Prabhas: 'ಸಲಾರ್' ಹೊಸ ರಿಲೀಸ್ ಡೇಟ್ ಘೋಷಿಸಿದ ಹೊಂಬಾಳೆ ಫಿಲ್ಮ್ಸ್‌: ಪ್ರಭಾಸ್ Vs ಕಿಂಗ್‌ಖಾನ್ ಫೈಟ್ ಕನ್ಫರ್ಮ್

ಬಹುನಿರೀಕ್ಷಿತ 'ಸಲಾರ್' ಚಿತ್ರದ ಹೊಸ ರಿಲೀಸ್ ಡೇಟ್ ಘೋಷಣೆಯಾಗಿದೆ. ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಚರ್ಚೆ ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿತ್ತು. ಅದು ಈಗ ಅಧಿಕೃತವಾಗಿದೆ. ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ಅದೇ ದಿನ ತೆರೆಗಪ್ಪಳಿಸಲಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ 'ಸಲಾರ್' ಸಿನಿಮಾ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಆದರೆ ಯಾವಾಗ ಸಿನಿಮಾ ರಿಲೀಸ್ ಅನ್ನೋದು ಕನ್ಫರ್ಮ್ ಆಗಿರಲಿಲ್ಲ. ಇದೀಗ ಟ್ವೀಟ್ ಮಾಡಿ ಹೊಂಬಾಳೆ ಸಂಸ್ಥೆ ಹೊಸ ದಿನಾಂಕ ಘೋಷಿಸಿದೆ. ಈ ಸುದ್ದಿ ಕೇಳಿ ಪ್ರಭಾಸ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಶಾರುಖ್ ಖಾನ್ ಯಾವುದೇ ಕಾರಣಕ್ಕೂ 'ಡಂಕಿ' ಸಿನಿಮಾ ರಿಲೀಸ್ ಡೇಟ್ ಬದಲಿಸುವುದಿಲ್ಲ ಎಂದಿದ್ದಾರೆ. ಹಾಗಾಗಿ ಡಿಸೆಂಬರ್ 22ಕ್ಕೆ ಬಾಕ್ಸಾಫೀಸ್‌ನಲ್ಲಿ ಶಾರುಖ್ ವರ್ಸಸ್ ಪ್ರಭಾಸ್ ಫೈಟ್ ಫಿಕ್ಸ್ ಆದಂತಾಗಿದೆ.

Prabhas starrer Salaar CeaseFire Worldwide Release On Dec 22, 2023

'KGF' ಸರಣಿ ಬಳಿಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ಕೈಗೆತ್ತಿಕೊಂಡಿದ್ದರು. ಹೊಂಬಾಳೆ ಸಂಸ್ಥೆಯೇ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 3 ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದ್ದು ಮೊದಲ ಬಭಾಗ ಸಲಾರ್ ಚೇಸ್‌ಫೈರ್ ಡಿಸೆಂಬರ್ 22ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

ಡಿಸೆಂಬರ್ 2020ರಲ್ಲಿ 'ಸಲಾರ್' ಸಿನಿಮಾ ಘೋಷಣೆಯಾಗಿತ್ತು. ಹೈದರಾಬಾದ್‌ನಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ನಟ ಯಶ್ ಕೂಡ ಭಾಗಿ ಆಗಿದ್ದರು. ಬಳಿಕ 2022 ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಕಾರಣಾಂತರಗಳಿಂದ ಶೂಟಿಂಗ್ ತಡವಾಯಿತು. ಹಾಗಾಗಿ ರಿಲೀಸ್ ಡೇಟ್ ಈ ವರ್ಷ ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿತ್ತು. ಲಾಂಗ್ ವೀಕೆಂಡ್ ನೋಡಿ ರಿಲೀಸ್ ಡೇಟ್ ಫಿಕ್ಸ್ ಮಾಡಲಾಗಿತ್ತು.

ಜುಲೈನಲ್ಲಿ 'ಸಲಾರ್' ಟೀಸರ್ ರಿಲೀಸ್ ಮಾಡಲಾಗಿತ್ತು. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಟೀಸರ್ ಹಿಟ್ ಆಗಿತ್ತು. ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡೋದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿತ್ತು. ಆದರೆ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಸಾಧ್ಯವಿಲ್ಲ ಎಂದು ಗೊತ್ತಾದ ಬಳಿಕ ಟ್ರೈಲರ್ ಕೂಡ ಬರಲಿಲ್ಲ. ಸಿನಿಮಾ ಈ ವರ್ಷ ಪ್ರೇಕ್ಷಕರ ಮುಂದೆ ಬರೋದೆ ಅನುಮಾನ ಎನ್ನುವ ಚರ್ಚೆ ನಡೆದಿತ್ತು. ಆದರೆ ಅದನ್ನು ಸುಳ್ಳಾಗಿಸಿ ಈ ವರ್ಷವೇ ಸಿನಿಮಾ ರಿಲೀಸ್‌ ಮಾಡೋಕೆ ಚಿತ್ರತಂಡ ಮುಂದಾಗಿದೆ.

ಹೊಸ ಪೋಸ್ಟರ್ ಸಮೇತ 'ಸಲಾರ್' ರಿಲೀಸ್ ಡೇಟ್ ಘೋಷಿಸಲಾಗಿದೆ. ಕತ್ತಿ ಹಿಡಿದು ರಕ್ತ ಮೆತ್ತಿದ ಖಡಕ್ ಲುಕ್‌ನಲ್ಲಿ 'ಸಲಾರ್' ಪ್ರಭಾಸ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. 'ಉಗ್ರಂ' ಕತೆಯನ್ನೇ ಕೊಂಚ ಬದಲಿಸಿ ಪ್ರಶಾಂತ್ ನೀಲ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬರೀ ಪೋಸ್ಟರ್, ಟೀಸರ್‌ನಿಂದಲೇ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ.

'ಸಲಾರ್' ಚಿತ್ರದಲ್ಲಿ ಪ್ರಭಾಸ್ ಎದುರು ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಮಿಂಚಿದ್ದಾರೆ. ದೇವರಾಜ್, ಜಗಪತಿ ಬಾಬು, ಈಶ್ವರಿ, ತಿನು ಆನಂದ್, ರಾಮಚಂದ್ರ ರಾಜು ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗ್ರಾಫಿಕ್ಸ್ ವರ್ಕ್ ತಡವಾಗಿದ್ದಕ್ಕೆ ಸಿನಿಮಾ ರಿಲೀಸ್ ಡೇಟ್ ಡಿಸೆಂಬರ್‌ಗೆ ಮುಂದೂಡಿದ್ದಾರೆ ಎನ್ನಲಾಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ.

ಪ್ರಶಾಂತ್ ನೀಲ್ ಎಲಿವೇಷನ್ಸ್, ಪ್ರಭಾಸ್ ಪರ್ಫಾರ್ಮನ್ಸ್ ಊಹಿಸಿಕೊಂಡೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ರವಿಬಸ್ರೂರು ಮ್ಯೂಸಿಕ್, ಭುವನ್ ಗೌಡ ಛಾಯಾಗ್ರಹಣವಿದೆ. ಇನ್ನು ಡಿಸೆಂಬರ್ 22ಕ್ಕೆ ಬಾಲಿವುಡ್‌ನ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗಲಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್‌ನಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ.

5 ವರ್ಷಗಳ ಹಿಂದೆ 'KGF' ಸಿನಿಮಾ ಎದುರು ಕಿಂಗ್ ಖಾನ್ ನಟನೆಯ 'ಜೀರೊ' ಸಿನಿಮಾ ಬಂದು ಹೀನಾಯವಾಗಿ ಸೋತಿತ್ತು. ಇದೀಗ 'ಸಲಾರ್' ಎದುರು 'ಡಂಕಿ' ಬರ್ತಿದೆ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ 'ಸಲಾರ್' ಚಿತ್ರವನ್ನು ತೆರೆಗೆ ತರಲಾಗುತ್ತದೆ. ಅದಕ್ಕಾಗಿ ಲಾಂಗ್ ವೀಕೆಂಡ್ ರಿಲೀಸ್ ಪ್ಲ್ಯಾನ್ ಮಾಡಲಾಗಿದೆ. ಎರಡೂ ಸಿನಿಮಾ ಚೆನ್ನಾಗಿದ್ದರೂ ಪ್ರೇಕ್ಷಕರು ಎರಡನ್ನೂ ನೋಡುತ್ತಾರೆ ಎನ್ನುವ ಲೆಕ್ಕಾಚಾರ ನಡೀತಿದೆ.

More from Filmibeat

English summary
Dunki Vs Salaar clash is confirmed. Prabhas Salaar on Christmas 2023 its offical
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X