Salaar: 'ಸಲಾರ್' ಟ್ರೈಲರ್ ಅಪ್‌ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್: ಹಬ್ಬ ಮಾಡ್ತಿದ್ದಾರೆ ಪ್ರಭಾಸ್ ಫ್ಯಾನ್ಸ್
ಸೆಪ್ಟೆಂಬರ್ 28ಕ್ಕೆ 'ಸಲಾರ್' ಪ್ರಭಾಸ್ ಆರ್ಭಟ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಡೈನೋಸಾರ್ ದರ್ಬಾರ್ ಝಲಕ್ ನೋಡೋಕೆ ಅರ್ಥಾತ್ ಟ್ರೈಲರ್‌ಗಾಗಿ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡೋದಾಗಿ ಈ ಹಿಂದೆ ಹೊಂಬಾಳೆ ಸಂಸ್ಥೆ ಹೇಳಿತ್ತು. ಇದೀಗ 'ಸಲಾರ್' ಟ್ರೈಲರ್ ಬಗ್ಗೆ ಹೊಂಬಾಳೆ ಸಂಸ್ಥೆ ಸುಳಿವು ಕೊಟ್ಟಿದೆ.
ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ 'ಸಲಾರ್' ಟೀಸರ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಟೀಸರ್ ಅದ್ಭುತ ಅನ್ನಿಸಿದರೂ ಸರಿಯಾಗಿ ಪ್ರಭಾಸ್ ದರ್ಶನವಾಗದೇ ಅಭಿಮಾನಿಗಳು ಬೇಸರಗೊಂಡಿದ್ದರು. ಅದೇ ಕಾರಣಕ್ಕೆ ಟ್ರೈಲರ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾದಲ್ಲಿ ಹಾಡುಗಳ ಸಂಖ್ಯೆ ಕಮ್ಮಿ. ಹಾಗಾಗಿ ಸದ್ಯಕ್ಕೆ ಸಾಂಗ್ಸ್ ರಿಲೀಸ್ ಆಗಲ್ಲ. ನೇರವಾಗಿ ಟ್ರೈಲರ್ ರಿಲೀಸ್ ಆಗಲಿದೆ. ಮುಂದಿನ ವಾರವೇ 'ಸಲಾರ್' ಸುನಾಮಿ ಝಲಕ್ ರಿವೀಲ್ ಆಗುವ ಸಾಧ್ಯತೆಯಿದೆ.

KGF ಸರಣಿಗೆ ಕೆಲಸ ಮಾಡಿದ ತಂಡವೇ 'ಸಲಾರ್' ಸರಣಿಯನ್ನು ಕಟ್ಟಿಕೊಡುತ್ತಿದೆ. ಪ್ರಶಾಂತ್ ನೀಲ್ ಕೈಚಳಕದಲ್ಲಿ ಮತ್ತೊಂದು ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿದ್ಧವಾಗ್ತಿದೆ. ಈ ಬಾರಿ ಯಶ್ ಅಲ್ಲ, ಪ್ರಭಾಸ್ ಕಣಕ್ಕಿಳಿದಿರುವುದ ಭಾರೀ ಕುತೂಹಲ ಮೂಡಿಸಿದೆ. ರವಿ ಬಸ್ರೂರು ಮ್ಯೂಸಿಕ್ ಸಾಥ್ ಚಿತ್ರಕ್ಕೆ ಸಿಕ್ಕಿದೆ. ನೀಲ್ ಟೇಕಿಂಗ್, ಪ್ರಭಾಸ್ ಪವರ್‌ಫುಲ್ ಪರ್ಫಾರ್ಮನ್ಸ್, ರವಿ ಬಸ್ರೂರು ಬಿಜಿಎಂ ಸ್ಯಾಂಪಲ್‌ಗಾಗಿ ಸಿನಿರಸಿಕರು ಕಾಯ್ತಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಹೊಂಬಾಳೆ ಸಂಸ್ಥೆ 'ಸಲಾರ್' ಸಿನಿಮಾ ನಿರ್ಮಿಸ್ತಿದೆ. ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಈಗಾಗಲೇ ಆ ಸಮಯ ಬಂದಿದೆ. ಆಗಸ್ಟ್ ಕೊನೆ ವಾರ ಅಲ್ಲದೇ ಇದ್ದರೂ ಸೆಪ್ಟೆಂಬರ್ ಮೊದಲ ವಾರ ಸಿನಿಮಾ ಟ್ರೈಲರ್ ರಿವೀಲ್ ಆಗಲಿದೆ. ಅಂದರೆ ಮುಂದಿನ ವಾರಾಂತ್ಯವೇ ಬಂದರು ಅಚ್ಚರಿ ಪಡಬೇಕಿಲ್ಲ.
ಸದ್ಯ ಹೊಂಬಾಳೆ ಸಂಸ್ಥೆಯ ಯೂಟ್ಯೂಬ್ ಚಾನಲ್‌ನಲ್ಲಿ ಸ್ಪೆಷಲ್ ವಿಡಿಯೋ ರಿಲೀಸ್ ಆಗಿದೆ. ಟೀಸರ್ ಝಲಕ್ ಜೊತೆಗೆ ಹೊಸ ವಿಷ್ಯುವಲ್ಸ್ ಸೇರಿಸಿ ಸಣ್ಣ ಶಾರ್ಟ್ಸ್ ಶೇರ್ ಮಾಡಲಾಗಿದೆ. ಕೊನೆಯಲ್ಲಿ 'ಸಲಾರ್' ಟ್ರೈಲರ್ ಕಮ್ಮಿಂಗ್ ಸೂನ್ ಎಂದು ಬರೆಯಲಾಗಿದೆ. ಅಲ್ಲಿಗೆ ಟ್ರೈಲರ್ ರಿಲೀಸ್ ಡೇಟ್ ಹತ್ತಿರವಾಗುತ್ತಿರೋದು ಕನ್ಫರ್ಮ್ ಆಗಿದೆ. ಸಿನಿಮಾ ರಿಲೀಸ್‌ಗೆ ಒಂದು ತಿಂಗಳು ಬಾಕಿ ಇರುವಾಗ ದೊಡ್ಡ ಸಿನಿಮಾಗಳ ಟ್ರೈಲರ್ ರಿಲೀಸ್ ಆಗುತ್ತದೆ. ಅಲ್ಲಿಂದ ಪ್ರಮೋಷನ್ ಹೆಚ್ಚು ಮಾಡಲಾಗುತ್ತದೆ. 'ಸಲಾರ್' ವಿಚಾರದಲ್ಲಿ ಹೊಂಬಾಳೆ ಸಂಸ್ಥೆ ಇದನ್ನು ಅನುಸರಿಸುತ್ತಿದೆ.
'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ಬಣ್ಣ ಹಚ್ಚಿದ್ದಾರೆ. ಕಳೆದ ಮೂರು ದಿನಗಳಿಂದ ತಮ್ಮ ಪಾತ್ರಕ್ಕಾಗಿ ಆಕೆ ಡಬ್ಬಿಂಗ್ ಮಾಡುತ್ತಿದ್ದಾರೆ. ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ದೇವರಾಜ್, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭುವನ್ ಗೌಡ ಸಿನಿಮಾಟೋಗ್ರಫಿ, ಶಿವಕುಮಾರ್ ಆರ್ಟ್ ವರ್ಕ್ ಚಿತ್ರಕ್ಕಿದೆ.
'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ನಟನೆಯ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಲಿಲ್ಲ. ಇತ್ತೀಚೆಗೆ ಬಂದ 'ಆದಿಪುರುಷ್' ಕೂಡ ನಿರಾಸೆ ಮೂಡಿಸಿತ್ತು. ಹಾಗಾಗಿ ಯಂಗ್ ರೆಬಲ್ ಸ್ಟಾರ್ ಅಭಿಮಾನಿಗಳು 'ಸಲಾರ್' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ವಿದೇಶದಲ್ಲಿ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಟಿಕೆಟ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.
ಪ್ರಭಾಸ್, ಪ್ರಶಾಂತ್ ನೀಲ್ ಇಬ್ಬರು 1000 ಕೋಟಿ ರೂ. ಕಲೆಕ್ಷನ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹಾಗಾಗಿ ಇಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು 1000 ಕೋಟಿ ರೂ. ಸಿನಿಮಾ ನಿರೀಕ್ಷಿಸಲಾಗುತ್ತಿದೆ. ಇನ್ನು ಈಗಾಗಲೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಟ್ರೈಲರ್‌ನಿಂದ ಮತ್ತಷ್ಟು ಸದ್ದು ಮಾಡುವ ಸಾಧ್ಯತೆಯಿದೆ.


Click it and Unblock the Notifications











