'ಸಲಾರ್' Vs 'ಫೈಟರ್'; ಮದಗಜಗಳ ಮಹಾ ಕಾಳಗ

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಮುಂದಿನ ಸೆಪ್ಟೆಂಬರ್‌ 28ಕ್ಕೆ ವಿಶ್ವದಾದ್ಯಂತ ಪ್ರಶಾಂತ್ ನೀಲ್ - ಪ್ರಭಾಸ್ ಕ್ರೇಜಿ ಕಾಂಬಿನೇಷನ್ ಸಿನಿಮಾ ತೆರೆಗೆ ಬರಲಿದೆ. ಆದರೆ ಅದೇ ದಿನ ಹೃತಿಕ್ ರೋಷನ್ 'ಫೈಟರ್' ಆಗಿ ಬರ್ತಿದ್ದಾರೆ.

ದೊಡ್ಡ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಅನ್ನುವುದು ಹೊಸದೇನು ಅಲ್ಲ. ಇಬ್ಬರು ಸೂಪರ್ ಸ್ಟಾರ್‌ಗಳ ಸಿನಿಮಾಗಳು ಒಂದೇ ದಿನ ರಿಲೀಸ್ ಆದರೆ ಯಾವುದಾದರೂ ಒಂದಕ್ಕೆ ಪೆಟ್ಟು ಬೀಳುವ ಆತಂಕ ಇರುತ್ತದೆ. ಹೇಳಿ ಕೇಳಿ ಇದು ಬ್ಯುಸಿನೆಸ್ ವಿಚಾರ. ಹಾಗಾಗಿ ಯಾರು ರಿಸ್ಕ್‌ ತೆಗೆದುಕೊಳ್ಳುವುದಕ್ಕೆ ಸಿದ್ಧ ಇರುವುದಿಲ್ಲ. ಆದರೆ ಅನಿವಾರ್ಯ ಕಾರಣಗಳಿಂದ ಕೆಲವೊಮ್ಮೆ ಇಂತಹ ಬಾಕ್ಸಾಫೀಸ್‌ ಕದನ ನಡೆಯುತ್ತದೆ. 'ಸಲಾರ್' Vs 'ಫೈಟರ್' ಫೈಟ್‌ಗೆ ಈಗ ಮುಹೂರ್ತ ಫಿಕ್ಸ್ ಆಗಿದೆ.

ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್'. 'ಕೆಜಿಎಫ್' ಸರಣಿ ಸಿನಿಮಾಗಳ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಒಟ್ಟಿಗೆ ಸೇರಿ ಸಿನಿಮಾ ಮಾಡಿರುವುದು ಬಹಳ ಕುತೂಹಲ ಕೆರಳಿಸಿದೆ. ಬರೀ ಪೋಸ್ಟರ್‌ಗಳಿಂದಲೇ ಹಂತ ಹಂತವಾಗಿ ಸಿನಿಮಾ ಹೈಪ್ ಕ್ರಿಯೇಟ್ ಮಾಡ್ತಿದೆ. ಇದೀಗ ಮತ್ತೊಂದು ಜಬರ್ದಸ್ತ್‌ ಪೋಸ್ಟರ್ ಸಮೇತ ಚಿತ್ರದ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ.

ಪ್ರಭಾಸ್ 'ಸಲಾರ್' Vs ಹೃತಿಕ್ 'ಫೈಟರ್'

ಪ್ರಭಾಸ್ 'ಸಲಾರ್' Vs ಹೃತಿಕ್ 'ಫೈಟರ್'

ಈಗಾಗಲೇ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಫೈಟರ್' ಚಿತ್ರವನ್ನು 2023ರ ಸೆಪ್ಟೆಂಬರ್ 28ಕ್ಕೆ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಅದೇ ದಿನ ಪ್ರಭಾಸ್ 'ಸಲಾರ್' ಆಗಿ ಬಾಕ್ಸಾಫೀಸ್ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಎರಡೂ ಕೂಡ ಸೂಪರ್ ಸ್ಟಾರ್‌ಗಳ ಬಿಗ್‌ ಬಜೆಟ್ ಸಿನಿಮಾ ಆಗಿರುವುದರಿಂದ ಪೈಪೋಟಿ ಏರ್ಪಡುವುದು ಗ್ಯಾರೆಂಟಿ. 'ಫೈಟರ್' ಅದೇ ದಿನ ರಿಲೀಸ್ ಆಗುವುದು ಗೊತ್ತಿದ್ದು, ತಮ್ಮ ಸಿನಿಮಾ ಮೇಲಿನ ನಂಬಿಕೆಯಿಂದ ಹೊಂಬಾಳೆ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

ರಣ ಭಯಂಕರ 'ಸಲಾರ್'

ರಣ ಭಯಂಕರ 'ಸಲಾರ್'

ಶವಗಳ ರಾಶಿಯ ನಡುವೆ ಎರಡು ಕತ್ತಿಗಳನ್ನು ಹಿಡಿದು 'ಸಲಾರ್' ಪ್ರಭಾಸ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‌ ಅಭಿಮಾನಿಗಳ ಮನಗೆದ್ದಿದೆ. ಪ್ರಭಾಸ್ ಮುಖವನ್ನು ಸರಿಯಾಗಿ ತೋರಿಸದೇ ಖತರ್ನಾಕ್ ಪೋಸ್ಟರ್ ರಿಲೀಸ್ ಮಾಡಿ ಪ್ರಶಾಂತ್‌ ನೀಲ್ ಜಾಣ್ಮೆ ಮೆರೆದಿದ್ದಾರೆ. 2023ರ ಸೆಪ್ಟೆಂಬರ್ 28ಕ್ಕೆ ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು 400 ದಿನ ಕಾಯಬೇಕಾ ಅಂತ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಏರಿಯಲ್ ಆಕ್ಷನ್ ಸಿನಿಮಾ 'ಫೈಟರ್'

ಏರಿಯಲ್ ಆಕ್ಷನ್ ಸಿನಿಮಾ 'ಫೈಟರ್'

'ವಾರ್' ಅನ್ನುವ ಬ್ಲಾಕ್‌ಬಸ್ಟರ್‌ ಸಿನಿಮಾ ಕಟ್ಟಿಕೊಟ್ಟ ಸಿದ್ದಾರ್ಥ್ ಆನಂದ್ ಮುಂದಿನ ಪ್ರಾಜೆಕ್ಟ್‌ 'ಫೈಟರ್'. ಈ ಚಿತ್ರದಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಹಾಗೂ ಅನಿಲ್ ಕಪೂರ್ ಲೀಡ್‌ ರೋಲ್‌ಗಳಲ್ಲಿ ನಟಿಸ್ತಿದ್ದಾರೆ. ವಯಕಾಂ ಹಾಗೂ ಮಾರ್ಫ್ಲಿಕ್ಸ್‌ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿವೆ. 'ಫೈಟರ್' ಭಾರತದ ಫಸ್ಟ್ ಏರಿಯಲ್ ಆಕ್ಷನ್ ಸಿನಿಮಾ ಅನ್ನಲಾಗುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.

ಏಪ್ರಿಲ್‌ನಲ್ಲಿ #NTR31 ಶೂಟಿಂಗ್

ಏಪ್ರಿಲ್‌ನಲ್ಲಿ #NTR31 ಶೂಟಿಂಗ್

ಈ ವರ್ಷಾಂತ್ಯಕ್ಕೆ 'ಸಲಾರ್' ಸಿನಿಮಾ ಶೂಟಿಂಗ್ ಮುಗಿಸಿ ಏಪ್ರಿಲ್‌ನಲ್ಲಿ ಎನ್‌ಟಿಆರ್‌ ಕಾಂಬಿನೇಷನ್‌ ಚಿತ್ರವನ್ನು ಪ್ರಶಾಂತ್‌ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. 'ಕೆಜಿಎಫ್' ಸರಣಿ ನಂತರ ಪ್ರಶಾಂತ್ ನೀಲ್ ಕ್ರೇಜ್ ದೇಶಾದ್ಯಂತ ಜೋರಾಗಿದೆ. ನೀಲ್ ಸಿನಿಮಾದ ಪ್ರತಿ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ ಏಪ್ರಿಲ್‌ 14ಕ್ಕೆ 'ಸಲಾರ್' ಪ್ರಭಾಸ್ ಥಿಯೇಟರ್‌ಗೆ ಎಂಟ್ರಿ ಕೊಡಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಶೂಟಿಂಗ್ ತಡವಾಗಿ ಮುಂದಿನ ವರ್ಷ ಸೆಪ್ಟೆಂಬರ್‌ವರೆಗೆ ಕಾಯುವಂತಾಗಿದೆ.

More from Filmibeat

English summary
Salaar vs Fighter Prabhas Film to Clash With Hrithik Roshan Action Film. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X