ಏನಿಲ್ಲಾ ಏನಿಲ್ಲಾ ಅಂತ್ಲೇ 24 ಗಂಟೆ ತಡಕಾಡಿದ ಫ್ಯಾನ್ಸ್: ಹಳೇ ದಾಖಲೆಗಳನ್ನೆಲ್ಲಾ ಅಳಿಸಿದ 'ಸಲಾರ್' ಟೀಸರ್

ಪ್ರಭಾಸ್- ಪ್ರಶಾಂತ್ ನೀಲ್ ಡೆಡ್ಲಿ ಕಾಂಬಿನೇಷನ್‌ 'ಸಲಾರ್' ಸಿನಿಮಾ ಟೀಸರ್ ಧೂಳೆಬ್ಬಿಸಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಯಂಗ್‌ ರೆಬಲ್ ಸ್ಟಾರ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. 24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಸಾಧಿಸಿದ ಟೀಸರ್ ಎನ್ನುವ ದಾಖಲೆ ಇದೀಗ 'ಸಲಾರ್' ಪಾಲಾಗಿದೆ. ಸೆಪ್ಟೆಂಬರ್ 28ಕ್ಕೆ 'ಸಲಾರ್' ಸಿನಿಮಾ ತೆರೆಗಪ್ಪಳಿಸಲಿದೆ.

ಜೂನ್ 6ರ ಬೆಳ್ಳಬೆಳಗ್ಗೆ 5.12 ನಿಮಿಷಕ್ಕೆ 'ಸಲಾರ್' ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಆಗಿತ್ತು. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಸ್ಯಾಂಪಲ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 1 ನಿಮಿಷ 46 ಸೆಕೆಂಡ್‌ಗಳ ಟೀಸರ್‌ನಲ್ಲಿ ನಾಯಕ 'ಸಲಾರ್' ತಾಕತ್ತು ಎಂಥದ್ದು ಎನ್ನುವುದನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಜೊತೆ ಪ್ರಭಾಸ್ ಆಕ್ಷನ್ ಝಲಕ್ ತೋರಿಸಲಾಗಿದೆ. ಆದರೆ ಸರಿಯಾಗಿ 'ಸಲಾರ್' ಪ್ರಭಾಸ್ ಮುಖ ಕೂಡ ತೋರಿಸಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಆದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಟೀಸರ್ ನೋಡುತ್ತಿದ್ದಾರೆ. ಪರಿಣಾಮ ಹಳೇ ದಾಖಲೆಗಳೆಲ್ಲಾ ಪುಡಿಪುಡಿ ಆಗಿದೆ.

Prabhas Starrer Salaar Teaser hits a whooping 83 Million Views in 24 Hours

ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ 'ಸಲಾರ್' ಟೀಸರ್ ವಿಫಲವಾಗಿದೆ ಎನ್ನುವ ವಾದವೂ ಇದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದೆ. ಬೆಳ್ಳಂಬೆಳಗ್ಗೆ ಟೀಸರ್ ಬಿಟ್ರೆ ಯಾರು ನೋಡ್ತಾರೆ? ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಎಲ್ಲರ ಊಹೆ ಸುಳ್ಳಾಗಿಸಿ 'ಸಲಾರ್' ಆರ್ಭಟ ಮುಂದುವರೆದಿದೆ.

'ಸಲಾರ್' ಆಲ್‌ಟೈಮ್ ರೆಕಾರ್ಡ್

24 ಗಂಟೆಗಳಲ್ಲಿ 'ಸಲಾರ್' ಟೀಸರ್ ಬರೋಬ್ಬರಿ 8.3 ಕೋಟಿ ವೀವ್ಸ್ ಸಾಧಿಸಿದೆ. ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಟೀಸರ್ 6.9 ಕೋಟಿ ವೀವ್ಸ್ ಮೂಲಕ ಎಲ್ಲರ ಹುಬ್ಬೇರಿಸಿತ್ತು. ಭಾರೀ ಟೀಕೆಗೆ ಗುರಿಯಾಗಿದ್ದ ಟೀಸರ್ ಅಚ್ಚರಿ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿತ್ತು. ಅದಕ್ಕು ಮುನ್ನ ಪ್ರಶಾಂತ್ ನೀಲ್ ನಿರ್ದೇಶನದಲ್ಲೇ ಬಂದ 'ಕೆಜಿಎಫ್' 2 ಸಿನಿಮಾ ಟೀಸರ್ 6.88 ಕೋಟಿ ವೀವ್ಸ್ ಸಾಧಿಸಿತ್ತು. ಇನ್ನು 4.2 ಕೋಟಿ ವೀವ್ಸ್ ಪಡೆದಿದ್ದ 'ರಾಧೆಶ್ಯಾಮ್' ಟೀಸರ್ 4ನೇ ಸ್ಥಾನದಲ್ಲಿದೆ. ಒಟ್ಟಾರೆ ಟಾಪ್ 4 ಸಿನಿಮಾಗಳಲ್ಲಿ 3 ಪ್ರಭಾಸ್ ಸಿನಿಮಾಗಳು ಅನ್ನುವುದು ಮತ್ತೊಂದು ವಿಶೇಷ.

ಪ್ರಭಾಸ್ ಅಭಿಮಾನಿಗಳ ಬಲ

'ಸಲಾರ್‌' ಟೀಸರ್ ಈ ರೀತಿ ದಾಖಲೆ ಬರೆಯೋಕೆ ಪ್ರಭಾಸ್ ಅಭಿಮಾನಿ ಬಳಗವೇ ಕಾರಣ. 'ಬಾಹುಬಲಿ' ಸರಣಿ ಸಿನಿಮಾಗಳಿಂದ ಪ್ರಭಾಸ್ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಇನ್ನು ತೆಲುಗು ಮಾತ್ರವಲ್ಲದೇ ಪರಭಾಷಿಕರು ಕೂಡ ಯಂಗ್ ರೆಬಲ್ ಸ್ಟಾರ್ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಇನ್ನು 'KGF' ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಈ ಚಿತ್ರವನ್ನು ತಿದ್ದಿ ತೀಡುತ್ತಿರುವುದು ಮತ್ತಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. 'ಆದಿಪುರುಷ್' ಸೋಲಿನ ಬೇಸರದಲ್ಲಿರುವ ಡಾರ್ಲಿಂಗ್ ಅಭಿಮಾನಿಗಳು 'ಸಲಾರ್' ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Prabhas Starrer Salaar Teaser hits a whooping 83 Million Views in 24 Hours

ಪ್ರಶಾಂತ್ ಸಿನಿಮ್ಯಾಟಿಕ್ ಯೂನಿವರ್ಸ್?

ಯಶ್ ನಟನೆಯ 'KGF' ಸರಣಿ ಸಿನಿಮಾಗಳು ಸೃಷ್ಟಿಸಿದ ಸಂಚಲನ ಗೊತ್ತೇಯಿದೆ. ಇದೀಗ 'ಸಲಾರ್' ಟೀಸರ್ ನೋಡಿದವರು ಈ ಎರಡು ಸಿನಿಮಾಗಳಿಗೆ ಲಿಂಕ್ ಇದೆ. ಯಶ್ ಕೂಡ ಈ ಚಿತ್ರದಲ್ಲಿ ಇರ್ತಾರೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಪ್ರಶಾಂತ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ 'KGF' ಹಾಗೂ 'ಸಲಾರ್' ಸಿನಿಮಾ ಕಥೆಗಳು ಒಂದನ್ನೊಂದು ಸಂಧಿಸುತ್ತವೆ ಎಂದು ಅಂದಾಜಿಸುತ್ತಿದ್ದಾರೆ. ಅದಕ್ಕೆ ಕಾರಣ 'KGF'- 2 ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ಕಾಣುವ 516 ಸಂಖ್ಯೆಯ ಬ್ಯಾರೆಲ್, 'ಸಲಾರ್' ಟೀಸರ್‌ನಲ್ಲೂ ಕಾಣಿಸ್ತಿದೆ. ಇನ್ನು 'ಉಗ್ರಂ' ಅಪ್‌ಡೇಟೆಡ್‌ ವರ್ಷನ್ 'ಸಲಾರ್‌' ಎನ್ನುವ ಚರ್ಚೆ ಕೂಡ ನಡೀತಿದೆ. ಇದೇ ಕಾರಣಕ್ಕೆ ಕೆಲವರು ಟೀಸರ್‌ನ ಪದೇ ಪದೇ ನೋಡುತ್ತಿದ್ದಾರೆ.

1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್

ದೊಡ್ಡ ದೊಡ್ಡ ಸಿನಿಮಾಗಳು ಈಗ ಅನಾಯಾಸವಾಗಿ 1000 ಕೋಟಿ ರೂ. ಕ್ಲಬ್ ಸೇರುತ್ತಿವೆ. 'ಸಲಾರ್' ಕೂಡ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಗಳಿಕೆ ಕಾಣುತ್ತದೆ ಎನ್ನುವ ನಿರೀಕ್ಷೆಯಿದೆ. ಚಿತ್ರದಲ್ಲಿ ಪ್ರಭಾಸ್ ಎದುರು ಪೃಥ್ವಿರಾಜ್ ಸುಕುಮಾರನ್ ನಟಿಸ್ತಿದ್ದಾರೆ. ಇನ್ನುಳಿದಂತೆ ದೇವರಾಜ್, ಜಗಪತಿ ಬಾಬು, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಟೀಸರ್‌ನಿಂದಲೇ ದಾಖಲೆ ಬರೆದಿರೋ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಾವ ರೀತಿ ಸದ್ದು ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Prabhas Starrer Salaar Teaser hits a whooping 83 Million Views in 24 Hours. Teaser breaks KGF chapter-2 and Adipurush teaser records. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X