For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಆ್ಯಕ್ಷನ್ ಚಿತ್ರೀಕರಣ ಶುರು!

  |

  'ಕೆಜಿಎಫ್ 2' ಚಿತ್ರ ರಿಲೀಸ್ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ತ, 'ಸಲಾರ್'ನತ್ತ ನೆಟ್ಟಿದೆ. 'ಸಲಾರ್' ಸಿನಿಮಾ ಅಂದುಕೊಂಡದಕ್ಕಿಂತೂ ಹೆಚ್ಚು ತಡವಾಗಿದೆ. ಈ ಚಿತ್ರದ ಮೇಲೆ ದಿನೇ ದಿನೆ ನಿರೀಕ್ಷೆ ಹೆಚ್ಚಾಗುತ್ತಲೂ ಇದೆ. ಚಿತ್ರದ ಒಂದಷ್ಟು ಚಿತ್ರೀಕರಣ ಇನ್ನೂ ಬಾಕಿ ಇದೆ.

  ಸದ್ಯ 'ಸಲಾರ್' ತಂಡದ ಮುಂದಿನ ಹಂತದ ಚಿತ್ರೀರಣಕ್ಕೆ ಸಿದ್ಧವಾಗಿದೆಯಂತೆ. ಟಾಲಿವುಡ್‌ನಲ್ಲಿ ಸದ್ಯ 'ಸಲಾರ್' ಚಿತ್ರದ ಬಗ್ಗೆಯೇ ಚರ್ಚೆ. ಯಾಕೆಂದರೆ 'ಸಲಾರ್' ಈ ಹಂತದ ಚಿತ್ರೀಕರಣ ಮುಗಿದರೆ ಬಹುತೇಕ ಸಿನಿಮಾ ಮುಗಿದ ಹಾಗೆ ಲೆಕ್ಕಾಚಾರ.

  ಇತಿಹಾಸ ಬರೆದ 'ಬಾಹುಬಲಿ'ಗೆ 7 ವರ್ಷ: ಹಲವು ಸ್ವಾರಸ್ಯಕರ ಸಂಗತಿ ಇಲ್ಲಿವೆ!ಇತಿಹಾಸ ಬರೆದ 'ಬಾಹುಬಲಿ'ಗೆ 7 ವರ್ಷ: ಹಲವು ಸ್ವಾರಸ್ಯಕರ ಸಂಗತಿ ಇಲ್ಲಿವೆ!

  ಇನ್ನು ಈಗ ಶೂಟಿಂಗ್ ಮಾಡಲು ತಯಾರಿ ನಡೆಸಿರುವು, ಫೈಟ್ ದೃಶ್ಯಕ್ಕಾಗಿ. ಇದು ಸಿನಿಮಾದ ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್ ಅಂತೆ. ಅದ್ಧೂರಿಯಾದ ಫೈಟ್ ಚಿತ್ರಣ ನಡೆಯಲಿದೆ. ಇದಕ್ಕಾಗಿ ನಟ ಪ್ರಭಾಸ್ ಕೂಡ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.

  ಪ್ರಭಾಸ್ 'ಸ್ಪಿರಿಟ್‌'ಗೆ ಕರೀನಾ ಕಪೂರ್ ಸಹಿ!ಪ್ರಭಾಸ್ 'ಸ್ಪಿರಿಟ್‌'ಗೆ ಕರೀನಾ ಕಪೂರ್ ಸಹಿ!

  ಫುಲ್ ಆ್ಯಕ್ಷನ್ ಪ್ಯಾಕ್ ಸೀಕ್ವೆನ್ಸ್!

  ಫುಲ್ ಆ್ಯಕ್ಷನ್ ಪ್ಯಾಕ್ ಸೀಕ್ವೆನ್ಸ್!

  ನಟ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್‌ನಲ್ಲಿ ಬರುವ 'ಸಲಾರ್' ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 'ಸಲಾರ್' ಸಿನಿಮಾದ ಅಪ್ಡೇಟ್ ಬಹಳ ದಿನಗಳಿಂದ ಹೊರಬಂದಿಲ್ಲ ಹಾಗಾಗಿ ಅಭಿಮಾನಿಗಳು ಈ ಚಿತ್ರ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದಾರೆ. ಆದರೆ ಇನ್ನು ಹೆಚ್ಚು ದಿನಗಳು ಕಾಯುವ ಅಗತ್ಯ ಇಲ್ಲ. ಯಾಕೆಂದರೆ 'ಸಲಾರ್' ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಂಡಿದೆ.

  ಫೈಟ್‌ಗಾಗಿ ಪ್ರಭಾಸ್ ರೆಡಿ!

  ಫೈಟ್‌ಗಾಗಿ ಪ್ರಭಾಸ್ ರೆಡಿ!

  ಈ ಹಂತದ ಚಿತ್ರೀಕರಣವು ಫುಲ್ ಆಕ್ಷನ್ ಪ್ಯಾಕ್ಡ್ ಆಗಿರಲಿದೆ. ಯಾಕೆಂದರೆ ಸಿನಿಮಾದ ಅತ್ಯಂತ ಮುಖ್ಯ ಆಕ್ಷನ್ ಭಾಗದ ಚಿತ್ರೀಕರಣ ಇದು ಎನ್ನಲಾಗಿದೆ. ಆಕ್ಷನ್ ದೃಶ್ಯಕ್ಕಾಗಿ ನಟ ಪ್ರಭಾಸ್ ಕೂಡ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಈ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪಗೆ ಕಾಣುತ್ತಿದ್ದ ಪ್ರಭಾಸ್, ತೂಕವನ್ನು ಇಳಿಸಿಕೊಂಡಿದ್ದಾರೆ. ಇದು ಅತ್ಯಂತ ದೊಡ್ಡ ಆಕ್ಷನ್ ಸೀನ್ ಆಗಿರುವುದರಿಂದ ನಟ ಪ್ರಭಾಸ್ ಕೂಡ ಈ ಸಾಹಸ ದೃಶ್ಯಕ್ಕಾಗಿ ಹೆಚ್ಚಿನ ಸರ್ಕಸ್ ಮಾಡಬೇಕಾಗುತ್ತದೆ.

  ಸಲಾರ್ ಚಿತ್ರದಲ್ಲಿ ಆ್ಯಕ್ಷನ್ ಪ್ರಧಾನ!

  ಸಲಾರ್ ಚಿತ್ರದಲ್ಲಿ ಆ್ಯಕ್ಷನ್ ಪ್ರಧಾನ!

  ಸಲಾರ್ ಸಿನಿಮಾದಲ್ಲಿ ಹೆಚ್ಚಾಗಿ ಆಕ್ಷನ್ ಇರುತ್ತಂತೆ. ಸಿನಿಮಾದಲ್ಲಿ ಬೇರೆಲ್ಲಾ ಅಂಶಗಳಿಗಿಂತ ಆ್ಯಕ್ಷನ್ ಪ್ರಮುಖವಾಗಿರುತ್ತದೆಯಂತೆ. ಹಾಗಾಗಿ ವಿಭಿನ್ನ ರೀತಿಯ ಆ್ಯಕ್ಷನ್ ಸಿಕ್ವೆನ್ಸ್‌ಗಳನ್ನು ಈ ಚಿತ್ರಕ್ಕಾಗಿ ಕಂಪೋಸ್ ಮಾಡಲಾಗುತ್ತಿದೆ. ಕೆಜಿಎಫ್ ಸಿನಿಮಾದಲ್ಲಿ ಆ್ಯಕ್ಷನ್ ಬೇರೇಯೇ ರೀತಿಯಲ್ಲಿ ತೋರಿಸಿ ದೊಡ್ಡ ಇಂಪಾಕ್ಟ್ ಮಾಡಿದ್ದರೂ ಪ್ರಶಾಂತ್ ನೀಲ್.

  ಸದ್ಯದಲ್ಲೇ ರಿಲೀಸ್ ದಿನಾಂಕ!

  ಸದ್ಯದಲ್ಲೇ ರಿಲೀಸ್ ದಿನಾಂಕ!

  ಇನ್ನು ಸಲಾರ್ ತಡವಾಗುತ್ತಿರುವ ಕಾರಣ, ಚಿತ್ರದ ರಿಲೀಸ್ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿದೆ. ಇದೀಗ ಮತ್ತೆ ಚಿತ್ರದ ಶೂಟಿಂಗ್‌ಗೆ ಚಾಲನೆ ಸಿಕ್ಕಿದ್ದು, ವೇಗವಾಗಿ ಚಿತ್ರೀಕರಣ ಸಾಗಲಿದೆ. ಇನ್ನುಳಿದಂತೆ ಈ ಚಿತ್ರ 2023ರಲ್ಲೇ ತೆರೆಗೆ ಬರೋದು ಎನ್ನಲಾಗುತ್ತಿದೆ. ಆದರೆ ದಿನಾಂಕವನ್ನು ಮಾತ್ರ ಪ್ರಕಟ ಮಾಡಿಲ್ಲ.

  English summary
  Prabhas Starrer Salaar Film Action Sequence Shooting Begins, Salaar Is Full Of Action Only, Know More Details
  Monday, July 18, 2022, 16:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X