪ್ರಕಟ ಆಗಿದೆ. 2022 ಜನವರಿ 14ಕ್ಕೆ ರಾಧೆ ಶ್ಯಾಮ್‌ ಚಿತ್ರದ ರಿಲೀಸ್ ದಿನಾಂಕ ನಿಗದಿ ಆಗಿದೆ. ಆದರೆ ಪ್ರಭಾಸ್ ಅಭಿಮಾನಿಗಳು ಚಿತ್ರದಿಂದ ಹೊಸ ಕಂಟೆಂಟ್ ನಿರೀಕ್ಷೆ ಮಾಡುತ್ತಿದ್ದರು. ಪ್ರಭಾಸ್ ಹುಟ್ಟುಹಬ್ಬದ ನಂತರ ರಾಧೆ ಶ್ಯಾಮ್ ಸಿನಿಮಾದ ಯಾವ ಅಪ್ಡೇಟ್ ಕೂಡ ಹೊರ ಬಂದಿರಲಿಲ್ಲ. ಜೊತೆಗೆ ಸಿನಿಮಾ ರಿಲೀಸ್‌ ಹತ್ತಿರ ಆಗುತ್ತಿದ್ದರೂ ಚಿತ್ರತಂಡ ಸುಮ್ಮನಿತ್ತು. ಹಾಗಾಗಿ ಪ್ರಭಾಸ್‌ ಅಭಿಮಾನಿಯೊಬ್ಬ ಸೂಸೈಡ್ ಪತ್ರ ಬರೆದಿದ್ದ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಪತ್ರ ಅಪ್ಲೋಡ್‌ ಆದ ಕೆಲವೇ ಹೊತ್ತಲ್ಲಿ ಡಿಲೀಟ್ ಆಗಿದೆ. ಅಭಿಮಾನಿಗಳ ನಿರೀಕ್ಷೆ ಅರಿತ ಚಿತ್ರ ತಂಡ ಈಗ ಸಿನಿಮಾದ ಹಾಡು ರಿಲೀಸ್‌ ಮಾಡಲು ಮುಂದಾಗಿದೆ. ಸದ್ಯ ರಿಲೀಸ್‌ ಆಗಿರುವ ಪೋಸ್ಟರ್‌ ಚಿತ್ರದ ಹಾಡಿನ ಮೇಲೆ ಕುತೂಹಲ ಹುಟ್ಟು ಹಾಕಿದೆ. ಸಮುದ್ರದ ಆಳದಲ್ಲಿ ಕಾರು, ಕಾರಿನಲ್ಲಿ ನಾಯಕ ನಟ ಕುಳಿತಿರುವ ಹಾಗೆ ಪೋಸ್ಟರ್‌ ಮಾಡಲಾಗಿದೆ. ಈ ಪೋಸ್ಟರ್‌ ನೋಡಿದರೆ ಇದೊಂದು ರೊಮ್ಯಾಂಟಿಕ್‌ ಹಾಡು ಎನ್ನುವ ಸೂಚನೆ ಸಿಕ್ಕಿದೆ.

  English summary
  Prabhas Starerr Radhe Shyam Movie Gives New Update Song Will Be Release On 15th November,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X