Salaar Trailer- 2: ಖಾನ್ಸರ್ ಕೋಟೆಗೆ ನುಗ್ಗಿದ ಡೈನೋಸಾರ್: ಸ್ನೇಹಿತನಿಗಾಗಿ 'ಸಲಾರ್' ರಣರೋಚಕ ಹೋರಾಟ

ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಚಿತ್ರದ ಹೊಸ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಯಂಗ್ ರೆಬಲ್ ಸ್ಟಾರ್ ಆರ್ಭಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ಬಾರಿ ಪ್ರಭಾಸ್‌ನ ಅಬ್ಬರವನ್ನು ಹೈಲೆಟ್ ಮಾಡಿ ಟ್ರೈಲರ್ ಕಟ್ ಮಾಡಿದ್ದಾರೆ. ಜೊತೆಗೆ ಖಾನ್ಸರ್ ಕೋಟೆಯ ದರ್ಶನವನ್ನು ಮಾಡಿಸಲಾಗಿದೆ.

ಇದಕ್ಕೂ ಮುನ್ನ ಬಂದಿದ್ದ 'ಸಲಾರ್' ಟ್ರೈಲರ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಪ್ರಭಾಸ್ ಕಾಣಿಸಿಕೊಂಡಿದ್ದ ಸನ್ನಿವೇಶಗಳು ಕಮ್ಮಿ ಇದೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಈ ಬಾರಿ ಇಡೀ ಟ್ರೈಲರ್‌ನಲ್ಲಿ ಪ್ರಭಾಸ್ ಆವರಿಸಿಕೊಂಡಿದ್ದಾರೆ. ಒಂದಷ್ಟು ಆಕ್ಷನ್ ಸೀಕ್ವೆನ್ಸ್ ಝಲಕ್ ತೋರಿಸಲಾಗಿದೆ. ಇನ್ನು ಪ್ರಶಾಂತ್ ನೀಲ್ ಸೃಷ್ಟಿಸಿರುವ ಖಾನ್ಸರ್ ಎನ್ನುವ ಕಾಲ್ಪನಿಕ ನಗರದ ಪರಿಚಯ, ಅಲ್ಲಿನ ಜನ, ಖಾನ್ಸರ್‌ ಅಧಿಕಾರ ಚುಕ್ಕಾಣಿಗಾಗಿ ನಡೆಯುವ ರಾಜಕೀಯದ ಇಣುಕು ನೋಟವೂ ಇದೆ.

Prabhas starrer Salaar Release Trailer out now; fans call it pure goosebumps

"ಚಿಕ್ಕ ವಯಸ್ಸಿನಲ್ಲಿ ನಿನಗೊಂದು ಕತೆ ಹೇಳ್ತಿದ್ದೆ. ಪರ್ಷಿಯನ್ ಸಾಮ್ರಾಜ್ಯದಲ್ಲಿ ಸುಲ್ತಾನ್, ಎಷ್ಟೇ ದೊಡ್ಡ ಸಮಸ್ಯೆ ಬಂದ್ರು ತನ್ನ ಬಲವಾದ ಸೈನ್ಯಕ್ಕೂ ಹೇಳದೇ ಒಬ್ಬನಿಗೆ ಹೇಳ್ತಿದ್ದ. ಸುಲ್ತಾನ್ ಬೇಕು ಅಂದಿದ್ದನ್ನ ಏನಾದ್ರು ತರ್ತಿದ್ದ, ಬೇಡ ಅಂದಿದ್ದನ್ನ ಏನಾದ್ರು ಅಂತ್ಯ ಮಾಡ್ತಿದ್ದ" ಎಂದು ಪ್ರಭಾಸ್ ಪಾತ್ರಕ್ಕೆ ಬಿಲ್ಡಪ್ ಕೊಡುತ್ತ ಟ್ರೈಲರ್ ಶುರುವಾಗುತ್ತದೆ. ಆಕ್ಷನ್ ಸನ್ನಿವೇಶಗಳು ಬಹಳ ರೋಚಕವಾಗಿದೆ. ಅಷ್ಟೇ ವೈಲೆನ್ಸ್ ಕೂಡ ಕಾಣಿಸುತ್ತದೆ. ಇನ್ನು ಖಾನ್ಸರ್‌ನಲ್ಲಿರುವ ವಿವಿಧ ಬುಡಕಟ್ಟುಗಳ ಜನ, ಸೈನಿಕರು ಅವರಿಗೆ ಎದುರಾಳಿ ಸೈನಿಕರು ಹೀಗೆ ಹೊಸ ಪ್ರಪಂಚವನ್ನೇ ತೆರೆದಿಡಲಾಗಿದೆ.

ವರದರಾಜ್ ಮನ್ನಾರ್ ಸಹಾಯಕ್ಕೆ ಬರುವ ದೇವ, ಮೆಕಾನಿಕ್ ಆಗಿರೋ ಅವನಿಗೆ ಏನು ಗೊತ್ತಿರಲ್ಲ ಎಂದು ಉಳಿದವರು ಅಂದುಕೊಳ್ಳುವುದು, ಮುಂದೆ ಆತನ ಪರಕ್ರಮಕ್ಕೆ ಬೆಚ್ಚಿಬೀಳುವುದು ಹೀಗೆ ಪಕ್ಕಾ ಕಮರ್ಷಿಯಲ್ ಸಿನಿಮಾ ಚೌಕಟ್ಟಿನಲ್ಲಿ ಪ್ರಶಾಂತ್ ನೀಲ್ ದೃಶ್ಯಗಳನ್ನು ಕಟ್ಟಿರುವುದು ಕಾಣಿಸುತ್ತದೆ. ಆದರೆ 'KGF' ನರಾಚಿಗಿಂತ ಖಾನ್ಸರ್ ಕೋಟೆ, ಅಲ್ಲಿನ ಜನ, ಸೈನಿಕರು ಎಲ್ಲವನ್ನು ದೊಡ್ಡದಾಗಿ ತೋರಿಸಲಾಗಿದೆ.

ಇಬ್ಬರು ಸ್ನೇಹಿತರು ಅದೊಂದು ಕಾರಣಕ್ಕೆ ಶತ್ರುಗಳಾಗಿ ಬದಲಾಗಿದ್ದಕ್ಕೆ ಖಾನ್ಸರ್ ಸಾಮ್ರಾಜ್ಯ ಯಾವ ರೀತಿ ಬದಲಾಗುತ್ತದೆ ಅನ್ನೋದು ಸಿನಿಮಾ ಕಥೆ ಅನ್ನೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತದೆ. ಒಟ್ನಲ್ಲಿ ಮೊದಲ ಟ್ರೈಲರ್‌ಗೆ ಹೋಲಿಸಿದರೆ ಹೊಸ ಟ್ರೈಲರ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿದೆ. ಕನ್ನಡದಲ್ಲಿ ಪ್ರಭಾಸ್ ಪಾತ್ರಕ್ಕೆ ವಸಿಸ್ಠ ಸಿಂಹ ವಾಯ್ಸ್ ಕೊಟ್ಟಿದ್ದಾರೆ. ಅಲ್ಲಲ್ಲಿ 'ಉಗ್ರಂ' ಛಾಯೆ ಕಂಡರೂ ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾವನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತದೆ.

'KGF'-2 ಚಿತ್ರದಲ್ಲಿ ತೋರಿಸಿದ ಕಲಶ್ನಿಕೋವ್, ದೊಡ್ಡಮ್ಮ ರೀತಿಯ ಗನ್‌ಗಳಿಂದ ದೊಡ್ಡ ದೊಡ್ಡ ಗನ್‌ಗಳು, ಮದ್ದು ಗುಂಡುಗಳ ಆರ್ಭಟ 'ಸಲಾರ್' ಚಿತ್ರದಲ್ಲೂ ಇದೆ. ಖಾನ್ಸರ್‌ ಕೋಟೆಯ ಅಧಿಪತ್ಯಕ್ಕಾಗಿ ಭಾರೀ ಪೈಪೋಟಿ ಕದನ, ನಡುವೆ ದೇವ- ವರದರಾಜ್ ಸ್ನೇಹದ ಕಥೆ ಚಿತ್ರದಲ್ಲಿ ಇರಲಿದೆ. ಇನ್ನು ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಭಾರೀ ವಿಧ್ವಂಸವೇ ನಡೆಯುವ ಸುಳಿವು ಹೊಸ ಟ್ರೈಲರ್‌ನಲ್ಲಿ ಸಿಗುತ್ತಿದೆ.

ದೊಡ್ಡಮಟ್ಟದಲ್ಲಿ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳು ಈ ವಾರ ರಿಲೀಸ್ ಆಗಲಿದೆ. ಎರಡೂ ಸಿನಿಮಾಗಳ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಉತ್ತರ ಭಾರತದಲ್ಲಿ 'ಸಲಾರ್‌' ಚಿತ್ರಕ್ಕೆ ಕಮ್ಮಿ ಸ್ಕ್ರೀನ್ಸ್ ಸಿಕ್ಕಿದೆ ಎನ್ನುವ ಆರೋಪವೂ ಇದೆ. ಆದರೆ ಇನ್ನೆರಡು ದಿನಗಳಲ್ಲಿ ದೊಡ್ಡಮಟ್ಟದಲ್ಲೇ ಸ್ಕ್ರೀನ್ಸ್ ಸಿಗುವ ಸಾಧ್ಯತೆಯಿದೆ. ಒಟ್ನಲ್ಲಿ ಹೊಸ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿರುವುದು ಸುಳ್ಳಲ್ಲ.

ಇತ್ತೀಚಿನ ವರ್ಷಗಳಲ್ಲಿ ಆಡಿಯೋ ರಿಲೀಸ್, ಪ್ರೀ ರಿಲೀಸ್ ಈವೆಂಟ್‌ಗಳು ಜೋರಾಗಿ ನಡೀತಿದೆ. ಆದರೆ ಅಂತಹ ಯಾವುದೇ ಪ್ರಯತ್ನ 'ಸಲಾರ್' ಚಿತ್ರತಂಡ ಮಾಡಿದಂತೆ ಕಾಣುತ್ತಿಲ್ಲ. ಸದ್ಯ ನಿರ್ದೇಶಕ ರಾಜಮೌಳಿ ಚಿತ್ರತಂಡವನ್ನು ಸಂದರ್ಶನ ಮಾಡಿದ್ದಾರೆ. ಅದರ ಜೊತೆಗೆ ಮತ್ತಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿ ಪ್ರಭಾಸ್, ಪ್ರಶಾಂತ್ ನೀಲ್ ಮಾತನಾಡಲಿದ್ದಾರೆ. ಇನ್ನುಳಿದಂತೆ ಸಿನಿಮಾವನ್ನು ನಂಬಿ ಚಿತ್ರತಂಡ ಪ್ರೇಕ್ಷಕರ ಮುಂದೆ ಬರ್ತಿದೆ. ಕರ್ನಾಟಕದಲ್ಲಿ ಬೆಳ್ಲಂಬೆಳಗ್ಗೆ 5 ಗಂಟೆಗೆ ಹಲವೆಡೆ ಶೋಗಳು ಶುರುವಾಗಲಿದೆ.

More from Filmibeat

English summary
Salaar tralier-2 released; fans trilled over prabhas action avatar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X